ಸಿಯಾಚಿನ್‌ನಲ್ಲಿ ಹಿಮಪಾತ; ಓರ್ವ ಸೈನಿಕ ನಾಪತ್ತೆ
Update: 2016-03-25 15:09 IST
ಶ್ರೀನಗರ, ಮಾ.25 :ಪಶ್ಚಿಮ ಸಿಯಾಚಿನ್‌ನ ಟುರ್ಟುಕ್‌ನಲ್ಲಿ ಸಂಭವಿಸಿದ ಹಿಮಪಾತದಿಂದಾಗಿ ಓರ್ವ ಸೈನಿಕ ನಾಪತ್ತೆಯಾಗಿರುವ ಘಟನೆ ವರದಿಯಾಗಿದೆ
ಯೋಧರು .ಪ್ಯಾಟ್ರೋಲ್ ನಡೆಸುತ್ತಿದ್ದಾಗ ಹಿಮಪಾತ ಸಂಭವಿಸಿದೆ. ಇದರಿಂದಾಗಿ ಭಾರತದ ಸೇನೆಯ ಓರ್ವ ಯೋಧ ನಾಪತ್ತೆಯಾಗಿದ್ದಾರೆ.ಆತನನ್ನು ಪತ್ತೆ ಹಚ್ಚಲು ಕಾರ್ಯಾಚರಣೆ ಮುಂದುವರಿದಿದೆ. ಹಿಮಪಾತದಿಂದಾಗಿ ಹಲವು ಮಂದಿ ಸೈನಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಓರ್ವ ಸೈನಿಕನನ್ನು ರಕ್ಷಿಸಲಾಗಿದ್ದು, ಗಂಭೀರ ಗಾಯಗೊಂಡಿರುವ ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಸಾಗಿಸಲಾಗಿದೆ.