×
Ad

‘ಕಟಪ್ಪನೇಕೆ ಬಾಹುಬಲಿಯನ್ನು ಕೊಂದ?’ ರಾಜಮೌಳಿಯಿಂದ ಸತ್ಯ ಬಹಿರಂಗ

Update: 2016-04-01 14:55 IST

ನವದೆಹಲಿ :ಎಸ್ಎಸ್ ರಾಜಮೌಳಿಯವರ ‘ಬಾಹುಬಲಿ’ ಚಿತ್ರ ಇತ್ತೀಚೆಗೆ ರಾಷ್ಟ್ರೀಯ ಪ್ರಶಸ್ತಿ ಪಡೆದ ನಂತರ ಮತ್ತೆಹಳೆಯ ಪ್ರಶ್ನೆಯೊಂದು ಎದುರಾಗಿದೆ.‘‘ ಕಟ್ಟಪ್ಪನೇಕೆ ಬಾಹುಬಲಿಯನ್ನು ಕೊಂದ?" ಬಾಹುಬಲಿ-2 ಈ ವರ್ಷದ ಅಂತ್ಯದಲ್ಲಿ ಬಿಡುಗಡೆಯಾಗುವ ತನಕ ಈ ಪ್ರಶ್ನೆಯ ಉತ್ತರಕ್ಕಾಗಿ ಕಾಯಬೇಕಾಗುತ್ತದೆ ಎಂದು ಎಲ್ಲರೂಅಂದುಕೊಳ್ಳುತ್ತಿರುವಾಗಲೇ ರಾಜಮೌಳಿಯವರು ಕರುಣೆ ತೋರಿಈ ಪ್ರಶ್ನೆಗೆ ಉತ್ತರ ನೀಡಿದ್ದಾರೆ. ಯೂಟ್ಯೂಬಿನಲ್ಲಿ ಧರ್ಮ ಪ್ರೊಡಕ್ಷನ್ಸ್ ಪೋಸ್ಟ್ ಮಾಡಿದ ಒಂದು ವೀಡಿಯೋದಲ್ಲಿ ಈ ಪ್ರಶ್ನೆಗೆ ಉತ್ತರವಿದೆ-ಆದರೂ ನೀವು ಅದನ್ನು ಒಂದು ಚಿಟಿಕೆ ಉಪ್ಪಿನೊಂದಿಗೇ ಸ್ವೀಕರಿಸಬೇಕು.

ಕಟಪ್ಪನೇಕೆ ಬಾಹುಬಲಿಯನ್ನು ಕೊಂದನು ಎಂಬ ಪ್ರಶ್ನೆಗೆ ರಾಜಮೌಳಿಯ ಉತ್ತರ ‘‘ಹಾಗೆ ಮಾಡೆಂದು ಹೇಳಿದ್ದು ನಾನು.’’

ಹಾಗಾದರೆ ನಾವು ಮತ್ತೆ ಕೆಲವು ತಿಂಗಳು ಉತ್ತರಕ್ಕಾಗಿ ಕಾಯಬೇಕು. ತರುವಾಯ ನಿರ್ದೇಶಕ ರಾಜಮೌಳಿ ಬಾಹುಬಲಿ-2 ಬಗ್ಗೆ ಹೇಳಿದ್ದಿಷ್ಟು.

ಚಿತ್ರದ ಬಗ್ಗೆ ;ಬಾಹುಬಲಿ-2 ಮೊದಲನೇ ಚಿತ್ರಕ್ಕಿಂತ ಸ್ವಲ್ಪ ಉದ್ದವಿದ್ದರೆ ಅದರ ಮುಖ್ಯ ಆಕರ್ಷಣೆ ವಿವಿಧ ಪಾತ್ರಗಳ ನಡುವಿರುವ ಭಾವನಾಲಹರಿಗಳು. ಯುದ್ಧ ದೃಶ್ಯಗಳಿಗಿಂತಲೂ ಈ ಭಾವನಾಲಹರಿಗಳೇ ಪ್ರೇಕ್ಷಕರನ್ನು ಕುರ್ಚಿಗಂಟಿ ಕುಳಿತುಕೊಳ್ಳುವಂತೆ ಮಾಡುತ್ತದೆ.

ಬಾಹುಬಲಿ ಚಿತ್ರದ ಮಾಡುವಾಗ ಎದುರಾಗಿದ್ದ್ದ ಸವಾಲುಗಳು : ನಾವು 380 ದಿನಗಳ ಕಾಲ ನಿರಂತರ ಶೂಟಿಂಗ್ ಮಾಡಬೇಕೆಂದಿದ್ದೆವು. ಆದರೆ 320 ದಿನಗಳನ್ನು ಪೂರ್ತಿಗೊಳಿಸಿದಾಗ ಇಡೀ ತಂಡಲದಲ್ಲಿ ಒಂದು ರೀತಿಯ ಅತಿಯಾದ ಆಯಾಸ ತಲೆದೋರಿದಂತಿತ್ತು. ನಮ್ಮಚಿತ್ರೋದ್ಯಮದಲ್ಲಿ ನಿಜವಾದ ಶಕ್ತಿ ನಿರ್ದೇಶಕನಿಂದ ಹರಿದು ಬರುತ್ತದೆ. ನಾನು ಕೂಡ ಬಹಳ ಸುಸ್ತುಗೊಂಡಿದ್ದೆ. ಮುಂದಿನ60 ದಿನಗಳ ಕಾಲ ಎಲ್ಲರನ್ನೂ ನಿಭಾಯಿಸುವುದೇ ದೊಡ್ಡ ಸವಾಲಾಗಿತ್ತು.

ಕರಣ್ ಜೋಹರ್ ಜತೆ ಕೆಲಸ ಮಾಡಿದ ಬಗ್ಗೆ :ನಮ್ಮ ಆಯ್ಕೆಗಳು ವಿಭಿನ್ನವಾಗಿದ್ದರೂ ಅದೇಕೋ ನಾವಿಬ್ಬರೂ ಹೊಂದಿಕೊಳ್ಳಬಹುದೆಂಬ ಭಾವನೆ ನನಗಿತ್ತು.ರಾಣಾ ನಮ್ಮ ಯೋಜನೆಯನ್ನು ಕರಣ್ ಬಳಿ ಕೊಂಡೊಯ್ದಗನಮ್ಮ ಚಿತ್ರ ಪ್ರೇಮ ನಮ್ಮಿಬ್ಬರನ್ನು ಜತೆಯಾಗಿಸಿತು. ಬಾಹುಬಲಿಯ ಯಶಸ್ಸಿನಲ್ಲಿ ಅವರ ಪಾತ್ರ ದೊಡ್ಡದಿದೆ.

ಸೆಟ್‌ನಲ್ಲಿ ಯಾರು ತಮಾಷೆ ಮಾಡಿದ್ದು?

ಹಾಗೆ ಮಾಡಿದವರು ಯಾರೇ ಆದರೂ ನಾನು ಅವರಿಗೆ ಒದೆಯುತ್ತೇನೆ. ಇಂತಹ ಗಂಭೀರ ಕೆಲಸ ನಡೆಯುತ್ತಿರುವಾಗ ತಮಾಷೆಗಳು ಇರಲು ಸಾಧ್ಯವೇ?

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News