ರಾಜುಕೋಟ್ಯಾನ್ ಹತ್ಯೆ ಪ್ರಕರಣ: ಹಲವಾರು ಮಂದಿಯ ವಿಚಾರಣೆ, ಪರಿಹಾರಕ್ಕೆ ಒತ್ತಾಯಿಸಿ ಪ್ರತಿಭಟನೆ

Update: 2016-04-13 16:18 GMT

ಉಳ್ಳಾಲ: ಮೀನುಗಾರಿಕೆಂದು ತೆರಳಿದ್ದ ವ್ಯಕ್ತಿಯ ಶವ ಕೋಟೆಪುರ ಸಮೀಪದ ಬರಾಕಾ ಫಿಶ್‌ಆಯಿಲ್ ಮಿಲ್ ಮುಂಭಾಗದಲ್ಲಿಕೊಲೆಯಾಗಿ ಬಿದ್ದಿದ್ದ ಉಳ್ಳಾಲದ ಮೊಗವೀರಪಟ್ನ ನಿವಾಸಿ ರಾಜುಕೋಟ್ಯಾನ್ ಕೊಲೆ ಪ್ರಕರಣಕ್ಕೆ ಸಂಬಂದಿಸಿ ರಾಜುಕೋಟ್ಯಾನ್‌ಕುಟುಂಬಕ್ಕೆ ಪರಿಹಾರಕ್ಕೆ ಒತ್ತಾಯಿಸಿ ಬುಧವಾರ ಉಳ್ಳಾಲ ಠಾಣೆಯ ಮುಂದೆ ಪ್ರತಿಭಟನೆ ನಡೆದಿದೆ. ಪ್ರಕರಣ ದಾಖಲಿಸಿರುವ ಉಳ್ಳಾಲ ಪೊಲೀಸರುತನಿಖೆ ಮುಂದುವರಿಸಿದ್ದಾರೆ.
ಕೋಟೆಪುರ ಸಮೀಪ ಮೊಗವೀರಪಟ್ನ ನಿವಾಸಿ ಮೀನುಗಾರರಾಜುಕೋಟ್ಯಾನ್ (41) ರವರನ್ನುಕಲ್ಲಿನಿಂದಜಜ್ಜಿ ಹತ್ಯೆಗೈಯಲಾಗಿತ್ತು.ಘಟನೆಯ ಖಂಡಿಸಿ ರಾಜುಕೋಟ್ಯಾನ್ ಶವ ಉಳ್ಳಾಲ ಠಾಣೆಯೆದುರುಇಟ್ಟು ಪೊಲೀಸರ ವಿರುದ್ದಆಕ್ರೋಶ ವ್ಯಕ್ತ ಪಡಿಸಿದರು.ಸರಕಾರರಾಜುಕುಟುಂಬಕ್ಕೆ 50 ಲಕ್ಷ ಪರಿಹಾರಧನ ನೀಡಬೇಕು ಉಳ್ಳಾಲ ಮೊಗವೀರ ಸಮಾಜದಅಧ್ಯಕ್ಷ ಭರತ್‌ಕುಮಾರ್ ಉಳ್ಳಾಲ್ ಒತ್ತಾಯಿಸಿದ್ದಾರೆ.
  ಘಟನೆಯಿಂದಾಗಿ ಉಳ್ಳಾಲದಾದ್ಯಂತ ಪ್ರದೇಶಗಳು ಸಂಜೆಯಾಗುತ್ತಿದ್ದಂತೆ ಪೊಲೀಸರುಅಂಗಡಿ ಮುಂಗಟ್ಟುಗಳನ್ನು ಬಂದ್ ನಡೆಸಿದರು. ಮುಂಜಾಗ್ರತಾಕ್ರಮವಾಗಿ ಸೂಕ್ಷ್ಮ ಪ್ರದೇಶಗಳಲ್ಲಿ ಕೆಎಸ್‌ಆರ್ ಪಿ ಪೊಲೀಸರನ್ನು ನಿಯೋಜಿಸಲಾಗಿದೆ. ಇದರಿಂದ ಉಳ್ಳಾಲದಾದ್ಯಂತ ಸಂಜೆಯಾಗುತ್ತಿದ್ದಂತೆಅಘೋಷಿತ ಬಂದ್ ನ ವಾತಾವರಣ ನಿರ್ಮಾಣಆಯಿತು.

ಸಚಿವಯು.ಟಿಖಾದರ್ ಭೇಟಿ:

ರಾಜುಕೋಟ್ಯಾನ್ ಮೃತದೇಹವನ್ನುಇರಿಸಲಾಗಿದ್ದ ದೇರಳಕಟ್ಟೆಯ ಖಾಸಗಿ ಆಸ್ಪತ್ರೆಗೆ ಸಚಿವಯು.ಟಿ.ಖಾದರ್ ಭೇಟಿ ನೀಡಿಅಂತಿಮದರ್ಶನ ಪಡೆದರು. ಆರೋಪಿಗಳ ಪತ್ತೆಗೆ ವಿಶೇಷ ತಂಡವನ್ನುರಚಿಸುವಂತೆ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ನಿರ್ದೇಶಿಸಲಾಗಿದೆ. ಜನ ಶಾಂತಿಯುತವಾಗಿಇರುವುದರಿಂದ ನೆಮ್ಮದಿಯ ವಾತಾವರಣ ನಿರ್ಮಿಸಿ ಪೊಲೀಸರತನಿಖೆಗೆಅಡ್ಡಿಪಡಿಸಬಾರದುಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News