ಅಂಬೇಡ್ಕರ್ ಜನ್ಮದಿನಾಚರಣೆ: ವಿಶ್ವಸಂಸ್ಥೆ ಆಹ್ವಾನವನ್ನು ತಿರಸ್ಕರಿಸಿದ ಅವರ ಮೊಮ್ಮಗ ಪ್ರಕಾಶ್ ಅಂಬೇಡ್ಕರ್
Update: 2016-04-13 14:06 IST
ಲಕ್ನೋ, ಎಪ್ರಿಲ್ 13: ವಿಶ್ವಸಂಸ್ಥೆ ಏರ್ಪಡಿಸುವ ಡಾ.ಬಿ.ಆರ್ ಅಂಬೇಡ್ಕರ್‌ರ 125 ನೇ ಜನ್ಮದಿನಾಚರಣೆಯಲ್ಲಿ ಭಾಗವಹಿಸಲು ತನಗೆ ನೀಡಲಾದ ಆಹ್ವಾನವನ್ನು ಅಂಬೇಡ್ಕರ್ ಮೊಮ್ಮಗೆ ಪ್ರಕಾಶ್ ಅಂಬೇಡ್ಕರ್ ನಿರಾಕರಿಸಿದ್ದಾರೆ. ಭಾರತೀಯರನ್ನು ವಿಮಾನನಿಲ್ದಾಣದಲ್ಲಿ ದೇಹ ಪರೀಶೀಲಿಸುವ ಹೆಸರಲ್ಲಿ ಅಪಮಾನಿಸುವ ಚರಿತ್ರೆ ಅಮೆರಿಕದ್ದಾಗಿದ್ದು ಆದ್ದರಿಂದ ಅಮೆರಿಕದಿಂದ ಅಪಮಾನಿಸಿಕೊಳ್ಳಲು ತಾನು ಸಿಗಲಾರೆ ಎಂದು ತಾನು ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದ ಕಾರಣವಾಗಿದೆ ಎಂದು ಪ್ರಕಾಶ್ ಅಂಬೇಡ್ಕರ್ ತಿಳಿಸಿರುವುದಾಗಿ ವರದಿಯಾಗಿದೆ. ವಿಶ್ವಸಂಸ್ಥೆ ಕೇಂದ್ರದಲ್ಲಿ ಇಂದು ಕಾರ್ಯಕ್ರಮ ನಡೆಯುತ್ತಿದೆ. ವಿಶ್ವಸಂಸ್ಥೆ ಅಧಿಕಾರಿಗಳು. ಭಾರತದಿಂದ ಜನಪ್ರತಿನಿಧಿಗಳು ಮತ್ತು ಜಗತ್ತಿನಾದ್ಯಂತದ ರಾಜತಾಂತ್ರಿಕ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿರುವರು ಎಂದು ವರದಿಯಾಗಿದೆ.