×
Ad

ಬಿಜೆಪಿಗೆ ಮತ ಚಲಾಯಿಸಿದಕ್ಕೆ ಪತ್ನಿಗೆ ತಲಾಖ್‌ ನೀಡಿದ ಭೂಪ

Update: 2016-04-16 11:19 IST

ಗುವಾಹಟಿ, ಎ.16: ಅಸ್ಸಾಂನಲ್ಲಿ ನಡೆಯುತ್ತಿರುವ ವಿಧಾನ ಸಭಾ ಚುನಾವಣೆಯಲ್ಲಿ ತನ್ನ ಪತ್ನಿ ಬಿಜೆಪಿಗೆ ಮತ ಚಲಾಯಿಸಿದ ಕಾರಣಕ್ಕಾಗಿ ಆಕೆಯ ಗಂಡ ತಲಾಖ್‌ ನೀಡಿರುವ ಘಟನೆ ವರದಿಯಾಗಿದೆ.
ಸ್ಥಳೀಯ ಪತ್ರಿಕೆಗಳಲ್ಲಿ ವರದಿಯಾಗಿರುವಂತೆ ಸೊನಾತಿಪುರ್‌ ಜಿಲ್ಲೆಯ ದೋನಮ್‌ ಅದಾಹತಿ ಗ್ರಾಮದ ಐನುದ್ದೀನ್‌  ತನ್ನ ಪತ್ನಿ ದಿಲ್ವಾರಾ ಬೇಗಮ್‌ಗೆ ಬಿಜೆಪಿಗೆ ಮತ ಚಲಾಯಿಸದಕ್ಕಾಗಿ ತಲಾಖ್ ನೀಡದ್ದಾನೆ.
ಗ್ರಾಮಸ್ಥರು ಕಾಂಗ್ರೆಸ್‌ಗೆ ಮತ ಚಲಾಯಿಸುವ ನಿರ್ಧಾರ ಕೈಗೊಂಡಿದ್ದರು. ಆದರೆ ಈ ಬಗ್ಗೆ ತಲೆಕೆಡಿಸಿಕೊಳ್ಳದ ದಿಲ್ವಾರಾ ಬೇಗಮ್‌ ಬಿಜೆಪಿಗೆ ಮತ ಚಲಾಯಿಸಿದ್ದರು. ದಿಲ್ವಾರ್‌ ಮತ್ತು ಐನುದ್ದೀನ್ ನಡುವೆ ಈ ವಿಚಾರ ಘರ್ಷಣೆಗೆ ಕಾರಣವಾಯಿತು. ಪರಿಣಾಮವಾಗಿ  ಅವರ ನಡುವಿನ ಹತ್ತು ವರ್ಷಗಳ ವಿವಾಹ ಸಂಬಂಧ ಮುರಿದು ಬಿತ್ತು ಎನ್ನಲಾಗಿದೆ.
ಸ್ಥಳೀಯರು ಹೇಳುವಂತೆ ಇವರ ನಡುವಿನ ಸಂಬಂಧ ಮುರಿದು ಬೀಳಲು ದಿಲ್ವಾರ್‌ ಬಿಜೆಪಿ ಪರ ಮತ ಚಲಾಯಿಸಿದ್ದು ಕಾರಣವಲ್ಲ.  ಅವರ ನಡುವಿನ ಕೆಲವು ವೈಯಕ್ತಿಕ ಕಾರಣಗಳಿಂದಾಗಿ ಹತ್ತು ವರ್ಷಗಳ  ಸಂಬಂಧ ಮುರಿದು ಬಿದ್ದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News