×
Ad

ಮೋದೀಜೀ, ನಿಮ್ಮ ಕೊಲ್ಲಂ ಭೇಟಿ ನಿಜಕ್ಕೂ ಗ್ರೇಟ್ ! ಆದರೆ ನೀವು ಈ 13 ಸ್ಥಳಗಳಿಗೂ ಹೋಗಲೇಬೇಕಿತ್ತು

Update: 2016-04-13 16:36 IST

ತಿರುವನಂತಪುರಂ : ನೂರಕ್ಕೂ ಹೆಚ್ಚು ಜನರನ್ನು ಬಲಿ ಪಡೆದ ಕೊಲ್ಲಂನ ಪುತ್ತಿಂಗಲ್ ದೇವಿ ದೇವಸ್ಥಾನದಲ್ಲಿ ಇತ್ತೀಚೆಗೆ ಸುಡುಮದ್ದು ಪ್ರದರ್ಶನದ ಸಂದರ್ಭ ನಡೆದ ಅಗ್ನಿದುರಂತದ ಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲು ಯಾವುದೇ ತಡಮಾಡಿರಲಿಲ್ಲ. ಈ ಹಿಂದೆ ಸಂಕಷ್ಟದಲ್ಲಿರುವ ಜನರ ಬಳಿಗೆ ಹೋಗುವ ಹಲವಾರು ಅವಕಾಶಗಳನ್ನು ಮಿಸ್ ಮಾಡಿಕೊಂಡಿರುವ ಮೋದಿಯವರ ವಿಷಯದಲ್ಲಿ ಇದೊಂದು ಉತ್ತಮ ಆರಂಭವೆಂದೇ ಹೇಳಬಹುದು. ನಿಜ ಹೇಳಬೇಕೆಂದರೆ ಪ್ರಧಾನಿಯವರ ಈ ‘ಕಾಳಜಿ’ ಹಲವು ರಾಜ್ಯಗಳಲ್ಲಿ ಚುನಾವಣೆ ಹತ್ತಿರ ಬರುತ್ತಿರುವ ಸಮಯದಲ್ಲಿ ವ್ಯಕ್ತವಾಗುತ್ತಿದೆ.

ಹಾಗಾದರೆ ಮೋದಿಯ ಕೇರಳ ಭೇಟಿಯ ಹಿಂದೆ ರಾಜ್ಯದಲ್ಲಿ ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿಗೆ ಲಾಭ ತರುವ ಉದ್ದೇಶವಿತ್ತೆಂದೇ ಹೇಳಬಹುದು. ಮೇಲಾಗಿ ಮೋದಿ ಭೇಟಿಯ ಹಿಂದೆ ಒಂದು ಸಮುದಾಯದ ಮಂದಿಯನ್ನು ಓಲೈಸುವ ಉದ್ದೇಶವಿತ್ತೇ ಎಂಬ ಪ್ರಶ್ನೆಯೂ ಎದುರಾಗಿದೆ. ಮೋದಿಯವರ ಕೊಲ್ಲಂ ಭೇಟಿ ನಿಜವಾಗಿಯೂಮಾನವೀಯತೆಯ ನೆಲೆಯಲ್ಲಿ ಆಗಿದ್ದಾದಲ್ಲಿ ಮೋದಿಯವರು ಇಂತಹುದೇ ಘಟನೆಗಳು ಈ ಹಿಂದೆ ಬೇರೆ ಕಡೆಗಳಲ್ಲಿ ನಡೆದಾಗ ಏಕೆ ಭೇಟಿ ನೀಡಿಲ್ಲವೆಂಬ ಪ್ರಶ್ನೆಎದುರಾಗುತ್ತದೆ.

ಕೊಲ್ಕತ್ತಾ ಫ್ಲೈಓವರ್ ದುರಂತ : ಕೊಲ್ಲಂ ದುರಂತದ ಕೇವಲ ಮೂರು ದಿನಗಳ ಮೊದಲು ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿದ್ದ ಮೋದಿ ಫ್ಲೈಓವರ್ ದುರಂತವುತೃಣಮೂಲ ಕಾಂಗ್ರೆಸ್ ಸರಕಾರವು ಚುನಾವಣೆಯ ನಂತರಇದೇ ಗತಿ ಕಾಣುವುದೆಂಬುದಕ್ಕೆ ‘ದೇವರ ಸಂದೇಶ’ವಾಗಿದೆ ಯೆಂದು ಚುನಾವಣಾ ರ್ಯಾಲಿಯೊಂದರಲ್ಲಿ ಹೇಳಿದರು. ಆದರೆ ದುರಂತ ನಡೆದ ನಂತರ ಸ್ಥಳಕ್ಕೆ ಭೇಟಿ ನೀಡುವ ಗೋಜಿಗೆ ಹೋಗಿರಲಿಲ್ಲ.

ಲಾತೆಹಾರ್ ಘಟನೆ : ಕಳೆದ ತಿಂಗಳು ಇಬ್ಬರು ಗೋ ಸಾಗಾಟಗಾರರನ್ನು ಕೊಂದು ಅವರ ದೇಹಗಳನ್ನು ಜಾರ್ಖಂಡಿನ ಲಾತೇಹಾರ್ ಜಿಲ್ಲೆಯಲ್ಲಿ ಮರವೊಂದರಲ್ಲಿ ನೇತು ಹಾಕಲಾಗಿತ್ತು. ಸಂತ್ರಸ್ತರಲ್ಲಿ 12 ವರ್ಷದ ಬಾಲಕನೂ ಸೇರಿದ್ದ. ಆದರೆ ಜಾರ್ಖಂಡಿನ ಬಿಜೆಪಿ ಸರಕಾರಕ್ಕೆ ಈ ಘಟನೆ ಆಕ್ರೋಶ ತಂದಿರಲಿಲ್ಲ.

ದಾದ್ರಿ ಹತ್ಯೆ : ಮನೆಯ ಫ್ರಿಜ್ಜಿನಲ್ಲಿ ಗೋಮಾಂಸ ಇರಿಸಿದ್ದಾರೆಂಬ ವದಂತಿಯ ಹಿನ್ನೆಲೆಯಲ್ಲಿ ಗುಂಪೊಂದರಿಂದ ಮೊಹಮ್ಮದ್ ಅಖ್ಲಾಖ್ ಎಂಬ ವ್ಯಕ್ತಿ ದಾದ್ರಿಯಲ್ಲಿ ಹತ್ಯೆಗೀಡಾದಾಗ ಮೋದಿ ಮೌನವೃತಧಾರಿಯಾಗಿದ್ದರು. ಘಟನೆ ನಡೆದು ಹಲವು ದಿನಗಳಾದ ನಂತರ ಅದಕ್ಕೆ ವಿಷಾಧ ವ್ಯಕ್ತಪಡಿಸಿದ್ದರು.

  • ಅಂತೆಯೇ ಮಾರ್ಚ್ ತಿಂಗಳಲ್ಲಿ ಬಿಹಾರದ ನವಾಡ ಜಿಲ್ಲೆಯಲ್ಲಿ ನಡೆದ 150 ದಲಿತರ ಮನೆಗಳಿಗೆ ಬೆಂಕಿಯಿಕ್ಕಿದ ಪ್ರಕರಣ
  • ಫರೀದಾಬಾದಿನಲ್ಲಿ ಇಬ್ಬರು ದಲಿತ ಕುಟುಂಬದ ಮಕ್ಕಳು ಸುಟ್ಟು ಬೂದಿಯಾದ ಘಟನೆ
  • ಹರ್ಯಾಣಾದ ಪಾಲ್ವಲ್ ಜಿಲ್ಲೆಯಲ್ಲಿ ಕಳೆದ ವರ್ಷ ನಡೆದ ಮತೀಯ ಗಲಭೆ
  • ಹೈದರಾಬಾದ್ ವಿಶ್ವವಿದ್ಯಾಲಯದ ವಿದ್ಯಾರ್ಥಿ ರೋಹಿತ್ ವೇಮುಲಾ ಆತ್ಮಹತ್ಯೆ
  • ಹರ್ಯಾಣಾದಲ್ಲಿ ನಡೆದ ಜಾಟ್ ಮೀಸಲಾತಿ ಚಳುವಳಿ
  • ಗುಜರಾತಿನ ಪಟಿದಾರ್ ಆಂದೋಲನ
  • ಬರಪೀಡಿತ ಬುಂಡೇಲ್‌ಖಂಡ್
  • ಮಹಾರಾಷ್ಟ್ರದ ವಿದರ್ಭ ಹಾಗೂ ಮರಾಠವಾಡ ಜನರ ಸಂಕಷ್ಟ
  • ಪಾಕಿಸ್ತಾನದ ಕಡೆಯಿಂದ ಗಡಿ ಪ್ರದೇಶಗಳಲ್ಲಿ ಆಗಾಗ ನಡೆಯುವ ಗುಂಡಿನ ದಾಳಿ
  • ತಮಿಳು ನಾಡನ್ನು ಕಾಡಿದ ಭೀಕರ ನೆರೆ-ಹೀಗೆ ಈ ಯಾವುದೇ ಸಂಕಷ್ಟದ ಸಮಯದಲ್ಲೂ ಮೊದಿ ಈ ಪ್ರದೇಶಗಳಿಗೆ ಭೇಟಿ ನೀಡಿ ಜನರ ಬವಣೆಗಳನ್ನು ತಿಳಿಯುವ ಪ್ರಯತ್ನವನ್ನು ಮಾಡಿಯೇ ಇಲ್ಲವೆನ್ನುವುದು ಎಲ್ಲರಿಗೂ ತಿಳಿದ ವಿಚಾರ

ಪ್ರಧಾನಿ ಮೋದಿಯವರ ಕೊಲ್ಲಂ ಭೇಟಿ ನಿಜಕ್ಕೂ ಗ್ರೇಟ್ ! ಆದರೆ ಅವರು ಈ ಮೇಲೆ ತಿಳಿಸಿದ 13 ಸ್ಥಳಗಳಿಗೂ ಹೋಗಲೇಬೇಕಿತ್ತಲ್ಲವೇ?

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News