ಮನೆಕೆಲಸದವರಿಗಿಂತ ಕೆಟ್ಟದಾಗಿದೆ ಖ್ಯಾತ ನಟಿಯರ ಸ್ಥಿತಿ!
ಹೊಸದಿಲ್ಲಿ, ಎ.6: ಖ್ಯಾತ ಚಲನಚಿತ್ರ ಮತ್ತು ಟಿವಿ ನಟಿಯರು ಭಾಷಣಗಳಲ್ಲಿ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತಾರಾದರೂ, ಅವರ ವೈಯಕ್ತಿಕ ಬದುಕಿನ ಸ್ಥಿತಿ ಮನೆ ಕೆಲಸದವರಿಗಿಂತಲೂ ಕೆಟ್ಟದಾಗಿದೆಯೆಂದು ಹಿರಿಯ ಚಿತ್ರ ನಿರ್ಮಾತೃ ಮಹೇಶ್ ಭಟ್ ಹೇಳಿದ್ದಾರೆ.
ಆತ್ಮಹತ್ಯೆಯೆಂದು ಶಂಕಿಸಲಾದ ಟಿವಿ ನಟಿ ಪ್ರತ್ಯೂಷಾ ಬ್ಯಾನರ್ಜಿ ಸಾವಿನ ಹಿನ್ನೆಲೆಯಲ್ಲಿ ಅವರ ಹೇಳಿಕೆ ಮಹತ್ವ ಪಡೆದಿದೆಯಲ್ಲದೆ ಯಶಸ್ವಿ ಮಹಿಳೆಯರು ತಮ್ಮ ಸಂಗಾತಿಗಳ ವಿಚಾರ ಬಂದಾಗ ದುರ್ಬಲರಾಗುತ್ತಿರುವ ಬಗೆಗಿನ ಹಳೆಯ ವಿವಾದವೊಂದನ್ನು ಮತ್ತೆ ಕೆದಕಿದ್ದಾರೆ. ವೃತ್ತಿಯಲ್ಲಿ ಯಶಸ್ಸುಈ ಶೋಬಿಝ್ ಲೋಕದಲ್ಲಿ ಭಾವನಾತ್ಮಕ ಸ್ವಾತಂತ್ರ್ಯಕ್ಕೆ ಸಮನಾಗುವುದಿಲ್ಲವೆಂಬುದು ಭಟ್ ಅಭಿಪ್ರಾಯ.
‘‘ಇದು ನಿಜವಾಗಿಯೂ ಒಂದು ದೊಡ್ಡ ದುರಂತ. ಮಹಿಳೆಯರ ಆರ್ಥಿಕ ಸಬಲೀಕರಣದಿಂದಾಗಿ ಅವರು ತಮ್ಮ ಸಂಗಾತಿಗಳಿಂದ ಯಾವುದೇ ರೀತಿಯ ಶೋಷಣೆಯಿಂದ ಮುಕ್ತರಾಗಬಹುದೆಂದು ನಾನು ಒಂದು ಕಾಲ ತಿಳಿದು ಕೊಂಡಿದ್ದೆ,ೞೞಎಂದು ಭಟ್ ಹೇಳಿದರು. ಅದೇ ಸಮಯ ಆರ್ಥಿಕವಾಗಿ ದುರ್ಬಲರಾಗಿರುವ ಮಹಿಳೆಯರನ್ನು ನಾನು ನೋಡಿದ್ದೇನೆ. ಆದರೆ ಅವರು ತಮ್ಮ ಗಂಡಂದಿರ ಶೋಷಣೆಯನ್ನು ಸಹಿಸಿಕೊಳ್ಳದೆ ಅದನ್ನು ವಿರೋಧಿಸಿ ಬಹಿರಂಗವಾಗಿ ಸಂಬಂಧದಿಂದ ಹೊರನಡೆಯುತ್ತಾರೆ,’’ಎಂದೂ ಭಟ್ ತಿಳಿಸಿದರು.