×
Ad

ಪಠಾಣ್‌ಕೋಟ್‌ನ ಜಂಟಿ ತನಿಖೆ ಎಂಬ ಸಮಯ ವ್ಯರ್ಥಪಡಿಸುವ ಒಂದು ರೂಪಕ

Update: 2016-04-01 22:49 IST

ಠಾಣ್‌ಕೋಟ್‌ನ ಮೇಲಿನ ದಾಳಿಯ ಕುರಿತು ಭಾರತ ಮತ್ತು ಪಾಕ್ ಜಂಟಿಯಾಗಿ ತನಿಖೆಯ ವರದಿಯನ್ನು ನಿರೀಕ್ಷಿಸಬಹುದಾದರೂ; ಅದರಿಂದ ಹೊರ ಬರುವುದು ಮಾತ್ರ ಸಮಯ ವ್ಯರ್ಥದಿಂದ ದೊರೆಯಬಹುದಾದ ತೀರ ವಿಲಕ್ಷಣ ತ್ಯಾಜ್ಯವಷ್ಟೆ. ಈ ತನಿಖೆಯಲ್ಲಿ ಯಾವುದೇ ಕಾರಣಕ್ಕೂ ನ್ಯಾಯವನ್ನು ಮತ್ತು ಈ ಭಯೋತ್ಪಾದನೆಯ ಕಾರ್ಯ ತಂತ್ರ ರೂಪಿಸಿದವರ ಸುಳಿವನ್ನು ನಿರೀಕ್ಷಿಸುವುದು ಸಾಧ್ಯವಿಲ್ಲ. ಆದರೆ ಪಾಕಿಸ್ತಾನ ಈ ತನಿಖೆಯಲ್ಲಿ ಕೈಜೋಡಿಸುವುದು ಮಾತ್ರ ತಾನು ಪ್ರಾಮಾಣಿಕ ಎಂದು ಬಿಂಬಿಸಲು ಸಾಬೀತುಪಡಿಸಲು ಎನ್ನುವುದು ಮಾತ್ರ ಸತ್ಯ. ಆದರೆ ಪಾಕಿಸ್ತಾನ ಈ ನಿಟ್ಟಿನಲ್ಲಿ ಯಾವುದೇ ನಂಬಲರ್ಹವಾದ ದಿಕ್ಕಿನಲ್ಲಿ ಮಾಹಿತಿ ನೀಡುವುದಿಲ್ಲ ಎಂದು ಮುಂಬೈನ 26/11 ಘಟನೆಯಿಂದ ತಿಳಿದು ಬರುತ್ತದೆ.

ಆದರೂ ಭಾರತ ಪಾಕಿಸ್ತಾನದ ಜೊತೆಗೂಡಿ ಈ ತನಿಖೆ ನಡೆಸುವುದರಿಂದ ದಾಳಿಯ ಕುರಿತಾಗಿ ನಿರ್ದಿಷ್ಟ ಸಮರ್ಥನೆಗಳನ್ನು ನಿರ್ಣಯಿಸಲು ಸಹಾಯವಾಗಬ ಹುದು. ಹಾಗೂ ಪಾಕಿಸ್ತಾನ ಈ ತನಿಖೆಯಲ್ಲಿ ಭಾಗಿಯಾಗಿ ತಾನು ಭಯೋತ್ಪಾದನೆಯ ರೂವಾರಿ ಅಲ್ಲ ಎಂದು ಸಾಬೀತುಪಡಿಸುವುದು ಕೂಡ ಆಗಿರಬಹುದು. ಹೆಸರಿಸಲು ಸಾಧ್ಯವಿಲ್ಲದ ರಾಷ್ಟ್ರೀಯ ತನಿಖಾ ಸಂಸ್ಥೆಯೊಂದು ಹೀಗೆ ವರದಿ ಮಾಡಿತು ನಾವು ವಾಸ್ತವವಾಗಿ ಪಾಕಿಸ್ತಾನದಿಂದ ತಿಳಿಯಬೇಕಾಗಿರುವುದು ಜಾಸ್ತಿ ಏನಿಲ್ಲ. ನಾವು ಅಪರಾಧಿಗಳು, ನಿರ್ವಾಹಕರ ಸಂಪರ್ಕಗಳ ನಿಜವಾದ ಗುರುತುಗಳನ್ನು ಹಿಡಿದಿದ್ದೇವೆ ಮತ್ತು ಪುರಾವೆಯನ್ನು ಸಹ ಕಲೆ ಹಾಕಿದ್ದೇವೆ. ಆದರೆ ನಾವು ತಿಳಿಯ ಬೇಕಾಗಿರುವುದು ಅವರು ಸಾಮೂಹಿಕವಾಗಿ ನಡೆಸಿದ ಯೋಜನೆ ಏನು? ಎನ್ನುವುದನ್ನು ಮಾತ್ರ. ಇದು ಪಠಾಣ್‌ಕೋಟ್‌ನ ಕುರಿತಾಗಿ ಬೆಳಕು ಚೆಲ್ಲುತ್ತದೆ. ಭಾರತದ ನೆಲದಲ್ಲಿ ಘಟಿಸಿದ ಮೊದಲ ಭಯೋತ್ಪಾದನ ಕೃತ್ಯಕ್ಕೆ ಪಾಕಿಸ್ತಾನದ ಬೆಂಬಲ ಹೊಂದಿತ್ತು ಆದರೆ ಭಾರತಕ್ಕೆ ಆ ಕುರಿತು ಸ್ಪಷ್ಟವಾಗಿರಲಿಲ್ಲ. 1988ರಿಂದ ಜಮ್ಮು ಮತ್ತು ಕಾಶ್ಮೀರದಲ್ಲಿನ ದಾಳಿಗೆ ಪಾಕಿಸ್ತಾನ ಬೆಂಬಲ ನೀಡುತ್ತಿದೆ. ಆ ದಾಳಿಯಲ್ಲಿ ಮಡಿದವರ ಸಂಖ್ಯೆ 43,914ಕ್ಕೂ ಅಧಿಕ. ಹಾಗೂ ದಕ್ಷಿಣ ಏಷ್ಯಾ ಭಯೋತ್ಪಾದನೆ ಪೋರ್ಟಲ್ ಪ್ರಕಾರ 2000ನೆ ಇಸವಿಯ ನಂತರ 990 ಜನ ಈ ದಾಳಿಗಳಲ್ಲಿ ಪ್ರಾಣ ಕಳೆದುಕೊಂಡಿದ್ದು ಈ ದಾಳಿಗಳೂ ಕೂಡ ಪಾಕಿಸ್ತಾನದಿಂದ ಬೆಂಬಲ ಪಡೆದಿದ್ದವು. 

ಕಳೆದ ಮೂವತ್ತು ವರ್ಷಗಳಿಂದ ಪಾಕಿಸ್ತಾನ, "ತಾನು ಭಯೋತ್ಪಾದಕನಲ್ಲ" ಎಂದು ಸುಳ್ಳು ಹೇಳಿದರೂ ಭಾರತದಲ್ಲಿ ಭಯೋತ್ಪಾದನಾ ಕೃತ್ಯಗಳು ಮತ್ತು ದಾಳಿ ನಡೆದಿದ್ದು ಇವೆಲ್ಲವುಗಳ ಹಿಂದೆ ಪಾಕಿಸ್ತಾನದ ನೆರವು ಇರುವುದು ಖಚಿತವಾಗಿದೆ. ಪಾಕಿಸ್ತಾನದ ಹೆಸರು ಅತ್ಯಂತ ಬೇಕಾಗಿರುವ ಪಟ್ಟಿಯಲ್ಲಿ ಸೇರಿದ ನಂತರವೂ ಇಸ್ಲಾಮಾಬಾದ್‌ನ ದಾಳಿಯ ಕುರಿತು ತನಿಖೆ ತ್ವರಿತಗೊಳ್ಳುತ್ತದೆಯೇ ಎನ್ನುವುದನ್ನು ಕಾದು ನೋಡಬೇಕು. ಆದರೆ ಈ ಸರಣಿ ದಾಳಿಗಳ ಯೋಜನೆಯ ಹಿಂದಿನ ಉದ್ದೇಶ ಮಾತ್ರ ದ್ವಂದ್ವವಾಗಿದೆ. 

ಆಟದಲ್ಲಿ ಗುರಿಕಂಬ ಬದಲಿಸುವಂತೆ ಪಾಕಿಸ್ತಾನ ತನ್ನ ಪ್ರತಿ ದಾಳಿಯ ನಂತರ ವರಸೆ ಬದಲಾಯಿಸುತ್ತದೆ. "ಇದೊಂದು ಬಾರಿ ಕ್ಷಮಿಸಿ ಬಿಡಿ, ಇನ್ನು ಹೀಗೆ ನಡೆದುಕೊಳ್ಳುವುದಿಲ್ಲ. ಇನ್ನೇನಿದ್ದರು ಹೊಸ ಆರಂಭ ಮತ್ತೆಂದೂ ಹೀಗೆ ಆಗುವುದಿಲ್ಲ," ಇಂದು ಪಾಕಿಸ್ತಾನ ಪಠಾಣ್‌ಕೋಟ್ ತನಿಖೆಯಲ್ಲಿ ಕೈಜೋಡಿಸುವುದರ ಮೂಲಕ ತನ್ನ ಸೌಹಾರ್ದತೆಯನ್ನು ಮೆರೆಯಲು ಯತ್ನಿಸುತ್ತಿದೆ.

 ಹೌದು, ಪಾಕಿಸ್ತಾನ ಬದಲಾಗಿದೆ ಎಂದು ನಂಬೋಣ, ಪಾಕಿಸ್ತಾನ ಯಾವುದೇ ಉಗ್ರ ಚಟುವಟಿಕೆಗಳನ್ನು ಭಾರತದ ಪ್ರದೇಶಗಳಲ್ಲಿ ನಡೆಸುತ್ತಿಲ್ಲ ಮತ್ತು ಭಾಗಿ ಯಾಗಿಲ್ಲ ಎಂದು ಊಹಿಸೋಣ, ಆದರೆ, ಈಗಾಗಲೇ ಭಾರತದ ನೆಲದ ಮೇಲೆ ನಿರಂತರವಾಗಿ ನಡೆಯುತ್ತಿರುವ ದಾಳಿಗಳನ್ನು, ಉಗ್ರಗಾಮಿಗಳನ್ನು ಮತ್ತು ಅವರು ಕಟ್ಟಿ ನಿಲ್ಲಿಸಿರುವ ಭಯೋತ್ಪಾದನಾ ಸಾಮ್ರಾಜ್ಯವನ್ನು ನಾಶಮಾಡಲು ಸಾಧ್ಯವಿದೆಯೇ? ಇಸ್ಲಾಮಾಬಾದ್ ಜೊತೆಗಿನ ಸಮನ್ವಯ ಪ್ರಕ್ರಿಯೆಯನ್ನು ಈ ಪ್ರಶ್ನೆಯಿಂದಲೇ ಆರಂಭಿಸಬಹುದು.

ಪಾಕಿಸ್ತಾನದ ಬದಲಾವಣೆಯನ್ನು ಕೇವಲ ಅವರ ಜೋರಿನ ಪ್ರತಿಭಟನೆಯಿಂದ ಒಪ್ಪಿಕೊಳ್ಳುವುದು ಅಸಾಧ್ಯ. ಅವರ ವರ್ತನೆಗಳು ಸ್ಪಷ್ಟವಾಗಿರದ ಕಾರಣ ಅವರ ವಾದ ಸಂಶಯಕ್ಕೆ ಎಡೆಮಾಡಿಕೊಡುತ್ತದೆ. ಉದಾಹರಣೆಗೆ ಬಾಂಗ್ಲಾದೇಶ ಹರ್ಕತುಲ್-ಜಿಹಾದ್ ಇಸ್ಲಾಮಿ ಉಗ್ರರ ಗುಂಪು ಮತ್ತು ಅನೇಕ ಈಶಾನ್ಯ ಬಂಡಾಯಗಾರ ರಚನೆಗಳನ್ನು ಭಾರತದ ವಿರುದ್ಧ ಎತ್ತಿ ಕಟ್ಟುತ್ತಿದೆ.

ಕೊಲಂಬೊ ಭಯೋತ್ಪಾದನೆಯ ಹೊಣೆ ಹೊರುವ ತನಕ ಭಾರತ ತಮಿಳು ಉಗ್ರಗಾಮಿಗಳನ್ನು ಮತ್ತು ಅವರಿಗೆ ಸಹಾನುಭೂತಿ ತೋರಿದವರ ವಿರುದ್ಧ ಯಾವ ಕ್ರಮ ಕೈಗೊಂಡಿತು? ಹಾಗೂ ತಮಿಳುನಾಡು ತಾನು ಶ್ರೀಲಂಕಾ ಉಗ್ರಗಾಮಿಗಳಿಂದ ತುಳಿತಕ್ಕೆ ಒಳಗಾಗಿದ್ದೇನೆ ಎಂದು ಘೋಷಿಸಿಕೊಂಡದ್ದು ಮತ್ತು ಶ್ರೀಲಂಕಾ ತಾನು ಇನ್ನು ಭಯೋತ್ಪಾದನೆಯನ್ನು ಬೆಂಬಲಿಸುವುದಿಲ್ಲ ಮತ್ತು ವ್ಯವಸ್ಥ್ಥೆಯನ್ನು ಹಾಳು ಗೆಡವುವುದಿಲ್ಲ ಎಂದು ಘೋಷಿಸಿದ್ದು ಸ್ಪಷ್ಟ ಉದ್ದೇಶದಿಂದಲೇ ಹೊರತು ಕೇವಲ ಬಾಯಿ ಮಾತಿಗಲ್ಲ. ಹಾಗೇ ಪಾಕಿಸ್ತಾನ ತಾನು ಸಲಹುತ್ತಿರುವ ಭಯೋತ್ಪಾದಕರ ಗುಂಪುಗಳ ಕುರಿತು ಕೇವಲ ತೋರಿಕೆಗಾಗಿ ಕಡತಗಳನ್ನು ನೀಡಿದೆಯೇ? ಅವುಗಳು ನಿಜವಾಗಿಯೂ ಇಸ್ಲಾಮಾಬಾದ್ ತನಿಖೆಯಲ್ಲಿ ಸಹಾಯ ಮಾಡುತ್ತವೆಯೇ? ಎನ್ನುವುದು ಇನ್ನು ಗೊಂದಲವಾಗಿಯೇ ಉಳಿದಿದೆ.

ಗೋಲುಕಂಬವನ್ನು ಬದಲಿಸಿ.

ಮತ್ತೆ ಗೋಲುಕಂಬವನ್ನು ಬದಲಿಸಲೇಬೇಕು. ಪಾಕಿಸ್ತಾನ ನಮ್ಮ ನೆರೆಯ ದೇಶ, ಬೇಡವೆಂದಾದರೆ ನೆರೆಯ ದೇಶವನ್ನು ಬದಲಾಯಿಸುವುದು ಸಾಧ್ಯವಿಲ್ಲ. ಹಾಗೆ ಪಾಕಿಸ್ತಾನವೇನು ಬದಲಾವಣೆಗೊಳ್ಳಲು ಸಾಧ್ಯವಿಲ್ಲದ ಏಕಶಿಲೆಯೂ ಅಲ್ಲ. ಪಾಕಿಸ್ತಾನದಲ್ಲಿಯೂ ಭಯೋತ್ಪಾದನೆಗೆ ಸಿಲುಕಿ ನಲುಗಿರುವುದರ ಕುರಿತು ಕಳವಳಿಸುವವರಿದ್ದಾರೆ. ಅವರೆಲ್ಲಾ ಭಾರತದೊಡನೆ ಸೌಹಾರ್ದವಾಗಿ ಬದುಕಲು ಬಯಸುತ್ತಾರೆ.

ಕೇವಲ, ಮಾತುಕತೆ ಮತ್ತು ಸಂಧಾನ ಮಾರ್ಗವಲ್ಲದೆ ಬೇರಾವುದೇ ಪರಿಹಾರ ಮಾರ್ಗಗಳಿಲ್ಲ ಎನ್ನುವುದು ಒಪ್ಪುವ ಮಾತಲ್ಲ! ನೆರೆಹೊರೆಯ ದೇಶಗಳನ್ನು ಬದಲಿಸಲು ಸಾಧ್ಯವಿಲ್ಲ ಎನ್ನುವ ಮಾತನ್ನು ಸಂಪೂರ್ಣವಾಗಿ ಒಪ್ಪಲು ಸಾಧ್ಯವಿಲ್ಲ ಕೂಡ. ಕಾರಣ, 1971ರಲ್ಲಿ ಬಾಂಗ್ಲಾ ದೇಶವನ್ನು ಹುಟ್ಟು ಹಾಕುವ ಮುಖಾಂತರ ನಾವು ಹೊಸ ನೆರೆಯ ದೇಶವನ್ನು ಹೊಂದಿದೆವು. 1975ರಲ್ಲಿ ಸಿಕ್ಕಿಮ್ ಭಾರತದ ರಾಜ್ಯವಾಗಿ ಮಾರ್ಪಾಡಾಯಿತು. ಚೀನಾ ಟಿಬೆಟನ್ನು ಅತಿಕ್ರಮಣ ಮಾಡಿಕೊಂಡು ತನ್ನ ನರೆಯ ದೇಶಗಳಲ್ಲಿ ಬದಲಾವಣೆ ಮಾಡಿಕೊಂಡಿತು ಮತ್ತು ದಲಾಯಿ ಲಾಮಾರನ್ನು 1959ರಲ್ಲಿ ಹೊರದಬ್ಬಿತು. 1962ರಲ್ಲಿ ಮತ್ತೆ ಅಕ್ಷಯ್ ಚೀನಾ ಪ್ರದೇಶವನ್ನು ಅತಿಕ್ರಮಣ ಮಾಡಿ ಮತ್ತೆ ನರೆಯನ್ನು ಬದಲಾಯಿಸಿತು. ಇತಿಹಾಸದ ತುಂಬೆಲ್ಲಾ ಬದಲಾಯಿಸಿರುವ ನೆರೆ ಮತ್ತು ನೆರೆಹೊರೆಯ ದಾಖಲೆ ಸ್ವಲ್ಪ ಹೆಚ್ಚಾಗಿವೆ.

 ಕರುಣೆಯ ಶಾಂತಿದೂತನಂತೆ ಸ್ನೇಹಕಾಗಿ ಕೈಚಾಚಿರುವ ಪಾಕಿಸ್ತಾನವನ್ನು ಅಪಮಾನಗೊಳಿಸುವುದು ಸೂಕ್ತವಲ್ಲ. ಆದರೆ ಈಗಿನ ಪರಿಸ್ಥಿತಿಯಲ್ಲಿ ಈ ಸ್ನೇಹ ಏನನ್ನು ಬಯಸುತ್ತದೆ? ಎನ್ನುವುದನ್ನು ಚಿಂತಿಸುವ ಅಗತ್ಯವಿದೆ. ಈ ಸಂದರ್ಭದಲ್ಲಿ ನೆರೆಹೊರೆಯ ದೇಶಗಳಿಂದ ಉಂಟಾಗುತ್ತಿರುವ ದುರ್ವರ್ತನೆ ಮತ್ತು ಅತಿಕ್ರಮಣಗಳನ್ನು ನಿಯಂತ್ರಿಸುವುದು ಮತ್ತು ಅಂತಹ ಸಮಯದಲ್ಲಿ ಸೂಕ್ತವಾದ ಶಿಕ್ಷೆಯನ್ನು ವಿಧಿಸುವುದು ನ್ಯಾಯಸಮ್ಮತ. ಪಾಕಿಸ್ತಾನ ಭಾರತದೊಂದಿಗೆ ಶಾಂತಿ ಮಾತುಕತೆಯಲ್ಲಿ ಭಾಗಿಯಾಗಿಯೂ ಭಯೋತ್ಪಾದನೆಯ ಮೂಲಸೌಕರ್ಯವನ್ನು ಗಟ್ಟಿಗೊಳಿಸಿ ಬೆಂಬಲಿಸಿದರೆ ಮತ್ತು ಭಾರತದ ವ್ಯವಸ್ಥೆಯನ್ನು ಹಾಳುಗೆಡವುವ ಪ್ರವೃತ್ತಿಯನ್ನು ಭಾರತ ಹೇಗೆ ತಾನೆ ನಿಭಾಯಿಸಬೇಕು?
ಆದರೆ ಪಾಕಿಸ್ತಾನಕ್ಕೆ ಇನ್ನೊಂದು ಮುಖವಿದೆ. ಪಾಕಿಸ್ತಾನದ ಅನೇಕ ಪ್ರಾಂತಗಳು ಶಾಂತಿಯನ್ನು ಬಯಸುತ್ತವೆ. ಆ ಪ್ರದೇಶಗಳ ಕಲ್ಯಾಣಕ್ಕಾಗಿ ಶ್ರಮಿಸಬೇಕಾಗಿದೆ. ಇದಲ್ಲದೆಯೂ ಪಾಕಿಸ್ತಾನದ ಉದ್ಧಾರಕ್ಕೆ ಶ್ರಮಿಸಲು ನಾವು ಸಿದ್ಧರಿದ್ದೇವೆ. ರಾಜ್ಯಗಳ ನಡುವಿನ ಸಂಬಂಧ ವ್ಯಕ್ತಿಗಳ ನಡುವಿನ ಸಂಬಂಧಕ್ಕಿಂದ ವಿಭಿನ್ನವಾದದ್ದು. ಪಾಕಿಸ್ತಾನದ ಒಳಗಿನ ಸಂಬಂಧಗಳು ಮತ್ತು ವಿವಿಧ ಹುದ್ದೆಯ ವ್ಯಕ್ತಿಗಳೊಂದಿಗೆ ಪಾಕಿಸ್ತಾನಕ್ಕಿರಬಹುದಾದ ಸಂಬಂಧಗಳ ನಮ್ಮ ಲೆಕ್ಕಾಚಾರ, ಅದು ನಮ್ಮ ತರ್ಕದ ಫಲ. ಆದರೆ ಅದು ನಮ್ಮ ನೀತಿಯ ಭಾಗವಲ್ಲ. ಭಾರತ ನವಾಝ್ ಶರೀಫ್ ಅಥವಾ ರಹೀಲಾ ಶರೀಫ್‌ರನ್ನು ಪಾಕಿಸ್ತಾನದ ಭಯೋತ್ಪಾದನೆಯ ವಿರುದ್ಧ ಪ್ರಶ್ನಿಸುತ್ತಿಲ್ಲ, ಬದಲಿಗೆ ಇಡೀ ಪಾಕಿಸ್ತಾನ ತನ್ನ ಕೃತ್ಯದ ಹೊಣೆ ಹೊರಬೇಕು.

ಸೋಗಲಾಡಿಗಳ ಸಮೂಹ

ಕೊನೆಯದಾಗಿ ಬೆಲ್ಜಿಯಮ್ ದಾಯೆಶ್‌ನನ್ನು ಭಯೋತ್ಪಾದನ ದಾಳಿ ತನಿಖೆಗೆ ಕರೆಯುತ್ತದೆಯೇ? ಅಥವಾ ಫ್ರಾನ್ಸ್ ದಾಯೆಶ್‌ನನ್ನು ತನ್ನ ದೇಶದ ಮೇಲಾದ ದಾಳಿಯ ತನಿಖೆಗೆ ಆಹ್ವಾನಿಸುತ್ತದೆಯೇ? ಅಥವಾ ಅಮೆರಿಕ 9/11 ದಾಳಿಯ ಜಂಟಿ ತನಿಖೆಗಾಗಿ ತಾಲಿಬಾನ್‌ನನ್ನು? ಆದರೆ ಭಾರತ ಪಾಕಿಸ್ತಾನವನ್ನು ತನಿಖೆಯಲ್ಲಿ ಸೇರಿಸಿಕೊಂಡಿದೆ. ಪಠಾಣ್‌ಕೋಟ್‌ನ ದಾಳಿಯ ತನಿಖೆಗೆ ಪಾಕಿಸ್ತಾನದ ಪರೀಕ್ಷಕರು ಮತ್ತು ಪಾಕಿಸ್ತಾನದ ಐಎಸ್‌ಐ ಏಜೆಂಟ್, ಪಾಕಿಸ್ತಾನದ ಏಜೆನ್ಸಿಗಳು ದಾಳಿ ಪ್ರದೇಶಕ್ಕೆ ಬಂದಿರುವುದು ಸಹಾಯದ ನಟನೆಯಷ್ಟೆ. ಇದು ಅಸಾಹಾಯಕ ಭಾರತಕ್ಕೆ ಅವರು ಮಾಡುತ್ತಿರುವ ಉಪಕಾರ!

ರೈಸಿನಾ ಹಿಲ್ ಪ್ರಸಕ್ತ ಆಡಳಿತಗಾರರು ತಯಾರಿಸಿದ ತಳವಿಲ್ಲದ ವಿದೇಶಿ ನೀತಿಯ ವಿಫಲತೆಗಳನ್ನು ಸರಿದೂಗಿಸಲು, ವಿಶೇಷವಾಗಿ ಭಯೋತ್ಪಾದನೆ ಮತ್ತು ಪಾಕಿಸ್ತಾನ ಸಂಬಂಧಿಸಿದಂತೆ - ನಿರೂಪಿಸಿರುವ ನೀತಿಗಳ ವಿಫಲತೆಯನ್ನು ಮುಚ್ಚಿಹಾಕಲು ಮಾಡಿದ ಏರ್ಪಾಡೇ ಪಠಾಣ್‌ಕೋಟ್‌ನ ಜಂಟಿ ತನಿಖೆ ಎಂಬ ಒಂದು ರೂಪಕ.

ಕರುಣೆಯ ಶಾಂತಿದೂತನಂತೆ ಸ್ನೇಹಕ್ಕಾಗಿ ಕೈಚಾಚಿರುವ ಪಾಕಿಸ್ತಾನವನ್ನು ಅಪಮಾನಗೊಳಿಸುವುದು ಸೂಕ್ತವಲ್ಲ. ಆದರೆ ಈಗಿನ ಪರಿಸ್ಥಿತಿಯಲ್ಲಿ ಈ ಸ್ನೇಹ ಏನನ್ನು ಬಯಸುತ್ತದೆ? ಎನ್ನುವುದನ್ನು ಚಿಂತಿಸುವ ಅಗತ್ಯವಿದೆ. ಈ ಸಂದರ್ಭದಲ್ಲಿ ನೆರೆಹೊರೆಯ ದೇಶಗಳಿಂದ ಉಂಟಾಗುತ್ತಿರುವ ದುರ್ವರ್ತನೆ ಮತ್ತು ಅತಿಕ್ರಮಣಗಳನ್ನು ನಿಯಂತ್ರಿಸುವುದು ಮತ್ತು ಅಂತಹ ಸಮಯದಲ್ಲಿ ಸೂಕ್ತವಾದ ಶಿಕ್ಷೆಯನ್ನು ವಿಧಿಸುವುದು ನ್ಯಾಯಸಮ್ಮತ.

Writer - ಅಜಯ್ ಸಾಹ್ನಿ

contributor

Editor - ಅಜಯ್ ಸಾಹ್ನಿ

contributor

Similar News

ಮನದೆಳೆ