×
Ad

ಕೋಲ್ಕತಾಕ್ಕೆ ರಾಹುಲ್ ಗಾಂಧಿ ಭೇಟಿ

Update: 2016-04-02 12:34 IST

  ಕೋಲ್ಕತಾ,ಎ.2: ಕಾಂಗ್ರೆಸ್‌ನ ಉಪಾಧ್ಯಕ್ಷ ರಾಹುಲ್ ಗಾಂಧಿ ಶನಿವಾರ ಕೋಲ್ಕತಾಕ್ಕೆ ಭೇಟಿ ನೀಡಿದ್ದು, ಎರಡು ದಿನಗಳ ಹಿಂದೆ ಇಲ್ಲಿನ ವಿವೇಕಾನಂದ ರೋಡ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ ಫ್ಲೇ ಓವರ್ ಕುಸಿದು ಬಿದ್ದ ಸ್ಥಳಕ್ಕೆ ಭೇಟಿ ನೀಡಿದರು. ಘಟನೆಯಲ್ಲಿ ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದವರನ್ನು ಭೇಟಿಯಾಗಿ ಸಮಾಧಾನ ಹೇಳಿದರು.

‘‘ಘಟನೆಯಲ್ಲಿ ಗಾಯಗೊಂಡಿರುವವರಿಗೆ ಸಮಾಧಾನ ಹೇಳಲು ತಾನು ಆಸ್ಪತ್ರೆಗೆ ಭೇಟಿ ನೀಡಿರುವೆ. ಇದೊಂದು ದುರಂತವಾಗಿದ್ದು, ಈ ಸಂದರ್ಭದಲ್ಲಿ ರಾಜಕೀಯಕ್ಕೆ ಸಂಬಂಧಪಟ್ಟ ವಿಷಯದ ಕುರಿತು ಮಾತನಾಡಲಾರೆ’’ಎಂದು ಸುದ್ದಿಗಾರರಿಗೆ ರಾಹುಲ್ ತಿಳಿಸಿದರು.

ಫ್ಲೈ ಓವರ್ ಕುಸಿತದಿಂದಾಗಿ 26 ಜನರು ಸಾವನ್ನಪ್ಪಿದ್ದು, ಈ ಘಟನೆಗೆ ಸಂಬಂಧಿಸಿ ನಿರ್ಮಾಣ ಕಂಪೆನಿಯ ಮೂವರು ಅಧಿಕಾರಿಗಳನ್ನು ಶುಕ್ರವಾರ ಸಂಜೆ ನಗರದಲ್ಲಿ ಬಂಧಿಸಲಾಗಿತ್ತು. ಫ್ಲೈ ಓವರ್ ನಿರ್ಮಾಣ ಕಾರ್ಯ 2009ರಲ್ಲಿ ಆರಂಭವಾಗಿದ್ದು, 18 ತಿಂಗಳ ಅವಧಿಯಲ್ಲಿ 165 ಕೋಟಿ ರೂ. ಬಜೆಟ್‌ನಲ್ಲಿ ಯೋಜನೆಯನ್ನು ಪೂರ್ಣಗೊಳಿಸುವಂತೆ ಕಂಪೆನಿಗೆ ತಿಳಿಸಲಾಗಿತ್ತು. ಆದರೆ, ಕಳೆದ ಏಳು ವರ್ಷಗಳ ಅವಧಿಯಲ್ಲಿ ಶೇ.60ರಷ್ಟು ಕಾಮಗಾರಿ ಪೂರ್ಣಗೊಂಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News