×
Ad

ಈಗ ಕೇವಲ 55 ರೂ. ಗೆ LED ಬಲ್ಬ್ !

Update: 2016-03-31 15:15 IST

ಹೊಸದಿಲ್ಲಿ , ಮಾ. 31 : ಕೇಂದ್ರ ಸರಕಾರದ ಎನರ್ಜಿ ಎಫಿಸಿಯನ್ಸಿ ಸೇರ್ವಿಸಸ್ ಲಿಮಿಟೆಡ್ ( EESL) ನಿಂದ ವಿತರಿಸಲಾಗುತ್ತಿರುವ ಎಲ್ ಇ ಡಿ ಬಲ್ಬ್ ಗಳ ಬೆಲೆ ಈಗ ಕೇವಲ 55 ರೂ .ಗೆ ಇಳಿದಿದೆ.   


EESL ನಿಂದ ನಡೆದ ಹರಾಜು ಪ್ರಕ್ರಿಯೆಯ ಬಳಿಕ ಈ ಹೊಸ ದರವನ್ನು ಪಡೆಯಲಾಯಿತು ಎಂದು ಕೇಂದ್ರ ಇಂಧನ ಸಚಿವ ಪಿಯುಶ್ ಗೋಯಲ್ ತಿಳಿಸಿದ್ದಾರೆ.

ಈಗಾಗಲೇ  EESL 8.8 ಕೋಟಿ ಎಲ್ ಇ ಡಿ ಬಲ್ಬ್ ಗಳನ್ನು ಇಂಧನ ಉಳಿತಾಯ ಈ ಯೋಜನೆಯಡಿ ವಿತರಿಸಿದೆ. 

ಎಲ್ ಇ ಡಿ ಬಲ್ಬ್ ಗಳ ಬಾಳಿಕೆ ಇತರ ಬಲ್ಬ್ ಗಳಿಗಿಂತ ಅತಿ ಹೆಚ್ಚು - ಹೋಲಿಕೆಯಲ್ಲಿ ಇತರ ಬಲ್ಬ್ ಗಳಿಗಿಂತ 50ಪಟ್ಟು ಹೆಚ್ಚು, ಸಿ ಎಫ್ ಎಲ್ ಗಳಿಗಿಂತ 8-10 ಪಟ್ಟು ಹೆಚ್ಚು ಬಾಳಿಕೆ ಬರುತ್ತವೆ. ಇದರಿಂದ ಇಂಧನ ಉಳಿತಾಯ ಆಗುವುದು ಮಾತ್ರವಲ್ಲದೆ ಹಣವೂ ಉಳಿಯುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News