13 ನೆ ಶತಮಾನದ ರಾಜ 16 ನೆ ಶತಮಾನದಲ್ಲಿ ಮೊಗಲರನ್ನು ಅಸ್ಸಾಂ ನಿಂದ ಓಡಿಸಿದ !
ಇನ್ನು ಬಿಜೆಪಿ ನಾಯಕರು ಬರೆದ ಹೊಸ ಇತಿಹಾಸವೇ ಬರುವ ಸಾಧ್ಯತೆ ಇದೆ ! ಕಳೆದ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ನರೇಂದ್ರ ಮೋದಿ ಅವರು ಇಸ್ಲಾಮಾಬಾದ್ ನ ವಾಯವ್ಯದಲ್ಲಿರುವ ತಕ್ಷಿಲವನ್ನು ಬಿಹಾರಕ್ಕೆ ತಂದು ನಿಲ್ಲಿಸಿ, ಅಲೆಕ್ಸಾಂಡರ್ ಕೂಡ ಗಂಗಾ ನದಿ ದಡದಲ್ಲಿ ಕೊನೆಯುಸಿರೆಳೆದ ಎಂದು ಹೇಳಿ ಬೆಚ್ಚಿ ಬೀಳಿಸಿದ ಬಳಿಕ ಈಗ ಅವರ ಅತ್ಯಾಪ್ತ ಹಾಗು ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರ ಸರದಿ.
ಶುಕ್ರವಾರ ಅಸ್ಸಾಂ ನ ಶಿವಸಾಗರ್ ನಲ್ಲಿ ಚುನಾವಣಾ ಪ್ರಚಾರ ಭಾಷಣ ಮಾದುತ್ತಿದ್ದ ಅಮಿತ್ ಷಾ " ಅಸ್ಸಾಂ ವೀರರ ನಾಡು. ಸುಖಾಪ ಮೊಗಲರನ್ನು ಅಸ್ಸಾಂ ನಿಂದ ೧೭ ಬಾರಿ ಓಡಿಸಿದ ಆದರೆ ಕಾಂಗ್ರೆಸ್ ಈ ರಾಜ್ಯವನ್ನು ಬಾಂಗ್ಲಾದೇಶಿ ಅತಿಕ್ರಮಣಕಾರರ ಸ್ವರ್ಗ ಮಾಡಿಟ್ಟಿದೆ " ಎಂದು ಬಿಟ್ಟರು.
ಆದರೆ ಸಮಸ್ಯೆ ಏನೆಂದರೆ , ಷಾ ಹೇಳುತ್ತಿರುವ ಸುಖಾಪ ರಾಜ ಆಳ್ವಿಕೆ ನಡೆಸಿದ್ದು 13 ನೆ ಶತಮಾನದಲ್ಲಿ. ಮೊಗಲರು ಭಾರತದಲ್ಲಿ ಆಳ್ವಿಕೆ ಪ್ರಾರಂಭಿಸಿದ್ದೇ 16 ನೆ ಶತಮಾನದಲ್ಲಿ. ಅಂದರೆ ಷಾ ಪ್ರಕಾರ ತನ್ನ ಮರಣದ 300 ವರ್ಷಗಳ ಬಳಿಕ ಸುಖಾಪ ಮರಳಿ ಬಂದು ಮೊಗಲರನ್ನು ಓಡಿಸಿದ !
ಟೈಮ್ಸ್ ಆಫ್ ಇಂಡಿಯಾ ವರದಿ ಪ್ರಕಾರ ಸುಖಾಪ ತನ್ನ ಸಾಮ್ರಾಜ್ಯ ಸ್ಥಾಪಿಸಿದ್ದು 1228 ರಲ್ಲಿ. ಬಾಬರ್ ಮಿರ್ಝ ಮೊಗಲ್ ಸಾಮ್ರಾಜ್ಯದ ಪ್ರಾರಂಭ ಮಾಡಿದ್ದು ಪಾಣಿಪಟ್ ನಲ್ಲಿ 1526 ರಲ್ಲಿ .
courtesy : scroll.in