×
Ad

ಹ್ಯಾಪಿ ಗುಡ್ ಫ್ರೈಡೆ ಎಂದು ಶುಭಾಷಯ ಕೋರಿ ಮಂಗಳಾರತಿ ಮಾಡಿಸಿಕೊಂಡ ಕೇಂದ್ರ ಬಿಜೆಪಿ ಮುಖಂಡರು

Update: 2016-03-25 22:17 IST

ಹೊಸದಿಲ್ಲಿ , ಮಾ. 25: ಏಸುಕ್ರಿಸ್ತನನ್ನು ಶಿಲುಬೆಗೇರಿಸಿದ್ದನ್ನು ನೆನೆಯುವ ದಿನವಾದ ಗುಡ್ ಫ್ರೈಡೆಗೆ " ಸಂತಸ ತರಲಿ "(“wishing happiness” ) ಎಂದು ಶುಭಾಷಯ ಕೋರಿದ್ದ ಬಿಜೆಪಿಯ ಇಬ್ಬರು ಹಿರಿಯ ನಾಯಕರು  ತೀವ್ರ ಟೀಕೆ ಎದುರಿಸಿದ್ದಾರೆ. ಕೇಂದ್ರ ಸಂಸ್ಕೃತಿ ಸಚಿವ ಮಹೇಶ್ ಶರ್ಮ ಹಾಗು ಪಕ್ಷದ ನಾಯಕ ಶಹನವಾಝ್ ಹುಸೇನ್ ಈ ವಿವಾದಾಸ್ಪದ ಟ್ವೀಟ್ ಗಳನ್ನು ಹಾಕಿ ಮುಜುಗರ ಎದುರಿಸಿದವರು. ಶರ್ಮ ಬಳಿಕ ತನ್ನ ಟ್ವೀಟ್ ಅನ್ನು ಡಿಲೀಟ್ ಮಾಡಿದರು. 

“May you be blessed with goodness and prosperity. Happy #GoodFriday,” ಎಂದು ಶರ್ಮ ಟ್ವೀಟ್ ಮಾಡಿದರು. ಹುಸೇನ್ “Warm Greetings on #GoodFriday to all of you!”  ಎಂದು ಟ್ವೀಟ್ ಮಾಡಿದರು. ಇದು ಟ್ವಿಟ್ಟರ್ ನಲ್ಲಿ ತೀವ್ರ ಚರ್ಚೆಗೆ ಕಾರಣವಾಯಿತು. ಬಿಜೆಪಿ ನಾಯಕರಿಗೆ " ಹೇಗೆ ಶುಭಾಷಯ ಹೇಳಬಾರದು "  ಎಂಬ ಬಗ್ಗೆ ತರಬೇತಿ ನೀಡಬೇಕು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಈ ಸಂದೇಶ ಕೀಳು ಅಭಿರುಚಿಯದ್ದು ಎಂದು ದೂರಿದರು. 

ಶರ್ಮ ಬಳಿಕ ತನ್ನ ತಪ್ಪನ್ನು ತಿದ್ದಿಕೊಂಡರು. “I wish you all blessings of #GoodFriday as a dedication to the sacrifice of Lord Jesus Christ and to remember his noble and pious thoughts.” ಎಂದು ಅವರು ಟ್ವೀಟ್ ಮಾಡಿ ಜಾರಿಕೊಂಡರು. 

ಹುಸೇನ್ ಗೆ ಪ್ರತಿಕ್ರಿಯಿಸಿದ ನವಾಬ್  ಮಲಿಕ್ , " ನೀವು ಬೈಬಲ್ ಓದಿಲ್ಲದಿದ್ದರೆ ಕುರ್ ಆನ್ ಆದರೂ ಓದಿ. ಆಗ ನಿಮಗೆ ಗುಡ್ ಫ್ರೈಡೆ ಹಾಗು ಕ್ರೈಸ್ತರ ಬಗ್ಗೆ ತಿಳಿಯುತ್ತದೆ " ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News