ಸಾಯಿಬಾಬಾ ಪೂಜೆ ಅಶುಭ ಆದ್ದರಿಂದ ಮಹಾರಾಷ್ಟ್ರದಲ್ಲಿ ಬರಗಾಲವಾಗಿದೆ: ಶಂಕರಾಚಾರ್ಯ

Update: 2016-04-11 11:24 GMT

ಮುಂಬೈ, ಎಪ್ರಿಲ್.11: ದ್ವಾರಕಾ-ಶಾರದಾಪೀಠದ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿಯವರು ಶಿರಡಿ ಸಾಯಿಬಾಬಾ ಪೂಜೆ-ಅರ್ಚನೆಯ ಕುರಿತು ಪ್ರಶ್ನೆ ಎತ್ತಿದ್ದು ಮಹಾರಾಷ್ಟ್ರದ ಹಲವು ಗ್ರಾಮಗಳಲ್ಲಿ ಬರದ ಪರಿಸ್ಥಿತಿಗೆ ಸಾಯಿಪೂಜೆಯೇ ಜವಾಬ್ದಾರವಾಗಿದೆ ಎಂದು ಹೇಳಿರುವುದಾಗಿ ವೆಬ್‌ಪೋರ್ಟಲೊಂದು ವರದಿಮಾಡಿದೆ. ಮಹಾರಾಷ್ಟ್ರದ ಜನರು ಸಾಯಿಬಾಬಾ ಪೂಜೆ ಮಾಡುತ್ತಾರೆ. ಈ ಬರ ಅದರದ್ದೇ ಕೊಡುಗೆಯಾಗಿದೆ. ಹರಿದ್ವಾರ ಪ್ರಯಾಣದ ವೇಳೆ ಶಂಕರಾಚಾರ್ಯರು ಸಾಯಿ ಒಬ್ಬ ಫಕೀರ ಆದರೆ ಅವನನ್ನು ಒಬ್ಬ ಭಗವಂತನ ರೂಪದಲ್ಲಿ ಪೂಜಿಸುವುದು ಅಶುಭವಾಗಿದೆ. ಎಲ್ಲಿ ಭಕ್ತರು ಅಯೋಗ್ಯರ ಪೂಜೆ ಮಾಡುತ್ತಾರೋ ಅಲ್ಲಿ ಬರ, ಪ್ರಾಕೃತಿಕ ವಿಕೋಪಗಳು ಹಾಗೂ ಜನರ ಸಾವು ಸಂಭವಿಸುತ್ತದೆ. ಮಹಾರಾಷ್ಟ್ರ ಇಂತಹದ್ದರಲ್ಲಿ ಒಂದು ಸ್ಥಳವಾಗಿದೆ ಎಂದು ಅವರು ಹೇಳಿರುವುದಾಗಿ ವರದಿಯಾಗಿದೆ.

ಸಾಯಿಬಾಬಾರ ಬಗ್ಗೆ ಶಂಕರಾಚಾರ್ಯರು ಇಂತಹ ವಿವಾದಿತ ಹೇಳಿಕೆಯನ್ನು ನೀಡಿದ್ದರು. 2014ರಲ್ಲಿ ಅವರು ಸಾಯಿ ಪೂಜೆಯನ್ನು ವಿರೋಧಿಸುವುದಕ್ಕಾಗಿ ಧರ್ಮಸಂಸತ್ತನ್ನು ಆಯೋಜಿಸಿದ್ದರು. ಅಲ್ಲಿ ಸರ್ವಸಮ್ಮತಿಯಿಂದ ಸಾಯಿಪೂಜೆಯನ್ನು ಬಹಿಷ್ಕರಿಸಲು ಘೋಷಣೆ ಹೊರಡಿಸಲಾಗಿತ್ತೆಂದು ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News