×
Ad

ಬಿಹಾರ ಮದ್ಯ ನಿಷೇಧದಿಂದ ಬಾಯಾರಿರುವ ದೇವರುಗಳು !

Update: 2016-04-07 16:08 IST

ಪಾಟ್ನಾ, ಎ.7: ಬಿಹಾರದ ಸಂಪೂರ್ಣ ಮದ್ಯ ನಿಷೇಧ ಹೊಸ, ವಿಚಿತ್ರ ಸಮಸ್ಯೆಯೊಂದಕ್ಕೆ ದಾರಿ ಮಾಡಿದೆ. ಈಗ ಅಲ್ಲಿ ದೇವ - ದೇವತೆಗಳೇ ಮುನಿಸಿಕೊಂಡಿದ್ದಾರೆ. ಏಕಂದರೆ ಅಲ್ಲಿನ ಹಲವು ದೇವಾಲಯಗಳಲ್ಲಿ ಹೆಂಡ, ಸಾರಾಯಿ ಹಾಗು ಐ ಎಂ ಎಫ್ ಎಲ್  (Indian-made foreign liquor) ಗಳನ್ನು ಕಡ್ಡಾಯವಾಗಿ ದೇವರಿಗೆ ಅರ್ಪಿಸಲಾಗುತ್ತಿತ್ತು. ಈಗ ಈ ದೇವರುಗಳು ಅಕ್ಷರಶ: ಬಾಯಾರಿ, ಬಳಲುವಂತಾಗಿದೆ. 

ದಕ್ ಬಾಬಾ, ಮಾಸನ್ ಬಾಬಾ, ಗೊರಯಾ ಬಾಬಾ, ದಿಹ್ವಾಲ್ ಬಾಬಾ, ನುಖಾ ಬಾಬಾ ಹಾಗು ಭೈರವ್ - ಇತ್ಯಾದಿ ದಲಿತರು, ಮಹಾದಲಿತರು ಮತ್ತಿತರರು ಪೂಜಿಸುವ  ದೇವರುಗಳಿಗೆ ಅರ್ಪಿಸಲು ಮದ್ಯ ಇಲ್ಲದ ಪರಿಸ್ಥಿತಿ ಉಂಟಾಗಿದೆ. ಗಯಾದಲ್ಲಿ ಮದ್ಯ ನಿಷೇಧ ಆದ ಮೇಲೆ ಭಕ್ತರ ಸಂಖ್ಯೆ ಗಣನೀಯವಾಗಿ ಇಳಿದು ಅರ್ಚಕರು ತಲೆಬಿಸಿಯಲ್ಲಿದ್ದಾರೆ. ಕಳೆದ ಶನಿವಾರ ಕೆವಳು ಭಕ್ತರು ಅದು ಹೇಗೋ ಸಾರಾಯಿ ಸಂಪಾದಿಸಿ ತಂದರಾದರೂ ಪೊಲೀಸರು ಹಾಗು ಅಬಕಾರಿ ಇಲಾಖೆಯವರ ಬಿಗು ಬಂದೊಬಸ್ತಿನಿಂದಾಗಿ ಅವರಿಗೆ ಅದನ್ನು ದೇವರಿಗೆ ಅರ್ಪಿಸಲು ಸಾಧ್ಯವಾಗಿಲ್ಲ. 

" ನಮ್ಮ ದೇವರು ಕಪಾಲ್ ಭೈರವ್ ಕೇವಲ ಮದ್ಯವನ್ನು ಮಾತ್ರ ಮೊದಲ ಭೋಜನವಾಗಿ ಸ್ವೀಕರಿಸುತ್ತಾನೆ. ಆದರೆ ನಿಷೇಧದ ಬಳಿಕ 40% ಭಕ್ತರು ಬರುತ್ತಿಲ್ಲ. " ಎಂದು ಇಲ್ಲಿನ ಗೋದಾವರಿ ಮೊಹಲ್ಲ ಭೈರವ್ ದೇವಾಲಯದ ಅರ್ಚಕ ಅನಂತ್ ಮರಾಥೆ ಹೇಳುತ್ತಾರೆ. ಇದೇ ಪರಿಸ್ಥಿತಿ ದಕ್ ಬಾಬಾ ಹಾಗು ಸಂಸ್ಹಾನ್ ಬಾಬಾ ದೇವಳಗಳಲ್ಲೂ ಇದೆ. 

ಮಾಜಿ ಮುಖ್ಯಮಂತ್ರಿ ಜಿತನ್ ರಾಮ್ ಮಂಜಿ ಅವರ ಮುಸಹರ್ ಸಮುದಾಯಕ್ಕೆ  ಅವರ ಮಾಸನ್ ಬಾಬಾಗೆ ಮದ್ಯ ಅರ್ಪಿಸುವುದು ಸಂಸ್ಕೃತಿಯ ಅವಿಭಾಜ್ಯ ಅಂಗ. ಪ್ರತಿ ಹಬ್ಬಕ್ಕೆ, ಹುಟ್ಟಿಗೆ, ಮರಣಕ್ಕೆ, ವಾರ್ಷಿಕೋತ್ಸವಕ್ಕೆ ಅವರು ದೇಶೀ ಸಾರಾಯಿ ಅರ್ಪಿಸುತ್ತಾರೆ. " ನಾವು ಮದ್ಯ ಹಾಗು ಜೀವಂತ ಕೋಳಿ ಅರ್ಪಿಸಿ ದೇವರ ಆಶೀರ್ವಾದ ಪಡೆಯುತ್ತೇವೆ. ಈಗ ನಿಷೇಧದಿಂದ ಬಾಬಾ ನಮ್ಮನ್ನು ಬಿಟ್ಟು ಬೇರೆಡೆ ಹೋಗಬಹುದು " ಎಂದು ಅವರು ಆತಂಕ ವ್ಯಕ್ತಪಡಿಸುತ್ತಾರೆ. " ಇದರ ಪರಿಣಾಮವನ್ನು ಎದುರಿಸಲು ಸರಕಾರ ಸಿದ್ಧವಿರಲಿ " ಎಂಬ ಎಚ್ಚರಿಕೆಯನ್ನೂ ಅವರು ಕೊಡುತ್ತಾರೆ. 

ಒತ್ತಡಕ್ಕೆ ಮಣಿದು ಧಾರ್ಮಿಕ ಕಾರ್ಯಕ್ರಮಗಳಿಗೆ ಮದ್ಯ ಬಳಸುವ ಅನುಮತಿ ನೀಡುವ ಸಾಧ್ಯತೆಯೂ ಇದೆ ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಾರೆ.

Courtesy : Hindustantimes.com 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News