ಬಿಹಾರದಲ್ಲಿ ಈಗ ಮದ್ಯವೂ ಔಷಧ!
ಪಟ್ನಾ, ಎಪ್ರಿಲ್.8: ಶರಾಬು ಸಿಗದೆ ರೋಗಿಗಳಾದ ಜನರಿಗೆ ಸರಕಾರ ಗುರುವಾರ ಸ್ವಲ್ಪ ನೆಮ್ಮದಿಯನ್ನು ನೀಡಿದೆ. ಆರೋಗ್ಯ ವಿಭಾಗ ಅಧಿಸೂಚನೆ ಹೊರಡಿಸಿ ಇಂತಹ ಜನರಿಗೆ ಶರಾಬನ್ನು ಔಷಧದ ರೀತಿ ಬಳಸುವ ಅನುಮತಿ ನೀಡಲಾಗಿದೆ. ಔಷಧದ ರೂಪದಲ್ಲಿ ಕೇವಲ ಒಂದು ಬಾಟಲಿ ಬಳಕೆ ಮಾಡಬಹುದಾಗಿದೆ ಎಂದು ವರದಿಗಳು ತಿಳಿಸಿವೆ.
ಅಧಿಸೂಚನೆಯ ಪ್ರಕಾರ ಗಂಭೀರ ರೂಪದಲ್ಲಿ ಶರಾಬನ್ನು ಬಳಸುವವರಿಗೆ ಈಗ ದಿಢೀರನೆ ಶರಾಬು ಸಿಗದಿರುವ ಕಾರಣ ಅಸೌಖ್ಯವಾಗಿದ್ದರೆ ಅವರಿಗೆವೈದ್ಯರ ಸಲಹೆಯ ಪ್ರಕಾರ ಸೀಮಿತ ಪ್ರಮಾಣದಲ್ಲಿ ಶರಾಬನ್ನು ಬಳಸುವಂತೆ ಮಾಡಬಹುದಾಗಿದೆ.
ಆರೋಗ್ಯ ವಿಭಾಗ ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿ ಇಂತಹ ಜನರಿಗೆ ಪ್ರತಿ ವಾರದಲ್ಲಿ ಶರಾಬಿನ ಎರಡು ಬಾಟಲಿಯನ್ನು ನೀಡಬಹುದು ಎಂದು ಹೇಳಿದೆ. ಆದರೆ ಬಿಹಾರದಲ್ಲಿ ಇಂತಹ ಅನೇಕ ಪ್ರಕರಣಗಳು ಕಂಡು ಬಂದಿದ್ದು ನಶೆಮುಕ್ತಿ ಕೇಂದ್ರದದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರೋಗಿಗಳ ಆರೋಗ್ಯ ಸ್ಥಿತಿ ಶರಾಬು ಸಿಗದಿರುವುದರಿಂದ ಕೆಡುತ್ತಿದೆ ಎಂದು ವರದಿಯಾಗಿವೆ. ವೈದ್ಯರ ಒಂದು ವಿಭಾಗವು ಕುಡಿತ ಚಟ ದಿಢೀರನೆ ಕಡಿಮೆಯಾಗಲು ಸಾಧ್ಯವಿಲ್ಲ ಎಂದು ಹೇಳಿವೆ.
ಪರ್ಮಿಟ್‌ನಲ್ಲಿ ಮದ್ಯವು ಮದ್ಯಮುಕ್ತಿ ಕೇಂದ್ರದಲ್ಲಿ ಕೊನೆಪಕ್ಷ ಮೂರು ದಿನಗಳಾದರೂ ಚಿಕಿತ್ಸೆ ಪಡೆದವರಿಗೆ ಮಾತ್ರ ಸಿಗಲಿದೆ ಎಂದು ವರದಿಗಳು ತಿಳಿಸಿವೆ. ನಶೆ ಮುಕ್ತಿ ಕೆಂದ್ರದ ನೋಡಲ್ ಅಧಿಕಾರಿ ಮತ್ತು ಜಿಲ್ಲಾ ಆಸ್ಪತ್ರೆಯ ಉಪಾಧಿಕ್ಷರು ಈ ಪರ್ಮಿಟ್ ಹೇಗೆ ನೀಡಬಹುದೆಂಬುದನ್ನು ನಿರ್ಧರಿಸಲಿದ್ದಾರೆ ಎಂದು ವರದಿಗಳು ತಿಳಿಸಿವೆ.