×
Ad

ಮೀರಾ ಜಾಸ್ಮಿನ್ ರಿಟರ್ನ್

Update: 2016-04-10 17:09 IST

ಲಯಾಳಂ ಚಿತ್ರರಂಗದ ಜನಪ್ರಿಯ ನಟಿ ಮೀರಾ ಜಾಸ್ಮಿನ್, ವೈವಿಧ್ಯಮಯ ಪಾತ್ರಗಳಿಂದ ಚಿತ್ರರಸಿಕರ ಮನಸೂರೆಗೊಂಡ ಅಪ್ಪಟ ಕಲಾವಿದೆ. ಮಲಯಾಳಂ ಮಾತ್ರವಲ್ಲದೆ ತಮಿಳು, ತೆಲುಗು ಹಾಗೂ ಕನ್ನಡ ಚಿತ್ರಗಳಲ್ಲಿ ನಟಿಸಿರುವ ಈಕೆ 2014ರಲ್ಲಿ ವಿವಾಹವಾದ ಅಭಿನಯಕ್ಕೆ ಅಲ್ಪ ವಿರಾಮ ಹೇಳಿದ್ದರು. ಇದೀಗ ಮೀರಾ ಜಾಸ್ಮಿನ್ ಮತ್ತೆ ಸಿನೆಮಾದತ್ತ ಮುಖ ಮಾಡಿದ್ದಾರೆ. ಪತ್ರಕರ್ತ ಡಾನ್ ಮ್ಯಾಕ್ಸ್ ಪ್ರಪ್ರಥಮ ಬಾರಿಗೆ ನಿರ್ದೇಶಿಸುತ್ತಿರುವ ಚಿತ್ರವೊಂದರಲ್ಲಿ ಆಕೆ ನಾಯಕಿಯಾಗಿ ಅಭಿನಯಿಸಲಿದ್ದಾರೆ. ಈ ಚಿತ್ರದಲ್ಲಿ ಅವರು ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

   ಭಾವಾನಾತ್ಮಕ ಪಾತ್ರಗಳಲ್ಲಿಯೇ ಹೆಚ್ಚಾಗಿ ಅಭಿನಯಿಸಿರುವ ತನಗೆ, ಈ ಚಿತ್ರದ ಪೊಲೀಸ್ ಅಧಿಕಾರಿ ಪಾತ್ರ ತುಂಬಾ ಚ್ಯಾಲೆಂಜಿಂಗ್ ಆಗಿದೆಯೆಂದು ಎಂದಾಕೆ ಹೇಳುತ್ತಾರೆ. ಅಪರಾಧ ಘಟನೆಯ ಸುತ್ತ ತಿರುಗುವ ಕಥೆಯುಳ್ಳ ಈ ಚಿತ್ರಕ್ಕೆ ‘ಪತ್ತ್ ಕಲ್ಪನಂಗಳ್’ ಎಂದು ಹೆಸರಿಡಲಾಗಿದೆ. ಮಲಯಾಳಂನ ಜನಪ್ರಿಯ ನಟ ಅನೂಪ್ ವೆುನನ್, ಮುರಳಿ ಗೋಪಿ ಚಿತ್ರದ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಚಿತ್ರದಲ್ಲಿ ಪ್ರತಿ ಪಾತ್ರಗಳೂ ಆಯಾಯ ಸನ್ನಿವೇಶಗಳಲ್ಲಿ ಮಹತ್ವವನ್ನು ಪಡೆದುಕೊಳ್ಳುತ್ತವೆ. ಇದುವೇ ಈ ಚಿತ್ರದ ವಿಶೇಷತೆಯೆಂದು ಮೀರಾ ಹೇಳುತ್ತಾರೆ. ಚಿತ್ರದ ಶೂಟಿಂಗ್ ಮೇನಲ್ಲಿ ಆರಂಭಗೊಳ್ಳಲಿದ್ದು, ನಿರ್ದೇಶಕ ಡಾನ್ ಮ್ಯಾಕ್ಸ್ ಸ್ವತಃ ಕಥೆ,ಚಿತ್ರಕಥೆ ಬರೆದಿದ್ದಾರೆ. ಈ ಚಿತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದ ಬಿಗ್ ಬಜೆಟ್ ಚಿತ್ರವೊಂದರಲ್ಲಿಯೂ ಆಕೆ ನಟಿಸಲಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News