×
Ad

9ರ ಬಾಲಕನನ್ನು ತನ್ನ ಪುನರಾವತಾರವೆಂದು ಘೋಷಿಸಿದ ದಲಾಯಿ ಲಾಮಾ

Update: 2016-04-11 16:25 IST

ಡಾರ್ಜಿಲಿಂಗ್ : ಹದಿನಾಲ್ಕನೇ ದಲಾಯಿ ಲಾಮಾರವರುಡಾರ್ಜಿಲಿಂಗಿನ ಒಂಬತ್ತು ವರ್ಷದ ದಾವಾ ವಾಂಗ್ಡಿ ಎಂಬ ಬಾಲಕನನ್ನು ಡ್ರಾಕ್ಟ್ಸೆಅಥವಾ ಬ್ರಾತ್ಸೆ ರಿನ್‌ಪೋಚ್ ಅಂದರೆ ತನ್ನ ಪುನರಾವತಾರವೆಂದು ಗುರುತಿಸಿದ್ದಾರೆ.

ದಲಾಯಿ ಲಾಮಾರ ಕಚೇರಿಯಿಂದ ಬಂದ ಅಧಿಕೃತ ಪತ್ರವೊಂದರಲ್ಲಿ ತಿಳಿಸಿರುವಂತೆಅವರ ಪುನರಾವತಾರವೆಂದು ತಿಳಿಯಲಾದ ಬಾಲಕನ ತಂದೆ ತಾಯಿಯನ್ನು ಪೇಮಾ ವಾಂಗ್ಡಿ ಹಾಗೂ ಸಂಜು ರೈ ಎಂದು ಮಾಹಿತಿ ನೀಡಲಾಗಿದೆ.

ದಲಾಯಿ ಲಾಮಾರವರ ಹಿಂದಿನ ಪುನರಾವತಾರಗಳಾಗಿದ್ದವರು ತವಂಗ್ ಜಿಲ್ಲೆಯ ಮೋನ್ಪಾ ಸಮುದಾಯಕ್ಕೆ ಸೇರಿದವರಾಗಿದ್ದು ಅವರಿಗೆಜಿಲ್ಲೆಯಲ್ಲಿ ಸಾಕಷ್ಟು ಸಂಖ್ಯೆಯ ಅನುಯಾಯಿಗಳಿದ್ದಾರೆ.

ದಲಾಯಿ ಲಾಮಾರ ಈ ಹಿಂದಿನ ಪುನರಾವತಾರವೆಂದು ಕರೆಸಿಕೊಳ್ಳುತ್ತಿದ್ದ ಡ್ರಾಕ್ಟ್ಸೆ ತುಪ್ಡೆನ್ ತೆನ್ಪಾ ಗ್ಯಾಲ್ಟ್ಸೆನ್ ರಿನ್‌ಪೋಚ್ನವೆಂಬರ್ 1, 2004ರಲ್ಲಿಮೃತಪಟ್ಟಿದ್ದರು. ಮೈಸೂರಿನಲ್ಲಿ ದಾರ್ಮಿಕಶಿಕ್ಷಣ ಪೂರೈಸಿದ್ದ ಅವರುತಮ್ಮ ಜೀವನವನ್ನು ಸಮಾಜ ಸೇವೆ ಹಾಗೂ ಧಾರ್ಮಿಕ ಕಾರ್ಯಗಳಿಗೆ ಮೀಸಲಾಗಿರಿಸಿದ್ದರು.

ದಲಾಯಿ ಲಾಮಾರ ಹೊಸ ಪುನರಾವತಾರವೆಂದು ತಿಳಿಯಲಾಗಿರುವ ಬಾಲಕನ ಪಟ್ಟಾಭಿಷೇಕ ಸಮಾರಂಭ ಬರುವ ವರ್ಷ ನಡೆಯಲಿದೆಯೆಂದು ತಿಳಿದು ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News