ಮಾಯವತಿಯನ್ನು ಎದುರಿಸಿ ಗೆಲ್ಲುವರೇ ಸುಶೀಲ್‌ಕುಮಾರ್ ಶಿಂಧೆ?
Update: 2016-04-13 13:28 IST
ಲಕ್ನೋ,ಎಪ್ರಿಲ್.13: ಬಿ.ಆರ್. ಅಂಬೇಡ್ಕರ್ ರ 125ನೇ ವರ್ಷದ ಜಯಂತಿಯ ವರ್ಷವಿಡೀ ನಡೆಯಲಿರುವ ಸಮಾರಂಭಕ್ಕಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ ಪ್ಯಾನೆಲ್‌ನ ಸಂಯೋಜಕನ ರೂಪದಲ್ಲಿ ಸುಶೀಲ್‌ಕುಮಾರ್‌ಶಿಂಧೆಯನ್ನು ನೇಮಿಸಿದ್ದು ಕಾಂಗ್ರೆಸ್ ಉತ್ತರ ಪ್ರದೇಶ ಚುನಾವಣೆಯ ಹಿನ್ನೆಲೆಯಲ್ಲಿ ದಲಿತರಿಗೆ ಸಂಬಂಧಿಸಿದ ಪ್ಲಾಟ್‌ಫಾರ್ಮ್ ಸಿದ್ಧ ಪಡಿಸುತ್ತಿದೆಯೆಂದು ವರದಿಗಳು ತಿಳಿಸಿವೆ.
ಲೋಕಸಭಾ ಚುನಾವಣೆಯಲ್ಲಿ ಶಿಂಧೆ ಸೋಲುಂಡಿದ್ದರು. ಮತ್ತೆ ಅವರಿಗೆ ತನ್ನ ನೆಟ್‌ವರ್ಕ್‌ನ್ನು ಜೀವಂತಗೊಳಿಸುವ ಅವಕಾಶವೂ ದೊರೆತಂತಾಗಿದೆ. ಉತ್ತರ ಪ್ರದೇಶದಲ್ಲಿ ಮಾಯಾವತಿಯನ್ನು ಎದುರಿಸಲು ಶಿಂಧೆ ಎಷ್ಟು ಸಮರ್ಥರು ಎಂಬ ಪ್ರಶ್ನೆ ಸಂಜಾತವಾಗಿದೆ. ಆದರೆ ಕಾಂಗ್ರೆಸ್ ಅವರಲ್ಲಿ ಭರವಸೆ ಇರಿಸಿದೆ. ಶಿಂಧೆಗೆ ಅಂಬೇಡ್ಕರ್ ಜಯಂತಿಯ ಕೊಡುಗೆಯ ರೂಪದಲ್ಲಿ ಮಹಾರಾಷ್ಟ್ರದಿಂದ ರಾಜ್ಯಸಭಾ ಸೀಟು ನೀಡಲು ಕಾಂಗ್ರೆಸ್ ಅಧ್ಯಕ್ಷ ಉತ್ಸುಕರಾಗಿದ್ದಾರೆಂದೂ ವರದಿಗಳು ತಿಳಿಸಿವೆ.