ಉತ್ತರಾಖಂಡ್‌ನಲ್ಲಿ ಮಾ.31ರಂದು ಬಹುಮತ ಸಾಬೀತುಪಡಿಸುವ ಏಕಸದಸ್ಯ ಪೀಠದ ಆದೇಶಕ್ಕೆ ಹೈಕೋರ್ಟ್‌ನ ವಿಭಾಗೀಯ ಪೀಠ ತಡೆ
ಹೊಸದಿಲ್ಲಿ, ಮಾ. 30:ಉತ್ತರಾಖಂಡ್ ನಲ್ಲಿ ಮುಖ್ಯಮಂತ್ರಿ ಹರೀಶ್ ರಾವತ್ ಅವರಿಗೆ ಸದನದಲ್ಲಿ ಮಾ.31ರಂದು ಬಹುಮತ ಸಾಬೀತು ಪಡಿಸಲು ಉತ್ತರಾಖಂಡ್ ನ ಹೈಕೋರ್ಟ್‌ನ ಏಕಸದಸ್ಯ ನೀಡಿದ್ದ ಆದೇಶಕ್ಕೆ ಇಂದು ಹೈಕೋರ್ಟ್‌ನ ವಿಭಾಗೀಯ ಪೀಠ ತಡೆ ವಿಧಿಸಿದೆ.
ಮುಂದಿನ ವಿಚಾರಣೆಯನ್ನು ಎಪ್ರಿಲ್ 6ಕ್ಕೆ ಹೈಕೋರ್ಟ್‌ನ ವಿಭಾಗೀಯ ಪೀಠ ಮುಂದೂಡಿದೆ.
ರಾಜಕೀಯ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರವು ಸಂವಿಧಾನ ಬಿಕ್ಕಟ್ಟು ತಲೆದೋರಿದೆ ಎಂಬ ನಿರ್ಧಾರ ಕೈಗೊಂಡು ರಾಷ್ಟ್ರಪತಿ ಆಡಳಿತ ಜಾರಿಗೊಳಿಸಿರುವ ಕ್ರಮವನ್ನು ಪ್ರಶ್ನಿಸಿ ಕಾಂಗ್ರೆಸ್ ಪಕ್ಷ ಸೊಮವಾರ ಉತ್ತರಾಖಂಡ್ ಹೈಕೋರ್ಟ್ ಮೊರೆ ಹೋಗಿತ್ತು.ಅರ್ಜಿಯ ವಿಚಾರಣೆ ನಡೆಸಿದ ಹೈಕೊರ್ಟ್‌ನ ಏಕಸದಸ್ಯ ಪೀಠ ಮುಖ್ಯಮಂತ್ರಿ ಹರೀಶ್ ರಾವತ್‌ಗೆ ಮಾ.31ರಂದು ಬಹುಮತ ಸಾಬೀತುಪಡಿಸಲು ಆದೇಶ ನೀಡಿತ್ತು. ಏಕಸದಸ್ಯ ಪೀಠದ ಆದೇಶ ವಿರುದ್ಧ ಬಿಜೆಪಿ ಹೈಕೋರ್ಟ್‌ನ ವಿಭಾಗೀಯ ಪೀಠದ ಮೊರೆ ಹೋಗಿತ್ತು.
ಮುಖ್ಯಮಂತ್ರಿ ಹರೀಶ್ ರಾವತ್ ಅವರ ವಿರುದ್ಧ ಒಂಬತ್ತು ಕಾಂಗ್ರೆಸ್ ಶಾಸಕರು ಬಂಡಾಯವೆದ್ದು ರಾಜಿಕೀಯ ಬಿಕ್ಕಟ್ಟು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾರ್ಚ್ 28ರಂದು ವಿಧಾನ ಸಭೆಯಲ್ಲಿ ಬಹುಮತ ಸಾಬೀತು ಪಡಿಸುವಂತೆ ರಾಜ್ಯಪಾಲರು ಸೂಚಿಸಿದ್ದರು. ಆದರೆ ಬಹುಮತ ಸಾಬೀತಿಗೆ ಕೇವಲ 24 ಗಂಟೆ ಬಾಕಿ ಇರುವಾಗ ರಾಷ್ಟ್ರಪತಿ ಆಡಳಿತ ಹೇರಲಾಗಿತ್ತು.
ಉತ್ತರಾಖಂಡ್‌ನಲ್ಲಿ ರಾಷ್ಟ್ರಪತಿ ಆಡಳಿ ಹೇರಿದ ಬೆನ್ನಲ್ಲೇ ವಿಧಾನ ಸಭೆಯ ಸ್ಪೀಕರ್ ಗೋವಿಂದ್ ಸಿಂಗ್ ಕುಂಜ್ವಾಲ್ ಅವರು ಮಾಜಿ ಮುಖ್ಯಮಂತ್ರಿ ವಿಜಯ್ ಬಹುಗುಣ ಸೇರಿದಂತೆ ಕಾಂಗ್ರೆಸ್‌ನ 9 ಬಂಡುಕೋರ ಶಾಸಕರನ್ನು ಅನರ್ಹಗೊಳಿಸಿದ್ದರು