ತಮಿಳ್ನಾಡಿನಲ್ಲಿ ಸಿಬಿಐ ಅಧಿಕಾರಿಗಳಿಗೆ ಹಲ್ಲೆ ನಡೆಸಿದ ಮೂವರು ಆರೋಪಿಗಳ ಬಂಧನ
ಮಧುರೈ, ಎಪ್ರಿಲ್ 13: ತಮಿಳ್ನಾಡಿನ ಮಧುರೈಯಲ್ಲಿ ಸಿಬಿಐ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿದ ಪ್ರಕರಣದಲ್ಲಿ ಮೂವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ. ಪೊಲೀಸರು ಈ ಕುರಿತು ಹೇಳಿಕೆ ನೀಡಿದ್ದು ಆ ಪ್ರಕಾರ ವಿಶೇಷ ಪೊಲೀಸ್ ದಳ ಬೀಬಿಕುಲಂನಲ್ಲಿ ಎಪ್ರಿಲ್ 9ರಂದು ಸಿಬಿಐ ಅಧಿಕಾರಿಯೊಂದಿಗೆ ಹೊಡೆದಾಟ ನಡೆಸಿದ ಮತ್ತು ಲಂಚಗುಳಿತನ ಪ್ರಕರಣಕ್ಕೆ ಸಂಬಂಧಿಸಿ ಅಬಕಾರಿ ಅಧೀಕ್ಷಕ ಎಸ್. ಅಶೋಕ್ ರಾಜ್ ಮತ್ತು ಹವಾಲ್ದಾರ್ ಎನ್. ಕೃಷ್ಣನ್ ಸಿಬಿಐ ಸೆರೆಯಿಂದ ಪರಾರಿಯಾದ ಆರೋಪದಲ್ಲಿ ಇದೀಗ ಮೂವರನ್ನು ಬಂಧಿಸಲಾಗಿದೆ ಎಂದು ವರದಿಗಳು ತಿಳಿಸಿವೆ. ಸಿಬಿಐಯ ಐವರು ಅಧಿಕಾರಿಗಳು ಗುಪ್ತಮಾಹಿತಿಯ ಹಿನ್ನೆಲೆಯಲ್ಲಿ ಆದಾಯ ತೆರಿಗೆ ಅಧಿಕಾರಿಯ ಮನೆಗೆ ದಾಳಿ ನಡೆಸಿದ್ದರು. ಅಬಕಾರಿ ವಿಭಾಗದ ಇಬ್ಬರು ಉದ್ಯೋಗಿಗಳು ಕೇಬಲ್ ಟಿವಿ ನೆಟ್‌ವರ್ಕ್ ಆಪರೇಟರ್‌ರಿಂದ 75ಸಾವಿರ ಲಂಚಪಡೆಯುತ್ತಿದ್ದಾಗಲೇ ಸಿಕ್ಕಿಬಿದ್ದಿದ್ದರು. ಅಶೋಕ್ ಮತ್ತು ಕೃಷ್ಣನ್‌ರನ್ನು ಪ್ರಶ್ನಿಸುತ್ತಿದ್ದವೇಳೆ ಶಸ್ತ್ರಧಾರಿ ತಂಡ ಸಿಬಿಐ ಅಧಿಕಾರಿಗಳ ಮೇಲೆ ಹಲ್ಲೆ ನಡೆಸಿ ಲಂಚಗುಳಿ ಅಧಿಕಾರಿ ಮತ್ತು ಹವಾಲ್ದಾರ್‌ರನ್ನು ಬಿಡುಗಡೆಗೊಳಿಸಿ ಪರಾರಿಯಾಗಿತ್ತು. ಸಿಬಿಐ ಅಧಿಕಾರಿಗಳ ದೂರು ಪ್ರಕಾರ ತಲಾಕುಲಂ ಪೊಲೀಸರು ಪ್ರಕರಣ ದಾಖಲಿಸಿದ್ದರೆಂದು ವರದಿಗಳು ತಿಳಿಸಿವೆ