ಈಗ ಮಹಿಳೆಯರು ಚಲಾಯಿಸಲಿದ್ದಾರೆ ಇ ರಿಕ್ಷಾ!
ಲುಧಿಯಾನ, ಎಪ್ರಿಲ್.7; ಲುಧಿಯಾನದಲ್ಲಿ ಮಹಿಳೆಯರ ಸಶಕ್ತೀರಣಕ್ಕಾಗಿ ಜಿಲ್ಲಾಡಳಿತ ಕ್ರಾಂತಿಕಾರಿ ಹೆಜ್ಜೆ ಇರಿಸಿದ್ದು ಆದಕಾರಣ ಹೀರೊ ಗ್ರೂಪ್‌ನೊಂದಿಗೆ ಸೇರಿ ನಗರದಲ್ಲಿ ಇ-ರಿಕ್ಷಾ ಚಲಾಯಿಸಲು ಮಹಿಳೆಯರಿಗೆ ಅವಕಾಶವನ್ನು ಮಾಡಿಕೊಟ್ಟಿದೆ. ವರದಿಯಾಗಿರುವಂತೆ ಈ ವಾಹನದಲ್ಲಿ ಕೇವಲ ಮಹಿಳೆಯರು ಪ್ರಯಾಣಿಸುತ್ತಾರೆ.
ಮೊದಲ ಹಂತದಲ್ಲಿ ಹತ್ತು ಇರಿಕ್ಷಾ ತಯಾರಿಸಲಾಗಿದೆ. ಹೀರೋ ಸೈಕಲ್ ಸಹಯೋಗ ನೀಡಿದೆ. ಜಿಲ್ಲಾಧಿಕಾರಿ ರವಿ ಭಗತ್ ಮತ್ತು ಎಡಿಸಿಮಿಸ್ ಅಪನೀತ್ ರಿಯಾತ್‌ರು ಆರಂಭದಲ್ಲಿ ಈ ವಾಹನ ಕೆಲವು ಮಹಿಳೆಯರು ಯುವತಿಯರು ಅಧಿಕ ಕಂಡು ಬರುವ ಆಯ್ದ ಮಾರ್ಗಗಳಲ್ಲಿ ಚಲಿಸುವುದು. ಇದರಲ್ಲಿ ಸುರಕ್ಷೆಯ ಕುರಿತು ಸಂಪೂರ್ಣ ಗಮನ ಹರಿಸಲಾಗುವುದು. ಇ ರಿಕ್ಷಾವನ್ನು ಸಾರಿಗೆ ಕಚೇರಿಯಲ್ಲಿ ನೋಂದಾಯಿಸಿಕೊಳ್ಳಲಾಗುವುದು ಎಂದು ಹೇಳಿರುವುದಾಗಿ ವರದಿಗಳು ತಿಳಿಸಿವೆ. ಮಹಿಳೆಯರ ಮತ್ತು ಯುವತಿಯರ ಸಶಕ್ತೀಕರಣವೆ ಇ ರಿಕ್ಷಾಗಳನ್ನು ಮಹಿಳೆಯರ ಮೂಲಕ ಆರಂಭಿಸಲು ಕಾರಣವಾಗಿದೆ. ರಿಕ್ಷಾ ಚಾಲಕಿರಿಗೆ ತರಬೇತಿ ನೀಡುವ ಕಾರ್ಯವನ್ನು ಸುಝಕಿ ಕಂಪೆನಿ ವಹಿಸಿಕೊಂಡಿದೆ. ತರಬೇತಿಗೆ ಹದಿನೆಂಟು ವರ್ಷ ಮೇಲ್ಪಟ್ಟವರು ಯೋಗ್ಯರಿರುತ್ತಾರೆ. ಅವರ ಬಳಿ ಚಾಲಕ ಪರವಾನಿಗೆ ಇರಬೇಕಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಒಂದು ಸಲಯೋಜನೆ ಚಾಲನೆ ಸಿಕ್ಕಿದರೆ ನಂತರ ಲೈಸೆನ್ಸ್ ಇಲ್ಲದ ಮಹಿಳೆ ಮತ್ತು ಯುವತಿಯರಿಗೆ ರಿಕ್ಷಾ ಚಾಲನೆ ಕಲಿಸಿ ಲೈಸೆನ್ಸ್ ತೆಗೆದು ಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಹೇಳಿದ್ದಾರೆ.