×
Ad

ಮೆಹಬೂಬ ಸರಕಾರದ ಇನ್ನಿಂಗ್ಸ್ ಆರಂಭವಾಗುವ ಮೊದಲೇ ಪ್ರಥಮ ವಿಕೆಟ್ ಪತನ !

Update: 2016-04-06 21:37 IST

ಶ್ರೀನಗರ , ಎ. 6 : ಮಾಜಿ ಪ್ರತ್ಯೇಕತಾವಾದಿ , ಹಾಲಿ ಬಿಜೆಪಿ ರಾಜಕಾರಣಿ ಸಜ್ಜಾದ್ ಗನಿ ಲೋನ್ ನೂತನ ಪಿಡಿಪಿ - ಬಿಜೆಪಿ ಸರಕಾರದಲ್ಲಿ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಮರುದಿನವೇ ರಾಜೀನಾಮೆ ನೀಡಿದ್ದಾರೆ . ಆದರೆ ಅವರ ರಾಜೀನಾಮೆ ಸ್ವೀಕರಿಸುವ ಕುರಿತು ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಇನ್ನೂ ಯಾವುದೇ ನಿರ್ಧಾರ ಪ್ರಕಟಿಸಿಲ್ಲ. ಅವರು ಈ ಬಗ್ಗೆ ಬಿಜೆಪಿಯ ಅಭಿಪ್ರಾಯಕ್ಕಾಗಿ ಕಾಯುತ್ತಿದ್ದಾರೆ.  

ಮಾಜಿ ಪ್ರತ್ಯೇಕತಾವಾದಿ ನಾಯಕ ಅಬ್ದುಲ್ ಗನಿ ಲೋನ್ ಅವರ ಪುತ್ರ ಸಜ್ಜಾದ್ ಅವರು ತಮಗೆ ನೀಡಲಾದ ಸಾಮಾಜಿಕ ನ್ಯಾಯ ಹಾಗು ಆಡಳಿತ ಸುಧಾರಣೆ ಇಲಾಖೆಯ ಬಗ್ಗೆ ಅತೃಪ್ತಿಯಿಂದ ರಾಜೀನಾಮೆ ನೀಡಿದ್ದಾರೆಂದು ತಿಳಿದು ಬಂದಿದೆ. ಈ ಹಿಂದಿನ ಮುಫ್ತಿ ಮುಹಮ್ಮದ್ ಸಯೀದ್ ಅವರ ಸರಕಾರದಲ್ಲೂ ಪಶು ಸಂಗೋಪನೆ ಖಾತೆ ನೀಡಿದ್ದಾಗ ಅವರು ರಾಜೀನಾಮೆ ನೀಡಿದ್ದರು. ಬಳಿಕ ಅವರ ಮನವೊಲಿಸಲಾಗಿತ್ತು. 

ಲೋನ್ ಇದೀಗ ನೇರವಾಗಿ ದೆಹಲಿಗೆ ತೆರಳಿದ್ದಾರೆ. ಅಲ್ಲಿ ಅವರು ಕಣ್ಣಿನ  ಚಿಕಿತ್ಸೆ ಮಾಡಿಸಲು ಹೋಗಿದ್ದಾರೆ ಎಂದು ಅವರ ಆಪ್ತ ವಲಯ ತಿಳಿಸಿದೆ. ಆದರೆ ಅವರು ರಾಜಧಾನಿಯಲ್ಲಿ ಹಿರಿಯ ಬಿಜೆಪಿ ನಾಯಕರನ್ನು ಭೇಟಿಯಾಗುವ ಸಾಧ್ಯತೆ ಇಲ್ಲದಿಲ್ಲ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News