×
Ad

ಮದ್ಯವಿರೋಧಿ ಕಾರ್ಯಕರ್ತರ ವಿರುದ್ಧ ದೇಶದ್ರೋಹ ಕೇಸು ದಾಖಲಿಸಿದ ತಮಿಳ್ನಾಡು ಪೊಲೀಸರು

Update: 2016-04-02 13:02 IST

ಚೆನ್ನೈ,ಎಪ್ರಿಲ್,2: ಮದ್ಯವರ್ಜನೆ ಸೆಮಿನಾರ್‌ಗೆ ನೇತೃತ್ವನೀಡಿದ ಆರು ಮದ್ಯವಿರೋಧಿ ಕಾರ್ಯಕರ್ತರ ವಿರುದ್ಧ ತಮಿಳ್ನಾಡು ಪೊಲೀಸ್ ದೇಶದ್ರೋಹದ ಪ್ರಕರಣ ದಾಖಲಿಸಿದ ಘಟನೆ ವರದಿಯಾಗಿದೆ. ಇದನ್ನು ವಿರೋಧಿಸಿ ರಾಜಕೀಯ ನಾಯಕರೂಕೇಂದ್ರಸಚಿವರೂ ಪ್ರತಿಭಟಿಸಿ ರಂಗಪ್ರವೇಶಿಸಿದ್ದಾರೆ. ಸರಕಾರಿ ನಿಯಂತ್ರಣದ ಮದ್ಯದಂಗಡಿಗಳನ್ನು ಮುಚ್ಚಬೇಕೆಂದು ಆಗ್ರಹಿಸಿ ತಿರುಚ್ಚಿರಪಳ್ಳಿಯಲ್ಲಿ ಸೆಮಿನಾರ್ ಏರ್ಪಡಿಸಿದ ಮಕ್ಕಳ್ ಅಧಿಕಾರಂ ಸಂಘಟನೆಯ ರಾಜ್ಯದ ರಕ್ಷಾಧಿಕಾರಿ ಅಡ್ವೊಕೇಟ್ ಸಿ.ರಾಜು, ಕಾಳಿಯಪ್ಪನ್, ಆನಂದಿಯಮ್ಮಾಳ್, ಡೇವಿಡ್ ರಾಜು, ವಂಚಿನಾಥನ್, ಧನಶೇಖರನ್ ಎಂಬವರ ವಿರುದ್ಧ ಪೊಲೀಸರು ದೇಶದ್ರೋಹ ಆರೋಪಿಸಿ ಪ್ರಕರಣದಾಖಲಿಸಿದ್ದಾರೆ.ಧನಶೇಖರನ್ ಮದ್ಯವಿತರಣಾ ಸಾರ್ವಜನಿಕ ಕ್ಷೇತ್ರದ ಸಂಸ್ಥೆಯೊಂದಾದ ಟಸ್‌ಮಾಕ್‌ನ ಕಾರ್ಮಿಕ ಯೂನಿಯನ್‌ನ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ.

ರಾಜ್ಯ ಸರಕಾರದ ವಿರುದ್ಧ ಮತ್ತು ಮುಖ್ಯಮಂತ್ರಿ ಜಯಲಲಿತಾರವಿರುದ್ಧ ಮಾತಾಡಿದರು ಹಾಗೂ ಶಾಂತಿಯನ್ನುಕದಡಲು ಶ್ರಮಿಸಿದರು ಎಂದು ಆರೋಪಿಸಿ ವಿವಿಧ ಸೆಕ್ಷನ್‌ಗಳಡಿಯಲ್ಲಿ ಕೇಸು ದಾಖಲಿಸಲಾಗಿದೆ. ಟಸ್‌ಮಾಕ್ ಮದ್ಯದಂಗಡಿಗಳನ್ನು ಮುಚ್ಚಬೇಕೆಂದು ಫೆಬ್ರವರಿ ಹದಿನಾಲ್ಕಕ್ಕೆ ಉಯವರ್ ಶಾಂತಿ ಮೈದಾನದಲ್ಲಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಒಂದು ತಿಂಗಳ ಹಿಂದೆ ನಡೆದ ಕಾರ್ಯಕ್ರಮದ ವಿರುದ್ಧ ಮಾರ್ಚ್ 26ಕ್ಕೆ ನಗರದ ತಿಳೈಲ ನಗರ್ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ. ಕಾರ್ಯಕ್ರಮದ ವಿರುದ್ಧ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ರವಿಚಂದ್ರನ್ ದೂರು ನೀಡಿದ್ದರು. ಸೆಮಿನಾರ್‌ನಲ್ಲಿ ಮಾತಾಡಿದ ಒಂದನೆ ತರಗತಿ ವಿದ್ಯಾರ್ಥಿನಿಯ ಹೆಸರನ್ನು ಪೊಲೀಸರು ಆರೋಪಿಗಳ ಪಟ್ಟಿಯಿಂದ ತೆಗೆದು ಹಾಕಿದ್ದಾರೆ.

ದೇಶದ್ರೋಹ ಪ್ರಕರಣದಾಖಲಿಸಿದ್ದಕ್ಕಾಗಿ ಕೇಂದ್ರ ಸಚಿವ ಪ್ರಕಾಶ್ ಜಾವೇಡ್ಕರ್ ಆತಂಕ ವ್ಯಕ್ತಪಡಿಸಿಸದ್ದಾರೆ. ಮದ್ಯವಿರೋಧಿ ಕಾರ್ಯಕರ್ತರ ವಿರುದ್ಧ ದೇಶದ್ರೋಹ ಕೇಸು ಹಾಕಿದ್ದು ಪೊಲೀಸರು ಯಾರಿಗಾಗಿ ಕೆಲಸ ಮಾಡುತ್ತಿದ್ದಾರೆಂಬುದನ್ನು ತೋರಿಸುತ್ತಿದೆ ಎಂದು ಅವರು ಮಧುರೈಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದ್ದಾರೆ. ಜನಕ್ಷೇಮ ಮೈತ್ರಿಕೂಟದ ಜನರಲ್ ಕನ್ವೀನರ್ ವೈಕೋ ಕೂಡಾ ಖಂಡಿಸಿದ್ದಾರೆ. ಮದ್ಯನಿಷೇಧ ವಿಷಯದಲ್ಲಿ ಮುಖ್ಯಮಂತ್ರಿ ಜಯಲಲಿತಾವಿರುದ್ಧ ಪದ್ಯಹಾಡಿ ಯುಟ್ಯೂಬ್‌ನಲ್ಲಿ ಪೋಸ್ಟ್ ಮಾಡಿದ ಜನಪದ ಗಾಯಕ ಕೋವನ್ ಎಂಬವರನ್ನು ದೇಶದ್ರೋಹ ಆರೋಪದಡಿ ಕಳೆದವರ್ಷ ಅಕ್ಟೋಬರ್‌ನಲ್ಲಿ ತಮಿಳ್ನಾಡು ಪೊಲೀಸರು ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News