ನೂರು ರುಪಾಯಿಗಾಗಿ ಪ್ರಾಣವನ್ನೇ ಕಳೆದುಕೊಂಡ ಯುವಕ
ನವದೆಹಲಿ : ಆ ಯುವಕ ತನ್ನಲ್ಲಿದ್ದ ನೂರು ರುಪಾಯಿಯನ್ನು ಕಳೆದುಕೊಂಡಿದ್ದ. ಅದಕ್ಕಾಗಿ ಆತ ರಾತ್ರಿಯೆಲ್ಲಾ ಹುಡುಕಾಡಿದ. ಆದರೆ ಅದು ಕೊನೆಗೂ ಸಿಗದಿದ್ದಾಗಿ ತನ್ನ ಪ್ರಾಣವನ್ನು ತನ್ನ ಕೈಯ್ಯಾರೆ ತೆಗೆದುಬಿಟ್ಟ. ಇದು ಪೂರ್ವ ದೆಹಲಿಯ ಕಲ್ಯಾಣಪುರಿಯ ಬಡ ಕುಟುಂಬದ 18ರ ಹರೆಯದ ಶಿವಂನ ದುರಂತ ಕಥೆ.ತನ್ನ ಪ್ರದೇಶದಲ್ಲಿ ನಡೆದ ವಿವಾಹ ಸಮಾರಂಭವೊಂದರಲ್ಲಿ ವೈಟರ್ ಆಗಿ ಕೆಲಸ ನಿರ್ವಹಿಸಿದ ಶಿವಂ ಅದಕ್ಕಾಗಿ ರೂ 300 ವೇತನ ಪಡೆದಿದ್ದ. ಆದರೆ ಮನೆಯತ್ತ ನಡೆಯುವಾಗ ತನ್ನಲ್ಲಿದ್ದ ನೂರು ರುಪಾಯಿಯ ಮೂರು ನೋಟುಗಳಲ್ಲಿ ಒಂದನ್ನು ಕಳೆದುಕೊಂಡು ಬಿಟ್ಟ. ದುಃಖ ತಡೆಯದಾಗಿ ರಾತ್ರಿಯೆಲ್ಲಾಅದಕ್ಕಾಗಿ ಹುಡುಕಾಡಿದನೆಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.
ಸ್ವಲ್ಪ ಸಮಯದ ನಂತರ ಆತ ನಾಪತ್ತೆಯಾಗಿದ್ದ. ಶಿವಂನ ತಂದೆ ಆತನನ್ನು ಹುಡುಕಿಕೊಂಡುಆತನ ಬಾಡಿಗೆ ಮನೆಗೆ ಬಂದಾಗ ಬಾಗಿಲು ಒಳಗಿನಿಂದ ಹಾಕಿತ್ತು. ಬಾಗಿಲು ಬಡಿದಾಗ ಯಾವುದೇ ಪ್ರತಿಕ್ರಿಯೆಯಿರಲಿಲ್ಲ. ಕೊನೆಗೆ ಬಾಗಿಲು ಒಡೆದು ಒಳ ಹೊಕ್ಕಾಗ ಆತನ ದೇಹ ಒಳಗೆ ಸೀಲಿಂಗಿನಿಂದ ನೇತಾಡುತ್ತಿತ್ತು. ಆತ ಅಮಲು ಪದಾರ್ಥದ ವ್ಯಸನಿಯಾಗಿದ್ದುದರಿಮದ ನಶೆಯ ಪ್ರಭಾವದಲ್ಲಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಶಿವಂಗೆ ಯಾವುದೇ ಸ್ಥಿರ ನೌಕರಿಯಿರಲಿಲ್ಲಹಾಗೂ ಮಯೂರ್ ವಿಹಾರ್ ಹೌಸಿಂಗ್ ಸೊಸೈಟಿಯಲ್ಲಿಪಾರ್ಟ್‌ಟೈಂ ನೌಕರಿ ಮಾಡುತ್ತಿದ್ದ.