×
Ad

ಮಾಲೆಗಾಂವ್ ಸ್ಫೋಟ: 9 ಮುಸ್ಲಿಮರು ಪ್ರಕರಣದಲ್ಲಿ ಭಾಗಿಯಲ್ಲ ಎಂದ ಎನ್‌ಐಎಯಿಂದಲೇ ದೋಷಮುಕ್ತಿಗೆ ವಿರೋಧ!

Update: 2016-04-13 11:12 IST

ಮುಂಬೈ : ಸೆಪ್ಟೆಂಬರ್ 2006ರ ಮಾಲೆಗಾಂವ್ ಸ್ಫೋಟದಲ್ಲಿಒಂಬತ್ತು ಮಂದಿ ಮುಸ್ಲಿಂ ವ್ಯಕ್ತಿಗಳು ಶಾಮೀಲಾಗಿದ್ದಾರೆಂಬುದಕ್ಕೆ ಯಾವುದೇ ಸಾಕ್ಷ್ಯವಿಲ್ಲವೆಂದುಎರಡು ವರ್ಷಗಳ ಹಿಂದೆೆ ರಾಷ್ಟ್ರೀಯ ತನಿಖಾ ದಳವುಮಹಾರಾಷ್ಟ್ರ ಕಂಟ್ರೋಲ್ ಆಫ್ ಆಗರ್ನೈಸ್ಡ್ ಕ್ರೈಮ್ ಆ್ಯಕ್ಟ್ ಕೋರ್ಟಿನ ಮುಂದೆಹೇಳಿದ್ದರೆ, ಮಂಗಳವಾರ ತನಿಖಾ ದಳವು ತನ್ನಹೇಳಿಕೆಯಿಂದ ಹಿಂದೆ ಸರಿದಿದ್ದುಆ ಒಂಬತ್ತು ಮಂದಿಯನ್ನು ದೋಷಮುಕ್ತಿಗೊಳಿಸುವುದನ್ನು ವಿರೋಧಿಸಿದೆ.
ಈ ಪ್ರಕರಣದ ಅಂತಿಮ ತೀರ್ಪನ್ನು ಸೆಶನ್ಸ್ ನ್ಯಾಯಾಧೀಶ ವಿ.ವಿ.ಪಾಟೀಲ್ ಎಪ್ರಿಲ್ 25ರಂದು ನೀಡಲಿದ್ದಾರೆ.
‘‘ಮೂರು ಸ್ವತಂತ್ರಸಂಸ್ಥೆಗಳು ಪ್ರಕರಣದ ತನಿಖೆ ನಡೆಸಿವೆ.ರಾಜ್ಯ ಎಟಿಸ್ ಹಾಗೂ ಸಿಬಿಐ ಒಂದು ಗುಂಪನ್ನು ಹೆಸರಿಸಿದೆ. ಎನ್‌ಐಎ ತನಿಖೆ ವೈರುಧ್ಯಗಳಿಂದ ಕೂಡಿದೆ. ಆದರೆ ಹಿಂದಿನ ಏಜನ್ಸಿಗಳು ವಿಚಾರಣೆ ನಡೆಸಿದ ಆರೋಪಿಗಳನ್ನು ದೋಷಮುಕ್ತಿಗೊಳಿಸಬಹುದೇ... ಹಾಗೆ ಮಾಡಲು ಸಾಧ್ಯವಿಲ್ಲ. ಸಂಗ್ರಹಿಸಿದ ಸಾಕ್ಷ್ಯಗಳನ್ನು ನ್ಯಾಯಾಲಯ ಪರಿಶೀಲಿಸಲಿದೆ. ಈ ಹಂತದಲ್ಲಿ ಅವರನ್ನು ದೋಷಮುಕ್ತಿಗೊಳಿಸಲು ಸಾಧ್ಯವಿಲ್ಲ,’’ಎಂದು ಎನ್‌ಐಎ ವಕೀಲ ಪ್ರಕಾಶ್ ಶೆಟ್ಟಿ ಹೇಳಿದರು.
ನೂರುಲ್ ಹುದಾ, ಶಬ್ಬೀರ್ ಅಹಮದ್, ರಾಯೀಸ್ ಅಹಮದ್, ಸಲ್ಮಾನ್ ಫಾರ್ಸಿ, ಫಾರೋಘ್ ಮಗ್ದುಮಿ, ಶೇಖ್ ಮೊಹಮ್ಮದ್ ಆಲಿ, ಆಸಿಫ್ ಖಾನ್, ಮೊಹಮ್ಮದ್ ಝಹೀದ್ ಹಾಗೂ ಅಬ್ರಾರ್ ಅಹಮದ್ ಅವರನ್ನು 2006ರಲ್ಲಿ 37 ಜನರನ್ನು ಬಲಿ ತೆಗೆದುಕೊಂಡ ಹಾಗೂ 100ಕ್ಕೂ ಹೆಚ್ಚು ಮಂದಿಯನ್ನು ಗಾಯಗೊಳಿಸಿದ ಮಾಲೆಗಾಂವ್ ಸ್ಫೋಟ ಸಂಬಂಧ ಬಂಧಿಸಲಾಗಿತ್ತು. ಅವರೆಲ್ಲರಿಗೂ ನವೆಂಬರ್ 2011ರಂದು ಜಾಮೀನು ದೊರಕಿತ್ತು.
ಅವರಲ್ಲಿಬ್ಬರು ಮುಂದೆ 2006ರ ಮುಂಬೈ ರೈಲು ಸ್ಫೋಟ ಪ್ರಕರಣದಲ್ಲಿ ದೋಷಿಯೆಂದು ಪರಿಗಣಿತರಾಗಿದ್ದರೆ, ಶಬ್ಬೀರ್ ಮಾರ್ಚ್ 2015ರಲ್ಲಿ ಅಪಘಾತವೊಂದರಲ್ಲಿ ಮೃತ ಪಟ್ಟಿದ್ದ. ಉಳಿದವರಲ್ಲಿ ಒಬ್ಬನಿಗೆ ಮಂಗಳವಾರ ನ್ಯಾಯಾಲಯಕ್ಕೆ ಹಾಜರಾಗುವುದರಿಂದ ವಿನಾಯತಿ ನೀಡಲಾಗಿದ್ದರೆ,ಉಳಿದ ಐದು ಮಂದಿ ಹಾಜರಿದ್ದರು.
2011ರಲ್ಲಿ ವಿಶೇಷ ಎಂಸಿಒಸಿಎ ಕೋರ್ಟ್ ವಿಚಾರಣೆ ಸಂದರ್ಭ ಒಂಬತ್ತು ಮಂದಿಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯುತ್ತಿರುವಾಗ ಅಂದಿನ ಎನ್‌ಐಎ ಪ್ರಾಸಿಕ್ಯೂಟರ್ ರೋಹಿಣಿ ಸಾಲ್ಯಾನ್ ಮೇ 2007ರ ಮೆಕ್ಕಾ ಮಸ್ಜಿದ್ ಸ್ಫೋಟ ಪ್ರಕರಣದ ಆರೋಪಿ ಸ್ವಾಮಿ ಅಸೀಮಾನಂದಬಲಪಂಥೀಯ ಗುಂಪೊಂದರ ಶಾಮೀಲಾತಿ ಬಗ್ಗೆ ಹೇಳಿರುವುದನ್ನು ಉಲ್ಲೇಖಿಸಿದ್ದರು. ಈ ಸಂದರ್ಭ ಸಾಲ್ಯಾನ್ ಅವರು 2006ರ ಸ್ಫೋಟದ ಸಂದರ್ಭಕೂಡ ಬಲಪಂಥೀಯ ತೀವ್ರಗಾಮಿಗಳ ಶಾಮೀಲಾತಿ ಬಗ್ಗೆ ಹೇಳಿದ್ದರು.
2014ರಲ್ಲಿ ಎಲ್ಲಾ ಒಂಬತ್ತು ಮಂದಿ ಆರೋಪಿಗಳು ತಮ್ಮನ್ನು ಪ್ರಕರಣದಿಂದ ಮುಕ್ತಗೊಳಿಸಬೇಕೆಂದು ಮನವಿ ಸಲ್ಲಿಸಿದ್ದಾಗಎಟಿಎಸ್ ಮತ್ತು ಸಿಬಿಐ ತನಿಖೆಯಲ್ಲಿ ಹೇಳಿರುವಂತಹುದ್ದನ್ನುಸಮರ್ಥಿಸುವಂತಹ ಸಾಕ್ಷ್ಯವಿಲ್ಲವೆಂದು ಹೇಳಿತ್ತು ಹಾಗೂಈ ಪ್ರಕರಣವನ್ನು ನ್ಯಾಯಾಲಯದ ತೀರ್ಮಾನಕ್ಕೆ ಬಿಟ್ಟಿತ್ತು.
ಮಂಗಳವಾರದಂದು ಎಟಿಎಸ್ ಪ್ರತಿನಿಧಿವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ರಾಜಾ ಠಾಕ್ರೆ ಕೂಡ ಅವರನ್ನು ಪ್ರಕರಣದಿಂದ ಬಿಡುಗಡೆ ಮಾಡುವುದನ್ನು ವಿರೋಧಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News