40ಕೋಟಿ ಜನರಿಗೆ ಕೌಶಲ್ಯ ನೀಡಲು ಆಸ್ಟ್ರೇಲಿಯ ಸರಕಾರ ಭಾರತಕ್ಕೆ ನೆರವಾಗುತ್ತಿದೆ: ಆಂಡ್ರೂ ರಾಬ್
ಹೊಸದಿಲ್ಲಿ, ಎಪ್ರಿಲ್.7: 2020ಕ್ಕಾಗುವಾಗ 40ಕೋಟಿಗೂ ಅಧಿಕ ಭಾರತೀಯರನ್ನು ಕುಶಲರನ್ನಾಗಿಸುವ ಭಾರತದ ಗುರಿಗೆ ನೆರವಾಗಲು ಆಸ್ಟ್ರೇಲಿಯ ಸರಕಾರ ದೇಶದಲ್ಲಿ ತರಬೇತಿ ಮತ್ತು ಮೂಲ್ಯಂಕ ಪಠ್ಯಕ್ರಮವನ್ನು ಆರಂಭಿಸಿದೆ.
ಆರು ರಾಜ್ಯಗಳಲ್ಲಿ ಈಗಾಗಲೇ ಆರಂಭಿಸಲಾದ ಪೈಲೆಟ್ ಪರಿಯೋಜನೆ ಮೂಲಕ ಆಸ್ಟ್ರೇಲಿಯ ಸರಕಾರ ಮ್ಯಾನೇಜ್‌ಮೆಂಟ್, ಇಂಜಿನಿಯರಿಂಗ್, ಆರೋಗ್ಯದಂತಹ ವಿಭಿನ್ನ ಔದ್ಯೋಗಿಕ ಕ್ಷೇತ್ರಗಳಲ್ಲಿ ತರಬೇತಿದಾರರಿಗೆ ತಾಂತ್ರಿಕ, ವಾಣಿಜ್ಯಿಕ ಶಿಕ್ಷಣ ಹಾಗೂ ತರಬೇತಿಯನ್ನು ನೀಡಲಿದೆ ಎಂದು ಇಲ್ಲಿಂದ ವರದಿಯಾಗಿದೆ.
ವ್ಯಾಪಾರದ ಆಸ್ಟ್ರೇಲಿಯನ್ ವಿಶೇಷ ರಾಯಭಾರಿ ಆಂಡ್ರೂ ರಾಬ್‌ರು ಈ ಕಾರ್ಯಕ್ರಮದಲ್ಲಿ "ತರಬೇತಿದಾರರನ್ನು ತರಬೇತುಗೊಳಿಸು" ಎಂಬ ಆಧಾರದಲ್ಲಿ ಕೌಶಲ್ಯವನ್ನು ಒದಗಿಸುವುದು ಸೇರಿದೆ. ಕಳೆದ ಆರರಿಂದ ಒಂಬತ್ತು ತಿಂಗಳಲ್ಲಿ ಬೇರೆ ಬೇರೆ ರಾಜ್ಯಗಳಲ್ಲಿ ನಮ್ಮ ಪೈಲೆಟ್ ಪರಿಯೋಜನೆ ಪ್ರಚಲಿತದಲ್ಲಿದೆ. ಇದರಿಂದ ಪಿರಮಿಡ್ ಪ್ರಭಾವ ಆಗಲಿದ್ದು ಭಾರತದಲ್ಲಿ ತರಬೇತುದಾರರ ಸಂಖ್ಯೆ ಭಾರೀ ಪ್ರಮಾಣದಲ್ಲಿ ಹೆಚ್ಚಳವಾಗಲಿದೆ. ಕೆಲವೇ ವರ್ಷಗಳಲ್ಲಿ 40ಕೋಟಿ ಜನರಿಗೆ ತರಬೇತಿ ನೀಡುವ ಭಾರತದ ಯೋಜನೆ ಪೂರ್ತಿಗೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ ಎಂದು ವರದಿ ತಿಳಿಸಿದೆ.