ಪಾಕಿಸ್ತಾನದಲ್ಲಿ ಭೀಕರ ರಸ್ತೆ ಅಪಘಾತ: 18ಮಂದಿ ಮೃತ್ಯು 14 ಮಂದಿಗೆ ಗಂಭೀರ ಗಾಯ
Update: 2016-04-13 16:06 IST
ಇಸ್ಲಾಮಾಬಾದ್, ಎಪ್ರಿಲ್ 13: ಪಾಕಿಸ್ತಾನದ ಪಂಜಾಬ್ ಪ್ರಾಂತದಲ್ಲಿ ಬುಧವಾರ ಬೆಳಗ್ಗಿನ ವೇಳೆ ಪ್ರಯಾಣಿಕ ಬಸ್ ಮತ್ತು ಟ್ರಕ್‌ಗಳ ನಡುವೆ ಭೀಕರ ಅಪಘಾತ ನಡೆದಿರುವುದಾಗಿ ವರದಿಗಳು ತಿಳಿಸಿವೆ. ತತ್ಪರಿಣಾಮ ಹದಿನೆಂಟು ಮಂದಿ ಮೃತರಾಗಿದ್ದಾರೆ. ಹದಿನಾಲ್ಕು ಮಂದಿಗಾಯಗೊಂಡಿದ್ದಾರೆ. ಸುದ್ದಿ ಸಂಸ್ಥೆ ಸಿನ್ಹುಆ ದ ವರದಿಯ ಪ್ರಕಾರ ಬಸ್‌ನಲ್ಲಿ ಐವತ್ತು ಮಂದಿ ಪ್ರಯಾಣಿಕರಿದ್ದರು. ಪಂಜಾಬ್‌ನ ಫೈಝಲಾಬಾದ್ ಜಿಲ್ಲೆಯಲ್ಲಿ ಈ ದುರ್ಘಟನೆ ನಡೆದಿದ್ದು ಬಸ್ ರಸ್ತೆಯಲ್ಲಿ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟ್ರಕ್‌ಗೆ ಢಿಕ್ಕಿ ಹೊಡೆಯಿತು.
ಪೊಲಿಸರು ಈ ದುರ್ಘಟನೆ ಬಸ್‌ನ ಅತಿವೇಗದ ಚಲಾವಣೆಯಿಂದ ಸಂಭವಿಸಿದೆಯೆಂದು ಹೇಳಿದ್ದಾರೆ. ಚಾಲಕ ಅಪಘಾತದಲ್ಲಿ ಮೃತನಾಗಿದ್ದಾನೆ.ಬಸ್ ಫೈಝಲಾಬಾದ್‌ನಿಂದ ಸಾಕಿಯಾಬಾದ್ ಜಿಲ್ಲೆಯೆಡೆಗೆ ತೆರಳುತ್ತಿತ್ತು. ಗಾಯಾಳುಗಳನ್ನು ಫೈಝಲಾಬಾದ್ ಎಲೈಟ್ ಆಸ್ಪತ್ರೆಗೆ ಸೇರಿಸಲಾಗಿದ್ದು ಇವರಲ್ಲಿ ಹೆಚ್ಚಿನವರ ಆರೋಗ್ಯ ಸ್ಥಿತಿ ಚಿಂತನಾಜನಕವಾಗಿದೆ ಎಂದು ವರದಿಗಳು ತಿಳಿಸಿವೆ.