ಹಿಮಾಚಲ ಪ್ರದೇಶ 13ವರ್ಷದ ಬಾಲಕಿಯ ಸಾಮೂಹಿಕ ಅತ್ಯಾಚಾರ: ಮೂವರ ಬಂಧನ, ಇಬ್ಬರು ಪರಾರಿ
ಹಿಮಾಚಲಪ್ರದೇಶ, ಎಪ್ರಿಲ್.2: ಹದಿಮೂರು ವರ್ಷದ ಅಪ್ರಾಪ್ರ ಬಾಲಕಿಯನ್ನು ಐವರು ಯುವಕರು ನಾಲ್ಕು ದಿವಸ ಕೂಡಿಹಾಕಿ ಅತ್ಯಾಚಾರ ವೆಸಗಿದ ಅತಿ ದಾರುಣ ಘಟನೆ ಹಿಮಾಚಲ ಪ್ರದೇಶದ ನಾಲಾಗಡದಿಂದ ವರದಿಯಾಗಿದೆ. ಪೊಲೀಸರು ಈ ಬಾಲಕಿಯನ್ನು ಆರೋಪಿಗಳು ನಾಲ್ಕು ದಿವಸ ಕೂಡಿಹಾಕಿ ಅತ್ಯಾಚಾರವೆಸಗಿದ್ದಾರೆಂದು ತಿಳಿಸಿದ್ದಾರೆ. ಸಂತ್ರಸ್ತ ಬಾಲಕಿ ಸರಕಾರಿ ಶಾಲೆಯ ಏಳನೆ ತರಗತಿಯ ವಿದ್ಯಾರ್ಥಿನಿಯಾಗಿದ್ದಾಳೆ.
ಪೊಲೀಸರು ಮೂವರು ಯುವಕರನ್ನು ಬಂಧಿಸಿದ್ದಾರೆ. ಇನ್ನಿಬ್ಬರು ಪರಾರಿಯಾಗಿದ್ದಾರೆ. ಪೊಲೀಸರು ಮೊಕದ್ದಮೆ ದಾಖಲಿಸಿ ತನಿಖೆ ಆರಂಬಿಸಿದ್ದು ಬಾಲಕಿಯ ತಾಯಿ ನಾಲಾಗಡದಲ್ಲಿ ಬಾಡಿಗೆಮನೆಯೊಂದರಲ್ಲಿ ವಾಸಿಸುತ್ತಿದ್ದರು ಎಂದು ವರದಿ ತಿಳಿಸಿದೆ. ಮಾರ್ಚ್ 24ರಂದು ಪತಿಯ ಬಳಿ ತನ್ನ ಮಗ ಮತ್ತು ಮಗಳನ್ನು ಬಿಟ್ಟು ಬರಲು ಉತ್ತರಪ್ರದೇಶದ ಸಹಾರನ ಪುರಕ್ಕೆ ಮಹಿಳೆ ಹೋಗಿದ್ದರು.
ತನ್ನ ಅತ್ತಿಗೆಯ ಬಳಿ ಹದಿಮೂರು ವರ್ಷದ ಮಗಳನ್ನು ಮತ್ತು ಒಂಬತ್ತು ವರ್ಷದ ಮಗನನ್ನು ಬಿಟ್ಟು ಹೋಗಿದ್ದರು. 26ನೆ ತಾರೀಕಿನಂದು ಸಹಾರನಾಪುರದಿಂದ ಮರಳಿ ಬಂದಿದ್ದರು. ಆದರೆ ಮನೆಯಲ್ಲಿ ಬಾಲಕಿ ಇರಲಿಲ್ಲ. ಮಹಿಳೆ ಮಗಳನ್ನು ತನಗೆ ಕೂಡಿದ ರೀತಿಯಲ್ಲಿ ಹುಡುಕಾಡಿ ಕೊನೆಗೆ ಪೊಲೀಸರಿಗೆ ದೂರು ನೀಡಲು ಬಂದಾಗ ಮಾರ್ಚ್ 28ರಂದು ಯಾರೋ ಫೋನ್ ಮಾಡಿ ನಿಮ್ಮ ಮಗಳು ಮನೆಯಲ್ಲಿದ್ದಾಳೆ ಎಂದು ಹೇಳಿದ್ದರು.
ಮನೆಗೆ ಬಂದು ನೋಡುವಾಗ ಬಾಲಕಿ ಹೆದರಿಕೆಯಿಂದ ಮುದುಡಿಕೊಂಡಿದ್ದಳು. ಅವಳನ್ನು ಪ್ರಶ್ನಿಸಿದಾಗ ಗೋಪಾಲ ಎಂಬಾತ ಅವಳು ಮನೆಗೆ ಬರುತ್ತಿದ್ದಾಗ 24ನೆ ತಾರೀಕಿನಂದು ನೀನು ನನಗೆ ಇಷ್ಟ ಆಗಿದ್ದೀಯ ಎಂದು ಕೈ ಹಿಡಿದಿದ್ದ ಇಪ್ಪತ್ತು ನಿಮಿಷದ ನಂತರ ಗೋಪಾಲ ಲಕ್ಕಿ ಎಂಬಾತನ ಜೊತೆ ಬೈಕ್‌ನಲ್ಲಿ ಬಂದು ಗೋಪಾಲ ಅಲ್ಲಿ ಇಳಿದು ಲಕ್ಕಿ ಬಾಲಕಿಯನ್ನು ಬೈಕ್‌ನಲ್ಲಿ ಕೂರಿಸಿ ಕಾಡಿನ ಕಡೆಗೆ ಕರೆದೊಯ್ದ ಎಂದು ಬಾಲಕಿ ತಾಯಿಗೆ ತಿಳಿಸಿದ್ದಾಳೆ.
ಕಾಡಿನಲ್ಲಿ ದೀಪಕ್ ಮತ್ತು ರಾಜು ಕೂಡಾ ಇದ್ದರು. ಎಲ್ಲ ಯುವಕರು ಸೇರಿ ನಾಲ್ಕು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ವೆಸಗಿದರು ಎಂದು ಬಾಲಕಿ ತಿಳಿಸಿರುವುದಾಗಿ ವರದಿಯಾಗಿದೆ.