×
Ad

ಫಾರ್ಚುನ್ ಜಾಗತಿಕ ಅತಿ ಶ್ರೇಷ್ಠ ನಾಯಕರ ಪಟ್ಟಿಯಲ್ಲಿ ಕೇಜ್ರಿವಾಲ್

Update: 2016-03-25 23:42 IST

ಮೋದಿಯ ಹೆಸರೇ ಇಲ್ಲ!

ಹೊಸದಿಲ್ಲಿ, ಮಾ.25: ದಿಲ್ಲಿಯ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ‘ಫಾರ್ಚುನ್’ ನಿಯತಕಾಲಿಕೆಯ ವಿಶ್ವದ 50 ಮಂದಿ ಅತಿ ಶ್ರೇಷ್ಠ ನಾಯಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಅಮೆಜಾನ್‌ನ ಸಿಇಒ ಜೆಫ್ ಬಿರೆಸ್ ಅಗ್ರ ಸ್ಥಾನದಲ್ಲಿರುವ ಈ ಪಟ್ಟಿಯಲ್ಲಿ ಸ್ಥಾನ ಪಡೆದಿರುವ ಏಕೈಕ ಭಾರತೀಯ ಅವರಾಗಿದ್ದಾರೆ.

ಫಾರ್ಚುನ್‌ನ 3ನೆಯ ಹಾಗೂ ‘ವಿಶ್ವದ 50 ಶ್ರೇಷ್ಠ ನಾಯಕರ’ ಪಟ್ಟಿಯು ವ್ಯಾಪಾರ, ಸರಕಾರ, ಮಾನವ ಪ್ರೇಮ ಹಾಗೂ ಕಲೆಗಳ ಕ್ಷೇತ್ರಗಳಲ್ಲಿ ವಿಶ್ವವನ್ನೇ ಬದಲಾವಣೆ ಮಾಡಿದವರು ಹಾಗೂ ಆ ರೀತಿ ಮಾಡಲು ಇತರರನ್ನು ಪ್ರೇರೇಪಿಸಿದ ವಿಶ್ವಾದ್ಯಂತದ ಪುರುಷರು ಹಾಗೂ ಮಹಿಳೆಯರ ಹೆಸರುಗಳನ್ನೊಳಗೊಂಡಿದೆ.

47ರ ಹರೆಯದ, ಆಮ್ ಆದ್ಮಿ ಪಕ್ಷದ ನಾಯಕ ಪಟ್ಟಿಯಲ್ಲಿ 42ನೆ ಸ್ಥಾನ ಪಡೆದಿದ್ದು, ಭಾರತದ ಏಕೈಕ ನಾಯಕನಾಗಿದ್ದಾರೆ. ಆದಾಗ್ಯೂ, ದಕ್ಷಿಣ ಕೆರೋಲಿನದ ಭಾರತೀಯ ಅಮೆರಿಕನ್ ಗವರ್ನರ್ ನಿಕ್ಕಿ ಹೇಲಿ 17ನೆ ಹಾಗೂ ಇನ್ನೊಬ್ಬರು ಭಾರತೀಯ ಅಮೆರಿಕನ್ ರೇಶಮ್ ಸೌಚಾನಿ 20ನೆ ಸ್ಥಾನಗಳನ್ನು ಪಡೆದಿದ್ದಾರೆ.

ಹೊಸದಿಲ್ಲಿಯಲ್ಲಿ ಪರ್ಯಾಯ ದಿನಗಳಲ್ಲಿ ಸಮ ಹಾಗೂ ಬೆಸ ನೋಂದಣಿ ಸಂಖ್ಯೆಗಳ ವಾಹನಗಳಿಗೆ ಅವಕಾಶ ನೀಡಿದ ಯೋಜನೆಯ ಮೂಲಕ ರಾಜಧಾನಿಯ ವಾಯು ಮಾಲಿನ್ಯ ತಡೆಗೆ ಪ್ರಯತ್ನಿಸಿದ ಶ್ರೇಯವನ್ನು ಕೇಜ್ರಿವಾಲ್‌ಗೆ ಫಾರ್ಚುನ್ ಪತ್ರಿಕೆ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News