×
Ad

2007ರಲ್ಲಿ ಮುಲಾಯಂ ಸರಕಾರವನ್ನು ಸೋನಿಯಾ ಬರ್ಕಾಸ್ತು ಮಾಡುತ್ತಿದ್ದರು, ತಾನು ವಿರೊಧಿಸಿದ್ದೆ: ಹಂಸರಾಜ್ ಭಾರದ್ವಾಜ್

Update: 2016-04-15 18:20 IST

ಹೊಸದಿಲ್ಲಿ, ಎಪ್ರಿಲ್ 15: ಕಾಂಗ್ರೆಸ್ ಹಿರಿಯ ನಾಯಕ ಮತ್ತು ಯುಪಿಎ ಸರಕಾರದ ಕಾನೂನು ಸಚಿವ ಹಂಸರಾಜ್ ಭಾರದ್ವಾಜ್ ಕಾಂಗ್ರೆಸ್ ನೇತೃತ್ವವು 2007ರಲ್ಲಿ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದ ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್ ಸರಕಾರವನ್ನು ವಿಸರ್ಜಿಸಲು ಬಯಸಿತ್ತು. ಆದರೆ ನಾನು ಅಸಹಮತ ವ್ಯಕ್ತಪಡಿಸಿದ್ದೆ. ಎಂದು ಹೇಳಿರುವುದಾಗಿ ವರದಿಯಾಗಿದೆ. ಉತ್ತರ ಖಂಡ ಮತ್ತು ಅರುಣಾಚಲದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಗೊಳಿಸಿದ್ದಕ್ಕಾಗಿ ಬಿಜೆಪಿಯನ್ನು ಟೀಕಿಸುತ್ತಿರುವ ಈ ಸಂದರ್ಭದಲ್ಲಿಯೇ ಭಾರದ್ವಾಜ್ ಹೇಳಿಕೆ ಇರಿಸುಮುರಿಸು ಸೃಷ್ಟಿಸಿದೆ.

ಭಾರದ್ವಾಜ್‌ರು ಇಂಡಿಯನ್ ಎಕ್ಸ್‌ಪ್ರೆಸ್‌ನೊಂದಿಗೆ ಮಾತಾಡುತ್ತಾ ಉತ್ತರಪ್ರದೇಶ ಮತ್ತು 2ಜಿ ಸ್ಪೆಕ್ಟ್ರಂ ಹಂಚಿಕೆ ಹಗರಣಗಳಲ್ಲಿ ಅಸಹಮತಿ ತೋರಿಸಿದ್ದರಿಂದ ತನ್ನನ್ನು ಕಾಂಗ್ರೆಸ್‌ನ ಮುಖ್ಯಧಾರೆಯಿಂದ ದೂರವಿಡಲಾಗಿದೆ ಎಂದು ಅವರು ಹೇಳಿದ್ದಾರೆ. ಯುಪಿಎಯ ಎರಡು ಸಚಿವ ಸಂಪುಟದಲ್ಲಿ ಅವರನ್ನು ಸೇರಿಸಿರಲಿಲ್ಲ. ಅವರನ್ನು ಕರ್ನಾಟಕದ ರಾಜ್ಯಪಾಲರಾಗಿ ಕಳುಹಿಸಲಾಗಿತ್ತು. ಭಾರದ್ವಾಜ್ ನೆಹರೂ ಗಾಂಧಿ ಪರಿವಾರದ ನಿಷ್ಠಾವಂತರಾಗಿದ್ದವರು. ಕಾಂಗ್ರೆಸ್ ಅವರನ್ನು ಮೂಲೆಗಿಟ್ಟಿದ್ದರಿಂದ ಅವರು ಕೋಪಿಸಿಕೊಂಡಿದ್ದಾರೆ.ಮತ್ತು ತಾನು ಕಾಂಗ್ರೆಸಿಗ ಎನ್ನಲು ಅವರು ಬಯಸುವುದಿಲ್ಲ ಎಂದು ವರದಿಗಳು ತಿಳಿಸಿವೆ.

ಬಿಜೆಪಿ ಪರಿಚ್ಛೇದ 356ನ್ನು ದುರುಪಯೋಗಿಸುತ್ತಿದೆ ಎಂಬ ಕಾಂಗ್ರೆಸ್ ಆರೋಪದ ಕುರಿತು ಪ್ರತಿಕ್ರಿಯಿಸಿದ ಅವರು ಉತ್ತರಖಂಡ ಮತ್ತು ಅರುಣಾಚಲದಲ್ಲಿ ಕಾಂಗ್ರೆಸ್ ಇಬ್ಭಾಗವಾದ್ದರಿಂದ ರಾಷ್ಟ್ರಪತಿ ಆಳ್ವಿಕೆ ಹೇರಲಾಗಿದೆ. ಒಮ್ಮೆ ಮುಖ್ಯಮಂತ್ರಿ ಅಲ್ಪಮತದಲ್ಲಿದ್ದರೆ ಅವರಿಗೆ ಬಹುಮತವನ್ನು ಸಾಬೀತು ಪಡಿಸಬೇಕಾಗುತ್ತದೆ. ಈ ನಡುವೆ ವಿಧಾನಸಭಾಧ್ಯಕ್ಷರು ಬಂಡಾಯ ಶಾಸಕರನ್ನು ಅಯೋಗ್ಯ ಎಂದು ಘೋಷಿಸಿದರು ಆದ್ದರಿಂದ ವಿಶ್ವಾಸ ಮತ ಯಾಚನೆಗೆ ಅಡ್ಡಿಯಾಯಿತು ಎಂದು ಅವರು ಹೇಳಿದರು. ರಾಜ್ಯಪಾಲರು ಏನು ಮಾಡುವುದು ರಾಜ್ಯಪಾಲರು ಇಂತಹ ಪರಿಸ್ಥಿತಿಯಲ್ಲಿ ವರದಿ ಸಲ್ಲಿಸಬೇಕಾಗುತ್ತದೆ. ಕಾಂಗ್ರೆಸ್ ಕೂಡಾ ಪರಿಚ್ಛೇದ 356ನ್ನು ದುರುಪಯೋಗ ಪಡಿಸಿದೆ. 2005ರಲ್ಲಿ ಬಿಹಾರದ ಅಸೆಂಬ್ಲಿಯನ್ನು ವಿಸರ್ಜಿಸುವ ನಿರ್ಧಾರ ಈ ರೀತಿಯದ್ದಾಗಿದೆ ಎಂದು ಹೇಳಿರುವುದಾಗಿ ವರದಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News