×
Ad

ಮೂರು ತಿಂಗಳ ಮಗುವಿಗೆ ಕಚ್ಚಿದ ಇಲಿ!: ಮಗುವಿನ ಆರೋಗ್ಯ ಸ್ಥಿತಿ ಗಂಭೀರ

Update: 2016-04-13 12:58 IST

ನೋಯ್ಡ, ಎಪ್ರಿಲ್ 13: ನೋಯ್ಡ ಸೆಕ್ಟರ್-30ರ ಜಿಲ್ಲಾಸ್ಪತ್ರೆಗೆ ದಂಪತಿಯೊಂದು ತಮ್ಮ ಮೂರುತಿಂಗಳ ಹೆಮ್ಮಗು ಆರಾಧ್ಯಳನ್ನು ರಕ್ತಸಿಕ್ತ ಸ್ಥಿತಿಯಲ್ಲಿ ಕರೆತಂದಿತ್ತು. ಇಲಿ ಮಗುವಿನ ನಾಲಿಗೆ ಸಹಿತ ಶರೀರವಿಡೀ ಅಲ್ಲಲ್ಲಿ ಪರಚಿ ಹಾಕಿತ್ತು. ವೈದ್ಯರ ಪ್ರಕಾರ ಶಿಶುವಿನ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಮತ್ತು ದಿಲ್ಲಿಯ ಕಲಾವತಿಯ ಮಕ್ಕಳ ಆಸ್ಪತ್ರೆಗೆ ಸಾಗಿಸಲು ಅವರು ಸೂಚಿಸಿದರೆಂದು ವರದಿಯಾಗಿದೆ.

 ಇಲಿ ಕಚ್ಚಿ ಹೀಗೂ ಆಗುವುದುಂಟೆ ಎಂದು ಯಾರೂ ಹುಬ್ಬೇರಿಸಬಹುದಾದಂತಹ ಘಟನೆ ಇದು. ಸೋಮವಾರ ಗಾಝಿಯಾಬಾದ್ ಇಂದಿರಾಪುರಂನ ದೀಪಕ್ ಮತ್ತು ಅವರ ಪತ್ನಿ ತನ್ನ ಮೂರು ತಿಂಗಳ ಮಗಳನ್ನು ಗಂಭೀರ ಸ್ಥಿತಿಯಲ್ಲಿ ಇಲಿ ಕಚ್ಚಿದ್ಕಕ್ಕಾಗಿ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ಕರೆತಂದಿದ್ದರು!

ಮಗುವನ್ನು ಅದರ ತಾಯಿ ನೆಲದಲ್ಲಿ ಮಲಗಿಸಿ ಹೊರಗೆ ಹೋಗಿದ್ದಳು. ಮರಳಿ ಬಂದಾಗ ಮಗುವಿನ ಇಡೀಶರೀರವನ್ನು ಅಲ್ಲಲ್ಲಿ ಇಲಿ ಕಚ್ಚಿ ಪರಚಿ ಹಾಕಿತ್ತು. ನಾಲಗೆಯಿಂದಲೂ ರಕ್ತಹರಿಯುತ್ತಿತ್ತು ಎಂದು ವೈದ್ಯರಿಗೆ ಮಗುವಿನ ತಂದೆ ದೀಪಕ್ ತಿಳಿಸಿರುವುದಾಗಿ ವರದಿಯಾಗಿದೆ. ದಂಪತಿ ಮಗುವನ್ನು ಸ್ಥಳೀಯ ವೈದ್ಯರಿಗೆ ತೋರಿಸಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ಅಲ್ಲಿಂದ ಜಿಲ್ಲಾಸ್ಪತ್ರೆಗೆ ಕರೆತಂದಿದ್ದರು. ಜಿಲ್ಲಾಸ್ಪತ್ರೆಯ ವೈದ್ಯ ಅಭಿಷೇಕ್ ತ್ರಿಪಾಠಿ ಇಲಿಯಿಂದ ಮಗುವಿನ ಮೇಲೆ ಇಂತಹ ದಾಳಿಯಾಗಿರುವುದು ಆಶ್ಚರ್ಯಕಾರಿ ಘಟನೆಯಾಗಿದೆ ಎಂದು ಹೇಳಿದ್ದಾರೆ. ಮಗುವಿಗೆ ಆಂಟಿ ರೇಬೀಸ್ ವ್ಯಾಕ್ಸಿನ್ ಕೊಟ್ಟು ಉಪಚರಿಸಿದ್ದಾರೆ. ಮತ್ತು ಹೆಚ್ಚಿನ ಚಿಕಿತ್ಸೆ ಕೊಡಿಸಲಿಕ್ಕಾಗಿ ದಿಲ್ಲಿಯ ಆಸ್ಪತ್ರೆಗೆ ಕರೆದೊಯ್ಯಲು ಶಿಫಾರಸು ಮಾಡಿರುವುದಾಗಿ ವರದಿಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News