ಸ್ಕಾರ್ಫ್ ಧರಿಸಿದ್ದಕ್ಕಾಗಿ ಪರೀಕ್ಷೆ ನಿಷೇಧಿಸಿದ ಘಟನೆ: ಸ್ಪಷ್ಟೀಕರಣ ಕೇಳಿದ ಕೇರಳ ಅಲ್ಪಸಂಖ್ಯಾತ ಆಯೋಗ

Update: 2016-04-07 09:03 GMT

ತಿರುವನಂತಪುರಂ, ಎಪ್ರಿಲ್.7: ಶಿರವಸ್ತ್ರ ಧರಿಸಿದ ವಿದ್ಯಾರ್ಥಿನಿಯನ್ನು ಕಳೆದ ಅಖಿಲಭಾರತ ಮೆಡಿಕಲ್ ಪ್ರವೇಶ ಪರೀಕ್ಷೆಯನ್ನು ಬರೆಯದಂತೆ ತಡೆದ ಘಟನೆಯ ಕುರಿತು ರಾಜ್ಯದ ಅಲ್ಪಸಂಖ್ಯಾತರ ಅಯೋಗ ಸಿಬಿಎಸಿ ಡೈರಕ್ಟರೇಟ್‌ನಿಂದ ಸ್ಪಷ್ಟೀಕರಣ ಕೇಳಿದೆ. ಕರುನಾಗನಪಳ್ಳಿ ನಿವಾಸಿಯಾದ ಆಲಿಯಾ ಫರ್ಝಾನ ಸಲ್ಲಿಸಿದ ದೂರಿನ ಹಿನ್ನೆಲೆಯಲ್ಲಿ ಅಯೋಗ ಈ ಸ್ಪಷ್ಟೀಕರಣವನ್ನು ಬಯಸಿದೆ. ಶಿರವಸ್ತ್ರವನ್ನು ತೆಗೆದಿರಿಸಬೇಕೆಂದು ಹೇಳಿದ್ದರಿಂದ ವಿದ್ಯಾರ್ಥಿನಿಗೆ ಪರೀಕ್ಷೆ ಬರೆಯುವುದು ಅಡ್ಡಿಯಾಗಿತ್ತು ಎಂದು ವರದಿಗಳು ತಿಳಿಸಿವೆ.

ಡ್ರೈವಿಂಗ್ ಟೆಸ್ಟ್‌ಗೆ ಅರ್ಜಿ ಸಲ್ಲಿಸಿದವರು ಮುಖವಸ್ತ್ರದಲ್ಲಿ ಕಿವಿ ತೋರುವ ರೀತಿಯಲ್ಲಿ ಫೋಟೊ ತೆಗೆಯಬಹುದು ಎಂದು ಕರುನಾಗಪಳ್ಳಿ ಜೊಯಿಂಟ್ ಆರ್‌ಟಿಒ ಸೂಚನೆಯ ವಿರುದ್ಧವೂ ಆಲಿಯಾ ದೂರು ನೀಡಿದ್ದು ಇದರಲ್ಲಿಯೂ ಆಯೋಗ ಕ್ರಮ ಸ್ವೀಕರಿಸಿದೆ. ಮುಖ ವಸ್ತ್ರ ಅಥವಾ ಶಿರವಸ್ತ್ರ ಇರುವಂತೆಯೇ ಫೋಟೋ ಸ್ವೀಕರಿಸಬೇಕೆಂದು ಆಯೋಗ ಆರ್‌ಟಿಒಗೆ ನಿರ್ದೇಶ ಜಾರಿಗೊಳಿಸಿದೆ. ಕೇರಳ ವಿಶ್ವವಿದ್ಯಾನಿಲಯದಲ್ಲಿ ಡಾ.ಕೆ.ಮುಹಮ್ಮದ್ ಬಶೀರ್‌ರನ್ನು ಸೆನೆಟ್ ಚುನಾವಣೆ ಪ್ರಕ್ರಿಯ ಸಮಯದಲ್ಲಿ ಎಸ್‌ಎಫ್‌ಐ ನಾಯಕ ಬಾಲಮುರಳಿ ನೇತೃತ್ವದ ತಂಡ ಹೊಡೆದಿರುವ ಘಟನೆಯ ಕುರಿತು ನೀಡಿದ ದೂರಿನಲ್ಲಿ ಆಯೋಗ ಎದುರು ಕಕ್ಷಿಗಳಿಗೆ ನೋಟಿಸ್ ಜಾರಿಗೊಳಿಸಿದೆ. ಬ್ರಹ್ಮೋಸ್ ಕಂಪೆನಿ ಅಧಿಕಾರಿಗಳು ಇಲ್ಲದ ತಪ್ಪಿಗೆ ತನ್ನನ್ನೂ ಸಹೋದ್ಯೋಗಿಗಳಿಗೂ ದೌರ್ಜನ್ಯವೆಸಗಿದ ಹಿನ್ನೆಲೆಯಲ್ಲಿ ನೀಡಲಾದ ಪಿ.ಶಜೀಂ ನೀಡಿದ ದೂರಿನಲ್ಲಿ ಆಯೋಗ ಸಾಕ್ಷ್ಯವನ್ನು ಸ್ವೀಕರಿಸಿ ಆದೇಶಕ್ಕಾಗಿ ಕಾಯ್ದಿರಿಸಿದೆ. ಹೀಗೆ ವಿವಿಧ ಪ್ರಕರಣಗಳ ದೂರುಗಳ ಆಧಾರದಲ್ಲಿ ಆಯೋಗ ಸಂಬಂಧಿಸಿದ ಕ್ರಮ ಕೈಗೊಂಡಿದೆ ಎಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News