ವಿಕೋಪ ನಿಭಾವಣೆಯ ರಾಷ್ಟ್ರೀಯ ಯೋಜನೆ ರೂಪಿಸುವಂತೆ ಕೇಂದ್ರಕ್ಕೆ ಸುಪ್ರೀಂ ನಿರ್ದೇಶನ
Update: 2016-04-05 23:41 IST
ಹೊಸದಿಲ್ಲಿ, ಎ.5: ದುರಂತ ಸಂತ್ರಸ್ತರಿಗೆ ಪರಿಹಾರ ಮತ್ತು ಪುನರ್ವಸತಿ ಒದಗಿಸುವುದಕ್ಕಾಗಿ ವಿಕೋಪ ನಿಭಾವಣೆಯ ರಾಷ್ಟ್ರೀಯ ಯೋಜನೆಯೊಂದನ್ನು ರೂಪಿಸುವಂತೆ ಸರಕಾರಕ್ಕೆ ಸುಪ್ರೀಂಕೋರ್ಟ್ ಇಂದು ನಿರ್ದೇಶನ ನೀಡಿದೆ.
ಅಂತಹ ಕರಡೊಂದು ಈಗಾಗಲೇ ಅಂತಿಮ ಹಂತದಲ್ಲಿದ್ದು, ಮಂಜೂರಾತಿ ಬಾಕಿಯುಳಿದಿದೆಯೆಂದು ಸರಕಾರ ತಿಳಿಸಿದಾಗ, 8 ವಾರಗಳೊಳಗೆ ಯೋಜನೆ ರೂಪಿಸುವಂತೆ ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರಾ ಹಾಗೂ ಶಿವಕೀರ್ತಿ ಸಿಂಗರಿದ್ದ ಪೀಠವು ಅದಕ್ಕೆ ಸೂಚಿಸಿತು.
ಕೇಂದ್ರ ಸರಕಾರದ ಪರ ಹಾಜರಿದ್ದ ವಕೀಲರು, ಪ್ರಸ್ತುತ ವಿಕೋಪ ನಿಭಾವಣೆಗೆ ಸಂಬಂಧಿಸಿದ ಯಾವುದೇ ರಾಷ್ಟ್ರೀಯ ಯೋಜನೆ ಅಸ್ತಿತ್ವದಲ್ಲಿಲ್ಲ. ಆದರೆ, ಪರಿಹಾರ ಹಾಗೂ ಪುನರ್ವಸತಿಗೆ ಸಂಬಂಧಿಸಿದ ನೀತಿಯಿದೆಯೆಂದು ನ್ಯಾಯಪೀಠಕ್ಕೆ ತಿಳಿಸಿದರು.
ಕರಡು ಯೋಜನೆ ಈಗಾಗಲೇ ಸಿದ್ಧಗೊಂಡಿದೆ. ಅದರ ಮಂಜೂರಾತಿ ಬಾಕಿಯಿದೆ. ಅದನ್ನು ಒಂದು ತಿಂಗಳೊಳಗಾಗಿ ಮಾಡಲಾಗುವುದೆಂದು ಅವರು ಹೇಳಿದರು.