×
Ad

ಕಾಂಗ್ರೆಸ್ ನಾಯಕರಿಗೆ ತಲೆ ನೋವು ತಂದಿರುವ ರಾಹುಲ್‌ರ ’ಸಾವರ್ಕರ್’ ಹೇಳಿಕೆಗಳು

Update: 2016-03-25 14:13 IST

ನವದೆಹಲಿ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ಇತ್ತೀಚೆಗೆ ಸ್ವಾತಂತ್ರ್ಯ ಹೋರಾಟಗಾರ ವಿನಾಯಕ್ ದಾಮೋದರ್ ಸಾವರ್ಕರ್ ವಿಚಾರವಾಗಿ ನೀಡಿದ ಆಕ್ರಮಣಕಾರಿ ಹೇಳಿಕೆಗಳುಪಕ್ಷದ ಹಿರಿಯ ನಾಯಕರುಗಳಿಗೆ ತಲೆನೋವು ತಂದಿದ್ದು ಇದರಿಂದ ಮಹಾರಾಷ್ಟ್ರೀಯರ ಭಾವನೆಗಳಿಗೆ ಘಾಸಿಯಾಗುವ ಸಂಭವವಿರುವುದರಿಂದ ಎಚ್ಚರಿಕೆ ವಹಿಸುವ ಅಗತ್ಯವಿದೆಯೆಂದೂ ಅವರುಪಕ್ಷವನ್ನು ಆಗ್ರಹಿಸಿದ್ದಾರೆ.

ಸಾವರ್ಕರ್ ಆರೆಸ್ಸೆಸ್ ಸದಸ್ಯರಾಗಿರಲಿಲ್ಲದಿದ್ದರೂ ರಾಹುಲ್ ಮತ್ತವರ ಸಹವತಿಗಳು ಬಿಜೆಪಿ ಹಾಗೂ ಸಂಘ ಪರಿವಾರವನ್ನು ಟೀಕಿಸಲು ಅವರ ಹೆಸರು ಬಳಸಿದ್ದಾರೆ. ಭಗತ್ ಸಿಂಗ್ ಮತ್ತಾತನ ಸಹವರ್ತಿಗಳಿಗೆ ಗಲ್ಲು ಶಿಕ್ಷೆ ವಿಧಿಸಲಾದ ದಿನವಾದ ಮಾರ್ಚ್ 23ರಂದು ಕಾಂಗ್ರೆಸ್ ಸಾವರ್ಕರ್ ಅವರನ್ನು ಟೀಕಿಸಿದ್ದು, ಬ್ರಿಟಿಷ್ ಆಡಳಿತಕ್ಕೆ ತಾನು ನಿಷ್ಠನಾಗಿದ್ದೇನೆಂದುಅಂಡಮಾನ್ ಜೈಲಿನಲ್ಲಿರುವಾಗ ಸಾವರ್ಕರ್1913ರಲ್ಲಿ ನೀಡಿರುವ ಪಿಟಿಶನ್ ಬಗ್ಗೆ ಕಾಂಗ್ರೆಸ್ ಪ್ರಸ್ತಾಪಿಸಿದೆಯಲ್ಲದೆ ಇದನ್ನು ಭಗತ್ ಸಿಂಗ್ 1931ರಲ್ಲಿಬರೆದಿದ್ದಪಿಟಿಷನ್‌ಗೆ ಹೋಲಿಸಿದೆ. ‘‘ಬ್ರಿಟಿಷ್ ರಾಷ್ಟ್ರ ಮತ್ತು ಭಾರತ ರಾಷ್ಟ್ರದ ನಡುವೆ ಯುದ್ಧವಿದ್ದು, ನಾವು ಆ ಯುದ್ಧದಲ್ಲಿ ಭಾಗವಹಿಸಿರುವುದರಿಂದ ನಾವು ಯುದ್ಧ ಕೈದಿಗಳು,’’ ಎಂದು ಅದರಲ್ಲಿ ಬರೆಯಲಾಗಿತ್ತು.

ಒಂದು ವರ್ಷದ ಹಿಂದೆ ಮಧ್ಯಪ್ರದೇಶದ ಕಾಂಗ್ರೆಸ್ ಶಾಸಕರು ಬಿಜೆಪಿ ಶಾಸಕರೊಂದಿಗೆ ಕೈಜೋಡಿಸಿ. ಅಂಡಮಾನಿನಲ್ಲಿರುವ ಸಾವರ್ಕರ್ ಸ್ಮಾರಕಕ್ಕೆ ಭೇಟಿ ನೀಡಲುದ್ದೇಶಿಸುವವರಪ್ರಯಾಣ ವೆಚ್ಚ ಭರಿಸುವ ನಿರ್ಧಾರನ್ನು ಬೆಂಬಲಿಸಿದ್ದರು.ಫೆಬ್ರವರಿ 2003ರಲ್ಲಿ ವಾಜಪೇಯಿ ಸರಕಾರ ಅಧಿಕಾರದಲ್ಲಿದ್ದಾಗಸಂಸತ್ತಿನ ಸೆಂಟ್ರಲ್ ಹಾಲಿನಲ್ಲಿ ಸಾವರ್ಕರ್ ಭಾವಚಿತ್ರವನ್ನಿಡಲುನಿರ್ಧರಿಸಿದ್ದಾಗ ಕಾಂಗ್ರೆಸ್ ಕೂಡ ಅದಕ್ಕೆ ತನ್ನ ಒಪ್ಪಿಗೆ ನೀಡಿತ್ತು.

ಈ ತಿಂಗಳ ಆರಂಭಧಲ್ಲಿ ಲೋಕಸಭೆಯಲ್ಲಿ ಚರ್ಚೆಯೊಂದರ ವೇಳೆ ರಾಹುಲ್‌ರವರು ಆಡಳಿತ ಪಕ್ಷವನ್ನುದ್ದೇಶಿಸಿ ‘ನಮಗೆ ಗಾಂಧಿಯಿದ್ದರೆ, ನಿಮಗೆ ಸಾವರ್ಕರ್’ಎಂದು ಹೇಳಿ ಬಿಜೆಪಿ ಸದಸ್ಯರನ್ನು ಕರೆಳಿಸಿದ್ದರು. ಅದಕ್ಕೆ ಕ್ಷಮಾಪಣೆ ಕೋರಬೇಕೆಂದು ಬಿಜೆಪಿ ಆಗ್ರಹಿಸಿದ್ದರೂ ಜಗ್ಗದ ರಾಹುಲ್ ‘‘ನಾನು ತಪ್ಪು ಹೇಳಿದ್ದೇನೇನು?ಸಾವರ್ಕರ್ ನಿಮ್ಮವರಲ್ಲವೇ? ಅವರನ್ನು ಕೈಬಿಟ್ಟಿದ್ದೀರಾ? ಹಾಗೆ ಮಾಡಿದ್ದರೆ ನೀವು ಒಳ್ಳೆಯದನ್ನೇ ಮಾಡಿದ್ದೀರಿ’’ಎಂದು ಹೇಳಿದ್ದರು.

ಅಂದಿನಿಂದ ಕಾಂಗ್ರೆಸ್ ಪಕ್ಷದ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಸಾವರ್ಕರ್ ಅವರನ್ನು ‘ನಕಲಿ’ ಸ್ವಾತಂತ್ರ್ಯ ಹೋರಾಟಗಾರನೆಂದು ಬಣ್ಣಿಸಲಾಗಿದೆ. ಮಾರ್ಚ್ 5ರಂದು ಟ್ವೀಟೊಂದರಲ್ಲಿ ಪಕ್ಷ ಹೀಗೆ ಹೇಳಿದೆ -‘‘ಸರ್ದಾರ್ ಪಟೇಲರು ಬಿಜೆಪಿಯ ದೇಶಭಕ್ತ ವೀರ್ ಸಾವರ್ಕರ್ ಬಗ್ಗೆ ಹೀಗೆ ಹೇಳಿದ್ದರು: ಮಹಾತ್ಮ ಗಾಂದಿಯವರ ಹತ್ಯೆಯಲ್ಲಿ ಸಾವರ್ಕರ್ ಶಾಮೀಲಾಗಿದ್ದರು. ಇಲ್ಲಿಯನಕ ಇಂತಹ ಆರೋಪವನ್ನು ಸಾಬೀತು ಪಡಿಸಲು ಯಾವುದೇ ಸಾಕ್ಷ್ಯವಿಲ್ಲ. ಗಾಂಧಿಯನ್ನು ಹತ್ಯೆ ಮಾಡಿದ ನಾಥೂರಾಂ ಗೋಡ್ಸೆಸಾವರ್ಕರ್ ಅವರಿಗೆ ತುಂಬ ಹತ್ತಿರದವರು. ಒಂದು ನಿರ್ದಿಷ್ಟ ಬ್ರ್ಯಾಂಡಿನ ಹಿಂದುತ್ವಕ್ಕೆ ರಾಜಕೀಯ ಅಜೆಂಡಾ ನೀಡಿದ ವ್ಯಕ್ತಿ ಅವರೆಂದು ಕೆಲವು ರಾಜಕೀಯ ಶಾಸ್ತ್ರಜ್ಞರು ಅಭಿಪ್ರಾಯ ಪಡುತ್ತಾರೆ.’’

ದೇಶಭಕ್ತಿಯ ವಿಚಾರದಲ್ಲಿ ದೇಶಾದ್ಯಂತ ವಿವಾದದ ಕಿಚ್ಚು ಹಬ್ಬಿರುವಂತೆಯೇಕಾಂಗ್ರೆಸ್ ಸಾವರ್ಕರ್ ವಿಷಯವನ್ನು ಎತ್ತಿ ಉದಾರವಾದಿಗಳ ಬೆಂಬಲ ಪಡೆಯುವ ಯತ್ನ ಮಾಡುತ್ತಿದೆಯಲ್ಲದೆಆರೆಸ್ಸೆಸ್ ಸಿದ್ಧಾಂತಕ್ಕೆ ಸವಾಲೊಡ್ಡಲು ಬಾಪು ಸದ್ಭಾವನಾ ಹಾಗೂ ಶಿಕ್ಷಾ ಟ್ರಸ್ಟ್ ಸ್ಥಾಪಿಸುವ ಶಿಫಾರಸ್ಸು ಮಾಡಿರುವ 2003ರ ಶಿಮ್ಲಾ ಸಂಕಲ್ಪ್ ವಿಚಾರವನ್ನೂ ಮೇಲಕ್ಕೆತ್ತುವ ಯತ್ನ ಮಾಡುತ್ತಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News