ಕೇರಳ ಸಿಡಿಮದ್ದು ದುರಂತ: ಪೊಲೀಸ್ ಕಮಿಶನರ್ ವಿರುದ್ಧ ಕ್ರಮಕೈಗೊಳ್ಳಲು ಗೃಹಕಾರ್ಯದರ್ಶಿ ಶಿಫಾರಸು
ತಿರುವನಂತಪುರಂ, ಎಪ್ರಿಲ್ 15: ಪರವೂರ್ ಪುಟ್ಟಿಂಗಲ್ ಸಿಡಿಮದ್ದು ದುರಂತದಲ್ಲಿಪೊಲೀಸ್ ಕಮಿಶನರ್ ಸಹಿತ ಪೊಲೀಸರ ವಿರುದ್ಧ ಕ್ರಮ ಜರಗಿಸಬೇಕೆಂದು ಗೃಹಕಾರ್ಯದರ್ಶಿ ಶಿಫಾರಸು ಮಾಡಿದ್ದಾರೆ. ಇಂದು ರಾಜಧಾನಿಯಲ್ಲಿ ನಡೆಯುವ ಸರ್ವಪಕ್ಷಗಳ ಸಭೆಯ ಮುಂಚಿತವಾಗಿ ಗೃಹಸಚಿವರು ಕರೆದಿದ್ದ ಸಭೆಯಲ್ಲಿ ಕಾರ್ಯದರ್ಶಿ ಹೀಗೆ ಹೇಳಿದ್ದಾರೆ. ಪರವೂರ್ ಸಿಐಯವರಿಂದ ಗಂಭೀರ ನಿಲರ್ಕ್ಷ್ಯ ಆಗಿದೆಯೆಂದು ಗೃಹಕಾರ್ಯದರ್ಶಿ ಬೆಟ್ಟು ಮಾಡಿದ್ದಾರೆ. ಚಾತನ್ನೂರ್ ಅಸಿಸ್ಟೆಂಟ್ ಕಮಿಶನರ್, ಪರವೂರ್ ಸಿಐ ವಿರುದ್ಧ ಕ್ರಮ ಜರಗಿಸಬೆಕೆಂದು ಅವರು ಹೇಳಿದ್ದಾರೆಂದು ವರದಿಯಾಗಿದೆ.
ಆದರೆ ಗೃಹ ಕಾರ್ಯದರ್ಶಿ ಮತ್ತು ಡಿಐಜಿ ಬೇರೆಬೇರೆ ನಿಲುವನ್ನು ಪ್ರಕಟಿಸಿದ್ದಾರೆ. ಡಿಐಜಿ ಕೇವಲ ಪೊಲೀಸರು ಮಾತ್ರ ಜವಾಬ್ದಾರರಲ್ಲ.ಜಿಲ್ಲಾಡಳಿತದಿಂದಲೂ ತಪ್ಪಾಗಿವೆ ಎಂದು ಡಿಐಜಿ ಪ್ರತಿಪಾದಿಸಿದ್ದಾರೆ. ಸಿಡಿಮದ್ದು ನಿಷೇಧವನ್ನು ಜಿಲ್ಲಾಡಳಿತ ಜನರಿಗೆ ತಿಳಿಸುವಲ್ಲಿವಿಫಲವಾಗಿದೆಯೆಂದು ಡಿಐಜಿ ವಾದಿಸಿದ್ದಾರೆ.
ಅದೇವೇಳೆ ಸಿಡಿಮದ್ದಿಗೆ ಪೊಲೀಸ್ ಒತ್ತಾಶೆ ನೀಡಿತ್ತು ಎಂದು ಕ್ರೈಂ ಬ್ರಾಂಚ್ ತನ್ನ ತನಿಖೆಯಲ್ಲಿ ಪತ್ತೆಹಚ್ಚಿದೆ. ಪೊಲೀಸರು ಮತ್ತು ದೇವಸ್ಥಾನದ ಆಡಳಿತ ಸಮಿತಿ ಸಿಡಿಮದ್ದು ನಡೆದ ದಿವಸ ಸಭೆ ನಡೆಸಿರುವುದನ್ನು ಅದು ತನಿಖೆಯಲ್ಲಿ ತಿಳಿದುಕೊಂಡಿದೆ.ಜಿಲ್ಲಾಡಳಿತ ಸಿಡಿಮದ್ದು ನಿಷೇಧ ಇರುವಾಗಲೇ ಇವರು ಸೇರಿ ಸಭೆ ನಡೆಸಿದ್ದರು ಎಂದು ಕ್ರೈಬ್ರಾಂಚ್ ತನಿಖೆಯಲ್ಲಿ ಸಾಬೀತಾಗಿದೆ. ಈ ನಡುವೆ ದುರಂತದಲ್ಲಿಮೃತರಾಗಿದ್ದರೆಂದು ಊಹಾಪೋಹಕ್ಕೆ ಕಾರಣರಾಗಿದ್ದ ಕೃಷ್ಣನ್ ಕುಟ್ಟಿ ಅಡಗಿ ಕೂತಿದ್ದಾರೆಂದು ಮಾಹಿತಿ ಲಭಿಸಿದೆ. ಇವರು ಪೊಲೀಸರಿಗೆ ಶರಣಾಗಲಿದ್ದಾರೆನ್ನಲಾಗಿದೆ. ಸಿಡಿಮದ್ದು ನಿಷೇಧಕ್ಕಾಗಿ ಅಭಿಪ್ರಾಯ ರೂಪೀಕರಿಸಿಲು ತಿರುವನಂತಪುರದಲ್ಲಿ ಇಂದು ಸರ್ವಪಕ್ಷ ಸಭೆ ನಡೆಯಲಿರುವುದಾಗಿ ವರದಿಗಳು ತಿಳಿಸಿವೆ.