‘ಶನಿ ದೇವಳಕ್ಕೆ ಮಹಿಳೆಯರ ಪ್ರವೇಶ ಅತ್ಯಾಚಾರಗಳಿಗೆ ಆಹ್ವಾನ’ : ಸ್ವರೂಪಾನಂದ ವಿವಾದ
ನವದೆಹಲಿ : ‘‘ಮಹಾರಾಷ್ಟ್ರದ ಖ್ಯಾತ ಶನಿ ದೇವಸ್ಥಾನದ ಗರ್ಭಗುಡಿಯೊಳಗೆ ಮಹಿಳೆಯರ ಪ್ರವೇಶವು ಹೆಚ್ಚು ಅತ್ಯಾಚಾರಗಳಿಗೆ ದಾರಿ ಮಾಡಿ ಕೊಡುವುದು,’’ ಎಂದು ಹೇಳಿ ಹಿರಿಯ ಧಾರ್ಮಿಕ ನಾಯಕ ಶಂಕರಾಚಾರ್ಯ ಸ್ವರೂಪಾನಂದ ವಿವಾದಕ್ಕೆ ಗುರಿಯಾಗಿದ್ದಾರೆ. ಶತಮಾನಗಳಷ್ಟು ಹಳೆಯ ಶನಿ ಶಿಂಗ್ನಾಪುರ ದೇವಳಕ್ಕೆ ಮಹಿಳೆಯರು ಪ್ರವೇಶಿಸಿ ಒಂದೆರಡು ದಿನಗಳಾಗಿರುವಾಗಲೇಸ 94 ವರ್ಷದ ಸ್ವರೂಪಾನಂದರ ಹೇಳಿಕೆ ಹೊರಬಿದ್ದಿದೆ.
ಈ ವರ್ಷದ ಜನವರಿಯಲ್ಲಿ ಮಹಿಳೆಯರು ಶನಿ ದೇವಳದೊಳಗೆ ಬಲವಂತವಾಗಿ ಪ್ರವೇಶಿಸಲೆತ್ನಿಸಿದಾಗ‘ಶನಿಯ ಪ್ರಭಾವ ಮಹಿಳೆಯರಿಗೆ ಹಾನಿಕರ’ವೆಂದು ಸ್ವರೂಪಾನಂದ ಹೇಳಿದ್ದರು.
ಮಹಿಳೆಯರಿಗೆ ಮತ್ತು ಪುರುಷರಿಗೆ ದೇವಳ ಪ್ರವೇಶಾತಿ ವಿಚಾರದಲ್ಲಿ ಸಮಾನ ಹಕ್ಕಿರಬೇಕೆಂದು ಹೇಳಿ ಸುಪ್ರೀಂ ಕೋರ್ಟಿನ ಮುಂದೆ ಸಲ್ಲಿಸಿರುವ ಅರ್ಜಿಯೊಂದುಶಬರಿಮಲೆ ದೇವಸ್ಥಾನಕ್ಕೆ ಸಂತಾನೋತ್ಪತ್ತಿ ವಯಸ್ಸಿನ ಮಹಿಳೆಯರ ಪ್ರವೇಶ ನಿಷೇಧವನ್ನೂ ಪ್ರಶ್ನಿಸಿದ್ದುಈ ಪ್ರಕರಣದ ವಿಚಾರಣೆ ನಡೆಯುತ್ತಿದ್ದು‘‘ನೀನೊಬ್ಬಳು ಮಹಿಳೆಯಾಗಿದ್ದರಿಂದ ನೀನು ಇಲ್ಲಿಗೆ ಬರಬಾರದು ಎಂದು ಹೇಳಲು ಸಾಧ್ಯವೇ? ಮಹಿಳೆಯರಿಗೆ ದೇವಳ ಪ್ರವೇಶ ನಿಷೇಧವೆಂದರೆ ಲಿಂಗ ಸಮಾನತೆ ಅಪಾಯಕಾರಿಯೆಂದು ಪರಿಗಣಿಸಲಾಗುತ್ತಿದೆಯೆಂದು ಅರ್ಥ,’’ ಎಂದು ಉನ್ನತ ನ್ಯಾಯಾಲಯದ ನ್ಯಾಯಾಧೀಶರು ಇಂದು ಅಭಿಪ್ರಾಯ ಪಟ್ಟಿದ್ದಾರೆ.ಮಹಿಳೆಯರ ದೇವಳ ಪ್ರವೇಶಾತಿ ನಿಷೇಧಅವರ ಸಾಂವಿಧಾನಿಕ ಹಕ್ಕುಗಳ ಉಲ್ಲಂಘನೆಯೆಂದು ಈ ಹಿಂದಿನ ವಿಚಾರಣೆ ಸಂದರ್ಭ ಕೋರ್ಟ್ ಹೇಳಿದ್ದರೆ, ಶಬರಿಮಲೆ ದೇವಳ ಟ್ರಸ್ಟ್ ಹಾಗೂ ಕೇರಳ ಸರಕಾರ ಮಹಿಳೆಯರಿಗೆ ವಿಧಿಸಲಾಗಿರುವ ನಿಷೇಧವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದವು.