×
Ad

ಮುಂದಿನ ಯುದ್ಧ ಅಂತರಿಕ್ಷದಲ್ಲಿ!: ಇಸ್ರೋ ವಿಜ್ಞಾನಿ ಶ್ರೀವಾಸ್ತವ

Update: 2016-03-31 16:41 IST

ಅಲಹಾಬಾದ್, ಮಾರ್ಚ್.31: ಮುಂದಿನ ವಿಶ್ವಯುದ್ಧ ಅಂತರಿಕ್ಷದಲ್ಲಿ ನಡೆಯಲಿದೆ. ಈ ಆತಂಕವನ್ನು ಇಸ್ರೊದ ಬೆಂಗಳೂರಿನ ವಿಜ್ಞಾನಿ ಅಲೋಕ್ ಶ್ರೀವಾಸ್ತವ್‌ರು ಪ್ರಕಟಿಸಿದ್ದಾರೆ.ಅಲಹಾಬಾದ್ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ಸಂಘದ ಮಾಜಿ ಅಧ್ಯಕ್ಷ ದಿವಂಗತ ಕುಲ್‌ದೀಪ್ ಸಿಂಗ್ ಕೆಡಿಯವರ ಸ್ಮರಣಾರ್ಥ ನಡೆಯುತ್ತಿದ್ದ ಭಾಷಣ ಸರಣಿಯ ಬುಧವಾರದ ಪ್ರಾರಂಭದ ಭಾಷದಲ್ಲಿ ಶ್ರೀವಾಸ್ತವರು"ಮಿಶನ್ ಟ್ರೂ ಆ್ಯಂಡ್ ಮಾರ್ಸ್" ವಿಷಯದ ಕುರಿತು ಮಾತಾಡುತ್ತಾ ಎಲ್ಲ ದೇಶಗಳು ಅಂತರಿಕ್ಷ ಸಾಮರ್ಥ್ಯವನ್ನು ಹೆಚ್ಚಿಸುತ್ತಿವೆ ಎಂದು ಹೇಳಿದರು. ಈಗ ಸ್ಪೇಸ್‌ನಲ್ಲಿ ಸೆಟಲೈಟ್ ಹಾನಿಗೆಡವುದರ ಕುರಿತು ಪ್ರಯೋಗಗಳು ನಡೆಯಲಾರಂಭಿಸಿದೆ. ಹೀಗಿರುವಾಗ ಮುಂದಿನ ವಿಶ್ವಯುದ್ಧ ಭೂಮಿಯಲ್ಲಿ ನಡೆಯಲಾರದು. ಆಕಾಶದಲ್ಲಿ ನಡೆಯಲಿದೆ ಎಂದು ಆತಂಕವನ್ನು ತೋಡಿಕೊಂಡರು. ಇದರಿಂದ ಯಾವುದೇ ದೇಶದ ಸಂಪರ್ಕ ವ್ಯವಸ್ಥೆಯನ್ನು ಸಂಪೂರ್ಣವಾಗಿ ಧ್ವಂಸಗೊಳಿಸಲು ಸಾಧ್ಯವಿದೆ ಎಂದೂ ಅವರು ಹೇಳಿದರು.

 ಶ್ರೀವಾಸ್ತವರು ಮಾತಾಡುತ್ತಾ ಈಗ ಎಲ್ಲರ ಗಮನ ಇಗವರ್ನಸ್ ಮೇಲಿದೆ. ಇಂಟರ್‌ನೆಟ್, ಸಂಪರ್ಕ ತಂತ್ರಜ್ಞಾನಕ್ಕೆ ಸಂಬಂಧಿಸಿದ ಇತರ ತಂತ್ರಜ್ಞಾನ ಮಾಧ್ಯಮಗಳನ್ನು ಹೆಚ್ಚಿಸಲಾಗುತ್ತಿದೆ. ಇತ್ತೀಚೆಗೆ ಚೀನಾ ಸೆಟಲೈಟ್‌ವೊಂದನ್ನು ಹಾನಿಗೆಡವಿತು ಎಂದು ಹೇಳಿದರು. ಈ ಪ್ರಯೋಗದ ಮೂಲಕ ತನ್ನಲ್ಲಿ ಅಂತರಿಕ್ಷದ ಸೆಟಲೈಟ್‌ನ್ನು ಧ್ವಂಸ ಗೊಳಿಸುವ ತಂತ್ರಜ್ಞಾನವಿದೆ ಎಂದು ತೋರಿಸಿಕೊಳ್ಳಲು ಚೀನಾ ಪ್ರಯತ್ನಿಸಿದೆ. ಅಂದರೆ ಅದು ಯಾವುದೆ ರಾಷ್ಟ್ರದ ಸಂಪರ್ಕ ವ್ಯವಸ್ಥೆಯನ್ನು ಧ್ವಂಸಗೊಳಿಸಬಹುದೆಂದ ಹಾಗಾಯಿತು ಮತ್ತು ಎಲ್ಲ ದೊಡ್ಡ ರಾಷ್ಟ್ರಗಳು ಈ ದಿಕ್ಕಿನಲ್ಲಿ ಯೋಚಿಸಲಾರಂಭಿಸಿವೆ ಎಂದು ಶ್ರೀವಾಸ್ತವು ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News