ತನ್ನನ್ನು ಆರೆಸ್ಸೆಸ್, ಯುಡಿಎಫ್ ಬಲಿಪಶು ಮಾಡಿದೆ: ಕಮ್ಯೂನಿಸ್ಟ್ ನಾಯಕ ಪಿ.ಜಯರಾಜನ್
ವಡಕ್ಕರ, ಮಾರ್ಚ್, 25: "ಪ್ರತಿ ನಿಮಿಷವೂ ಆಯಸ್ಸು ದೀರ್ಘಗೊಳ್ಳುವ ಬದುಕು ತನ್ನದಾಗಿದೆ. 1099ರಲ್ಲಿ ಮರಣದೊಂದಿಗೆ ಮುಖಾಮುಖಿ ನಡೆಸಿದೆ. ಈಗ ಇದು ಆರೆಸ್ಸೆಸ್ ಮತ್ತು ಯುಡಿಎಫ್ ಸಂಚನ್ನು ಮೀರಿ ನಿಂತಿದ್ದೇನೆ. ಕಮ್ಯುನಿಸ್ಟ್‌ಕಾರರ ಜೀವನವೇ ಹೀಗೆ ಇದೆ "ಎಂದು ಕದಿರೂರು ಮನೋಜ್ ಹತ್ಯೆ ಪ್ರಕರಣದಲ್ಲಿ ಜಾಮೀನು ಪಡೆದ ನಂತರ ಸಹೋದರಿ ಅಡ್ವೊಕೇಟ್ ಪಿ. ಸತಿದೇವಿಯವರ ವಡಗರ-ಚೋರೋಟ್ ಮನೆಯಲ್ಲಿ ಚಿಕಿತ್ಸೆಯಲ್ಲಿರುವ ಸಿಪಿಐಎಂ ಕಣ್ಣೂರು ಜಿಲ್ಲಾ ಸೆಕ್ರಟರಿ ಪಿ. ಜಯರಾಜನ್ ಹೇಳಿರುವುದಾಗಿ ವರದಿಯಾಗಿದೆ.
ಏನೆಲ್ಲ ಚರ್ಚೆಗಳು ನಡೆದವು. ರೋಗ ಒಂದು ನಾಟಕವಾಗಿದೆ ಎನ್ನಲಾಯಿತು. ಆದರೆ ನ್ಯಾಯಾಲಯಕ್ಕೆ ವಿಷಯ ಮನವರಿಕೆಯಾಯಿತು. ಇದು ತನಗೆ ಜಾಮೀನು ಸಿಗಲು ಕಾರಣವಾಗಿದೆ. ನಾಲ್ಕುಬಾರಿ ಆಂಜಿಯೋಪ್ಲಾಸಿಯನ್ನು ನನಗೆ ಮಾಡಲಾಗಿದೆ. ಹಲವಾರು ಆರೋಗ್ಯ ಸಮಸ್ಯೆ ನನಗಿದೆ. ಎಲ್ಲವೂ ಗೊತ್ತಿದ್ದೂ ಚಿಕಿತ್ಸೆ ದೊರೆಯದಂತೆ ನೋಡಿಕೊಳ್ಳಲು ಪ್ರಯತ್ನಿಸಲಾಯಿತು. ಇನ್ನೆಂದೂ ಹೊರಬರಬಾರದೆಂಬ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುತ್ತಿತ್ತು. ಈ ಆರೆಸ್ಸೆಸ್‌ನ ಇಷ್ಟಕ್ಕೆ ಅನುಗುಣವಾಗಿ ಯುಡಿಎಫ್ ಜೊತೆಗೂಡಿದೆ. ಎಂದು ಜಯರಾಜನ್ ಆರೋಪಿಸಿದ್ದಾರೆ. ನೀವು ಚುನಾವಣೆಯಲ್ಲಿ ಸ್ಪರ್ಧಿಸುತ್ತೀರಾ ಎಂದು ಪ್ರಶ್ನೆಗೆ "ಆಯುರ್ವೇದ ಚಿಕಿತ್ಸೆ ಮುಂದುವರಿಸಲಾಗಿದೆ. ಸಿಪಿಐಎಂ ಕಾರ್ಯಕರ್ತರಿಗೆ ಸಂಬಂಧಿಸಿ ಯಾವ ಕ್ಷೇತ್ರದಲ್ಲಿ ಕಾರ್ಯವೆಸಗಬೇಕೆಂಬುದನ್ನು ಪಕ್ಷ ತೀರ್ಮಾನಿಸುತ್ತದೆ. ಇಷ್ಟು ದಿನಗಳವರೆಗೂ ಪಕ್ಷದ ನಿರ್ದೇಶವನ್ನು ಪಾಲಿಸಿದ್ದೇನೆ" ಎಂದು ಉತ್ತರಿಸಿದರೆಂದು ವರದಿಯಾಗಿವೆ.