ಕೋಣಾರ್ಕ ಸೂರ್ಯ ದೇವಾಲಯ ಪ್ರವೇಶ ಶುಲ್ಕ ಹೆಚ್ಚಳಕ್ಕೆ ವಿರೋಧ
Update: 2016-04-03 23:20 IST
ಪುರಿ, ಎ.3: ಕೋಣಾರ್ಕದ ಸೂರ್ಯ ದೇವಾಲಯದ ಸಂರಕ್ಷಣೆಗಾಗಿ ಕೆಲಸ ಮಾಡುತ್ತಿರುವ ಕೋಣಾರ್ಕ ಸುರಕ್ಷಾ ಸಮಿತಿಯ (ಕೆಎಸ್‌ಎಸ್) ಕಾರ್ಯಕರ್ತರು ಪಾರಂಪರಿಕ ತಾಣದ ಪ್ರವೇಶ ಶುಲ್ಕ ಹೆಚ್ಚಳವನ್ನು ವಿರೋಧಿಸಿ, ಶನಿವಾರ ದೇವಾಲಯದ ಎಲ್ಲ ಟಿಕೆಟ್ ಕೌಂಟರ್‌ಗಳನ್ನು ಬಲವಂತವಾಗಿ ಮುಚ್ಚಿಸಿದ್ದಾರೆ.
ಭಾರತೀಯ ಪುರಾತತ್ವ ಇಲಾಖೆಯ ಮೇಲ್ವಿಚಾರಣೆ ಯಲ್ಲಿರುವ ಕೋಣಾರ್ಕದ ಸೂರ್ಯ ದೇವಾಲಯ ಸಹಿತ 116 ಸ್ಮಾರಕಗಳಿಗೆ ಪ್ರವೇಶ ಶುಲ್ಕ ಹೆಚ್ಚಿಸುವ ನಿರ್ಧಾರ ಕೈಗೊಂಡಿರುವ ಕೇಂದ್ರ ಸರಕಾರದ ವಿರುದ್ಧ ಕೆಎಸ್‌ಎಸ್ ಕಾರ್ಯಕರ್ತರು ಘೋಷಣೆ ಕೂಗಿದರು ಹಾಗೂ ಶುಲ್ಕ ಹೆಚ್ಚಳ ಹಿಂದಕ್ಕೆ ಪಡೆಯುವಂತೆ ಆಗ್ರಹಿಸಿದರು.
ಸರಕಾರದ ನಿರ್ಧಾರದಂತೆ ಪ್ರವೇಶ ಶುಲ್ಕವನ್ನು ಭಾರತೀಯರಿಗೆ ರೂ. 10ರಿಂದ ರೂ. 30ಕ್ಕೆ ಹಾಗೂ ವಿದೇಶೀಯರಿಗೆ ರೂ.250ರಿಂದ ರೂ.500ಕ್ಕೆ ಹೆಚ್ಚಿಸಲಾಗಿದೆ.
ಈ ಪರಂಪರಾ ತಾಣದಲ್ಲಿ ಸೌಲಭ್ಯ ಸುಧಾರಣೆಗಾಗಿ ಪ್ರವೇಶ ಶುಲ್ಕ ಹೆಚ್ಚಳದ ನಿರ್ಧಾರ ಕೈಗೊಳ್ಳಲಾಗಿದೆ.