×
Ad

ಸಿಬಿಎಸ್‌ಇ 12ನೆ ತರಗತಿ ಗಣಿತ ಮರುಪರೀಕ್ಷೆ ಇಲ್ಲ

Update: 2016-04-06 23:47 IST

ಹೊಸದಿಲ್ಲಿ, ಎ.6: ಕೇಂದ್ರ ಮಾಧ್ಯಮಿಕ ಶಿಕ್ಷಣ ಮಂಡಳಿ 12ನೆ ತರಗತಿಯ ಗಣಿತ ವಿಷಯದ ಮರು ಪರೀಕ್ಷೆ ನಡೆಸಲು ನಿರ್ಧರಿಸಿದೆ ಎಂಬ ವದಂತಿಗಳನ್ನು ಸಿಬಿಎಸ್‌ಇ ತಳ್ಳಿಹಾಕಿದೆ.

ಗಣಿತ ವಿಷಯದ ಮರು ಪರೀಕ್ಷೆ ಸಾಧ್ಯತೆ ಇಲ್ಲ ಎಂದು ಸಿಬಿಎಸ್‌ಇ ಸ್ಪಷ್ಟಪಡಿಸಿದೆ. ನಕಲಿ ಸುತ್ತೋಲೆ ಸಾಮಾಜಿಕ ಜಾಲತಾಣಗಳಲ್ಲಿ ವೈರಸ್‌ನಂತೆ ಹರಡಿದ ಹಿನ್ನೆಲೆಯಲ್ಲಿ, ಸಿಬಿಎಸ್‌ಇ ಗಣಿತದ ಮರುಪರೀಕ್ಷೆ ನಡೆಸಲಿದೆ ಎಂಬ ವದಂತಿ ದಟ್ಟವಾಗಿ ಹಬ್ಬಿತ್ತು. ಬಹುತೇಕ ವಿದ್ಯಾರ್ಥಿಗಳು ಸುತ್ತೋಲೆಯ ಕೆಳಗೆ ಬರೆಯಲಾಗಿದ್ದ ದಿವಸ್ ಮೂರ್ಖ ಪದವನ್ನು ನೋಡಲು ಮರೆತಿದ್ದರು.
ಅದಾಗ್ಯೂ ಆರಂಭಿಕ ವದಂತಿಗಳ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಲ್ಲಿ ಗೊಂದಲ ಸೃಷ್ಟಿಯಾಗಿದ್ದು, ಮಾನವ ಸಂಪನ್ಮೂಲ ಅಭಿವೃದ್ಧಿ ಖಾತೆ ಸಚಿವೆ ಸ್ಮತಿ ಇರಾನಿಯವರಿಗೆ ಟ್ವೀಟ್ ಮಾಡಿ ಸ್ಪಷ್ಟನೆ ಕೋರಿದ್ದರು.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News