×
Ad

ವರದಿ ಮಾಡಲು ಹೋದ ಪತ್ರಕರ್ತ ಆ ಶವ ನೋಡಿ ಬೆಚ್ಚಿ ಬಿದ್ದ !

Update: 2016-04-15 16:42 IST

ಬಾರಾಮುಲ್ಲಾ , ಎ .15: ಹೋಗಿದ್ದು ಸುದ್ದಿ ಮಾಡಲು, ಆದರೆ ನೋಡಿದ್ದು ಸೋದರನ ಮೃತದೇಹವನ್ನು ! 

ಮಂಗಳವಾರ ಮಧ್ಯಾಹ್ನ ಹಂದ್ವಾರ ಗೋಲಿಬಾರ್ ನ ವಿಷಯ ತಿಳಿದ ಕೂಡಲೇ ಪತ್ರಕರ್ತ ಝಹೂರ್ ಅಹ್ಮದ್ ಭಟ್ ಹಂದ್ವಾರದ ಉಪ ಜಿಲ್ಲಾ ಆಸ್ಪತ್ರೆಗೆ ದೌಡಾಯಿಸಿದರು. ಶ್ರೀನಗರದ ಸುದ್ದಿ ಸಂಸ್ಥೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಝಹೂರ್ ಮೃತರ ವಿವರ ಪಡೆದು ಸುದ್ದಿ ಮಾಡಲು ಹೋಗಿದ್ದರು. ಅಲ್ಲಿ ಗಾಯಾಳುಗಳನ್ನು ಭೇಟಿಯಾಗಿ ಅವರ ಹೆಸರು ಬರೆದುಕೊಳ್ಳುತ್ತಿರುವಾಗ ಯಾರೋ ಒಬ್ಬರು ಆಪರೇಶನ್ ಥಿಯೇಟರ್ ಬಳಿ ಎರಡು ಶವಗಳು ಬಿದ್ದಿಕೊಂಡಿವೆ ಎಂದು ಮಾಹಿತಿ ನೀಡಿದರು. ಝಹೂರ್ ಅಲ್ಲಿಗೆ ಹೋಗಿ ನಿಂತ ಕೂಡಲೇ ಆಸ್ಪತ್ರೆಯ ಸಿಬ್ಬಂದಿ ಮೃತದೇಹದ ಮುಖದ ಮೇಲಿನ ಬಟ್ಟೆ ತೆಗೆದರು. ಆಗ ಆಘಾತಕ್ಕೊಳಗಾದರು. ಅವರ ತಮ್ಮ ನಈಮ್ ಅಹ್ಮದ್ ಭಟ್ ಅವರ ಶವ ಅಲ್ಲಿತ್ತು. 

" ನನ್ನ ತಮ್ಮ ಸತ್ತು ಬಿದ್ದಿರುವುದನ್ನು ನೋಡಿ ನಾನು ಬೆಚ್ಚಿ ಬಿದ್ದೆ. ನನಗೇ ಗೊತ್ತಿಲ್ಲದಂತೆ ನಾನು ಆತನ ಹೆಸರನ್ನು ನನ್ನ ರೈಟಿಂಗ್ ಪ್ಯಾಡ್ ಮೇಲೆ ಬರೆದೆ " ಎಂದು ಝಹೂರ್ ಹೇಳುತ್ತಾರೆ.  

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News