ಸ್ಯಾಮಸಂಗ್ ಕಂಪೆನಿ ವಿರುದ್ಧ್ದ ಪೀಲೆ ಮೊಕದ್ದಮೆ

Update: 2016-03-30 18:33 GMT

ರಿಯೊ ಡಿಜನೈರೊ, ಮಾ.30: ತನ್ನ ಅನುಮತಿ ಪಡೆಯದೇ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ತನ್ನ ಭಾವಚಿತ್ರವಿರುವ ಜಾಹೀರಾತನ್ನು ಪ್ರಕಟಿಸಿರುವ ಸ್ಯಾಮ್‌ಸಂಗ್ ಇಲೆಕ್ಟ್ರಾನಿಕ್ಸ್ ಕಂಪೆನಿಯ ವಿರುದ್ಧ ಬ್ರೆಝಿಲ್ ಫುಟ್ಬಾಲ್ ದಂತಕತೆ ಪೀಲೆ ಮೊಕದ್ದಮೆ ದಾಖಲಿಸಿದ್ದಾರೆ.

ಚಿಕಾಗೊದ ಫೆಡರೆಲ್ ಕೋರ್ಟ್‌ನಲ್ಲಿ ದೂರನ್ನು ದಾಖಲಿಸಿರುವ ಪೀಲೆ, ಕೊರಿಯಾದ ಕಂಪೆನಿ 30 ಮಿಲಿಯನ್ ಡಾಲರ್ ಪರಿಹಾರ ಧನ ನೀಡಬೇಕೆಂದು ದಾವೆಯಲ್ಲಿ ಬೇಡಿಕೆ ಇಟ್ಟಿದ್ದಾರೆ. ಸ್ಯಾಮ್‌ಸಂಗ್ ಅಕ್ಟೋಬರ್‌ನಲ್ಲಿ ನ್ಯೂಯಾರ್ಕ್ ಟೈಮ್ಸ್‌ನಲ್ಲಿ ಪ್ರಕಟಗೊಂಡಿದ್ದ ಟಿವಿ ಜಾಹೀರಾತಿನಲ್ಲಿ ಪೀಲೆ ಭಾವಚಿತ್ರವನ್ನು ಪ್ರಕಟಿಸಿತ್ತು. ಪೀಲೆ 2013ರಲ್ಲಿ ಸ್ಯಾಮ್‌ಸಂಗ್‌ನೊಂದಿಗೆ ಮಾಡಿಕೊಂಡಿದ್ದ ಒಪ್ಪಂದವನ್ನು ಮುರಿದುಕೊಂಡಿದ್ದರು.

75ರ ಹರೆಯದ ಪೀಲೆ ವಿಶ್ವಶ್ರೇಷ್ಠ ಅಥ್ಲೀಟ್ ಆಗಿದ್ದಾರೆ. ಪೀಲೆ ಅವರು ಜಾಹೀರಾತಿನ ಮೂಲಕ ಬಹಳಷ್ಟು ಆದಾಯ ಗಳಿಸುತ್ತಿದ್ದಾರೆ. ಸ್ಯಾಮಸಂಗ್ ಕಂಪೆನಿ ತನ್ನ ಅನುಮತಿ ಪಡೆಯದೇ ತನ್ನ ಭಾಗಚಿತ್ರವನ್ನು ಪ್ರಕಟಿಸಿ ಜಾಹೀರಾತು ಹಕ್ಕಿನ ಬೆಲೆಗೆ ಕುಂದು ತಂದಿದೆ. ಸ್ಯಾಮಸಂಗ್ ಉತ್ಪಾದನೆಯ ಗ್ರಾಹಕರಿಗೆ ಗೊಂದಲ ಉಂಟು ಮಾಡಿದೆ ಎಂದು ಪೀಲೆ ಆರೋಪಿಸಿದ್ದಾರೆ.

ಪೀಲೆ ಗುರುತನ್ನು ಅನಧಿಕೃತವಾಗಿ ಬಳಸಿಕೊಂಡಿದ್ದಕ್ಕೆ ಪರಿಹಾರವನ್ನು ಪಡೆಯುವುದು ನಮ್ಮ ಉದ್ದೇಶ. ಆ ಕಂಪೆನಿ ಮುಂದಿನ ದಿನಗಳಲ್ಲಿ ಇಂತಹ ತಪ್ಪನ್ನು ಮಾಡಬಾರದು ಎಂದು ಪೀಲೆ ವಕೀಲರಾದ ಫೆಡರೆಕ್ ಸ್ಪೆರ್ಲಿಂಗ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News