×
Ad

ಹನ್ನೆರಡು ರಾಜ್ಯಗಳಲ್ಲಿ ನೀರಿಗಾಗಿ ಹಾಹಾಕಾರ, ದಂಗೆ ಏಳುವ ಸ್ಥಿತಿ: ಕೇಂದ್ರ ಜಲ ಆಯೋಗದ ವರದಿ

Update: 2016-04-07 12:23 IST

ಹೊಸದಿಲ್ಲಿ, ಎಪ್ರಿಲ್.7: ಹನ್ನೆರಡು ರಾಜ್ಯಗಳಲ್ಲಿ ನೀರಿಗಾಗಿ ಹಾಹಾಕಾರ ಭುಗಿಲೆದ್ದಿದ್ದು ದಂಗೆಯೇ ನಡೆಯಬಹುದೆಂದು ವರದಿಗಳುತಿಳಿಸಿವೆ. ದೇಶದ 91 ಜಲಾಶಯ ನೀರಿನ ಕೊರತೆಯನ್ನು ಎದುರಿಸುತ್ತಿದೆ. ಕೇವಲ ಶೇ.25ರಷ್ಟು ನೀರು ಮಾತ್ರ ಇದೆ. ಕೇಂದ್ರ ಜಲ ಆಯೋಗದ ವರದಿ ಪ್ರಕಾರ ಮಾರ್ಚ್31ಕ್ಕೆ ದೇಶದ ಪ್ರಮುಖ91 ಜಲಾಶಯಗಳಲ್ಲಿ ಕೇವಲ 39.651 ಅರಬ್ ಕ್ಯೂಬಿಕ್ ಮೀಟರ್ ನೀರು ಇತ್ತು. ಕಳೆದ ವರ್ಷಕ್ಕೆ ಹೋಲಿಸುವಾಗ ಶೇ.31ರಷ್ಟು ಕಡಿಮೆ ಇದು.

ಜಲಾಶಯದಲ್ಲಿ ಇರುವ ನೀರು ಕಳೆದ ಹತ್ತುವರ್ಷಗಳ ಅನುಪಾತಕ್ಕಿಂತಲೂ ಶೇ.25ರಷ್ಟು ಕಡಿಮೆ ಪ್ರಮಾಣದಲ್ಲಿದೆ. ಕೇಂದ್ರ ಜಲ ಆಯೋಗ ಅತ್ಯಧಿಕ ನೀರಿನ ಬರ ಎದುರಿಸುವ ರಾಜ್ಯಗಳೆಂದು ಉತ್ತರಾ ಖಂಡ, ಆಂಧ್ರಪ್ರದೇಶ, ಮಹಾರಾಷ್ಟ್ರ ತಮಿಳ್ನಾಡುಗಳನ್ನು ಗುರುತಿಸಿದೆ.

ಮಹಾರಾಷ್ಟ್ರದ ಮರಾಠವಾಡ, ಉತ್ತರ ಮಹಾರಾಷ್ಟ್ರ ಮತ್ತು ವಿದರ್ಭಗಳ 14 ಜಿಲ್ಲೆಗಳಲ್ಲಿ ಬರ ಪರಿಸ್ಥಿತಿಯಿದ್ದು ನೀರಿಗಾಗಿ ಹಾಹಾಕಾರ ಮಡುಗಟ್ಟಿದೆ. ಜನರು ದಂಗೆಯೇಳುವ ಸ್ಥಿತಿ ನಿರ್ಮಾಣವಾಗಿದೆ. ಆದ್ದರಿಂದ ಲಾತೂರ್‌ನ ಪರಿಭಣಿ ಜಿಲ್ಲೆಯಲ್ಲಿ ಸೆಕ್ಷನ್144 ಜಾರಿಗೊಳಿಸಲಾಗಿದೆ. ವಿಧಾನ ಪರಿಷತ್‌ನ ವಿಪಕ್ಷ ನಾಯಕ ಧನಂಜಯ ಮುಂಡೆ ಹೇಳಿರುವ ಪ್ರಕಾರ 25ಲಕ್ಷಕ್ಕೂ ಅಧಿಕ ರೈತರು ಗ್ರಾಮವನ್ನು ತೊರೆದಿದ್ದಾರೆ. ಗ್ರಾಮ ಭಣಗುಟ್ಟುತ್ತಿದೆ. ಬುಂದೇಲ್‌ಖಂಡದ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿಗಾಗಿ ತೀವ್ರಸಂಕಷ್ಟ ಬಂದೆರಗಿದೆ. ಬೋರ್‌ವೆಲ್ ಬತ್ತಿಹೋಗಿವೆ. ನೀರು ಮತ್ತಷ್ಟು ಆಳಕ್ಕೆ ಇಳಿದಿದೆ. ನೀರಿಲ್ಲದೆ ಕೃಷಿಕಾರ್ಯ ಆಗದೆ ಆಹಾರ ಸಮಸ್ಯೆಯೂ ಸೃಷ್ಟಿಯಾಗಿದೆ ಎಂದು ವರದಿಗಳು ತಿಳಿಸಿವೆ.ಕೃಷಿ ಕಾರ್ಮಿಕರಿಗೆ ಕೆಲಸ ದೊರೆಯುತ್ತಿಲ್ಲ. ಬರದಿಂದಾಗಿ ನಗರ ಜನಸಂಖ್ಯೆಯ ಮೇಲೆಯೂ ಕೆಟ್ಟ ಪ್ರಭಾವ ಆಗಿದೆ. ಝಾನ್ಸಿಯ ಕೆಲವು ಭಾಗದಲ್ಲಿ ಕುಡಿವ ನೀರಿನ ತಾತ್ವಾರ ಭುಗಿಲೆದ್ದಿದೆ. ನೀರಿನ ಟ್ಯಾಂಕರ್ ಮೂಲಕ ನೀರು ಒದಗಿಸುವ ಕೆಲಸ ಜಾರಿಯಲ್ಲಿದೆ. ಉತ್ತರ ಪ್ರದೇಶಡ, ಹರಿಯಾಣ ಸಹಿತ 12 ರಾಜ್ಯಗಳ ಕೆಲವು ಪ್ರದೇಶಗಳಲ್ಲಿ ನೀರಿನ ಕ್ಷಾಮ ಭೀಷಣವಾಗಿದೆ. ಕರ್ನಾಟಕ, ಮಧ್ಯಪ್ರದೇಶ,ಆಂಧ್ರ ತೆಲಂಗಾಣ, ಗುಜರಾತ್, ಒಡಿಸ್ಸಾ, ಜಾರ್ಖಂಡ್ ಮಹಾರಾಷ್ಟ್ರ ಬಿಹಾರಗಳಲ್ಲೂ ನೀರಿನ ಕ್ಷಾಮ ತಲೆದೋರಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News