ಮಹಾರಾಷ್ಟ್ರ ಸರಕಾರ ಕೇಜ್ರಿವಾಲ್‌ಗೆ ಹೇಳಿತು: ನಹೀ ಚಾಹಿಯೆ ಆಪ್ ಕಾ ಪಾನಿ
ಮುಂಬೈ, ಎಪ್ರಿಲ್:13: ಒಂದು ಕಡೆಯಿಂದ ದೇಶದ ಒಂದು ದೊಡ್ಡ ಭಾಗ ನೀರಿನ ಸಂಕಷ್ಟದಿಂದ ಪರದಾಡುತ್ತಿದೆ. ಇದೇ ವಿಷಯವನ್ನು ಮುಂದಿಟ್ಟು ರಾಜಕೀಯ ಮಾಡುವುದು ಕೂಡಾ ಜೊತೆಜೊತೆಗೆ ನಡೆಯುತ್ತಿದೆ. ಈಗಿನ ತಾಜವಿವಾದ ಮಹಾರಾಷ್ಟ್ರದಿಂದ ವರದಿಯಾಗಿದೆ. ನೀರಿನ ಎದುರಿಸುವ ಲಾತೂರ್‌ಗೆ ದಿಲ್ಲಿ ಸರಕಾರ ನೀರು ಕಳುಹಿಸುವ ಪ್ರಸ್ತಾವ ಮುಂದಿಟ್ಟಿತ್ತು. ಆದರೆ ಮಹಾರಾಷ್ಟ್ರ ಸರಕಾರ 'ಆಪ್ ಕಿ ಪಾನಿ ನಹೀ ಚಾಹಿಯೇ' ಎಂದಿದೆ.
ಲಾತೂರ್‌ನಲ್ಲಿ ರೈಲಿನಲ್ಲಿ ನೀರು ತಲುಪಿಸಿದ ಕುರಿತು ಶ್ಲಾಘನೆ ವ್ಯಕ್ತಪಡಿಸಿದ ಕೇಜ್ರಿವಾಲ್ ಲಾತೂರ್‌ಗಾಗಿ ದಿಲ್ಲಿಯಿಂದ ಹತ್ತು ಲಕ್ಷ ಲೀಟರ್ ನೀರನ್ನು ಕಳುಹಿಸುವ ಪ್ರಸ್ತಾಪ ಮುಂದಿಟ್ಟಿದ್ದರು. ಆದರೆ ಮಹಾರಾಷ್ಟ್ರ ಸರಕಾರ ಅವರ ಪ್ರಸ್ತಾವವನ್ನು ನಿರಾಕರಿಸಿದೆ. ಇದಕ್ಕೆ ಪ್ರತಿಕ್ರಿಯಿಸಿದ ಕೇಜ್ರಿವಾಲ್ ನಾವಂತೂ ನೀರು ಕೊಡುವ ಪ್ರಸ್ತಾವ ನೀಡಿದೆವು. ಅವರಿಗೆ ಬೇಡವೆಂದಾದರೆ ನಾವೇನು ಮಾಡಲು ಸಾಧ್ಯ ಎಂದು ಹೇಳಿರುವುದಾಗಿ ವರದಿಯಾಗಿದೆ. ಕೇಜ್ರಿವಾಲ್ ಪ್ರಧಾನಿ ಮೋದಿಗೆ ಪತ್ರ ಬರೆದು ಲಾತೂರ್‌ಗೆ ನೀರು ತಲುಪಿಸಿದ್ದಕ್ಕಾಗಿ ಅಭಿನಂದಿಸಿದ್ದರು. ಹತ್ತು ವ್ಯಾಗನ್ ನೀರಿನ ರೈಲು ಮೀರಜ್ ತಲುಪಿದಾಗ ಕೇಜ್ರಿವಾಲ್ ಮೋದಿಯನ್ನು ಶ್ಲಾಘಿಸಿದ್ದಲ್ಲದೆ ದಿಲ್ಲಿಯ ಜನರು ಪ್ರತಿದಿನ ಮುಂದಿನ ಎರಡು ತಿಂಗಳಿಗೆ ಹತ್ತು ಲಕ್ಷ ಲೀಟರ್ ನೀಡಲು ಸಿದ್ಧರಿದ್ದಾರೆಂದು ಹೇಳಿದ್ದರು. ಕೇಂದ್ರ ಸರಕಾರ ಲಾತೂರ್‌ಗೆ ಈ ನೀರನ್ನು ರವಾನಿಸಲು ವ್ಯವಸ್ಥೆ ಮಾಡಿದರೆ ದಿಲ್ಲಿಸರಕಾರ ನೀರಿನ ವ್ಯವಸ್ಥೆ ಮಾಡಿಕೊಡಲಿತ್ತು.