×
Ad

ಜಪಾನ್‌ನಲ್ಲಿ ಅವಳಿ ಭೂಕಂಪ; ಸಾವಿನ ಸಂಖ್ಯೆ 29

Update: 2016-04-16 11:49 IST

ಟೋಕಿಯೊ, ಎ.16: ದಕ್ಷಿಣ ಜಪಾನ್‌ನ ಕುಮಾಮೊಟೊ ಪ್ರಾಂತ್ಯದಲ್ಲಿ ಇಂದು ಬೆಳಗ್ಗಿನ ಜಾವ ಎರಡು ಬಾರಿ ಸಂಭವಿಸಿದ ಭೂಕಂಪದಿಂದಾಗಿ 29ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದಾರೆ. ಸಹಸ್ರಾರು  ಮಂದಿ ಗಾಯಗೊಂಡಿದ್ದಾರೆ.  ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 7.3ರಷ್ಟು ದಾಖಲಾಗಿರುವುದಾಗಿ  ತಿಳಿದು ಬಂದಿದೆ.
ಭೂಕಂಪದ ಪರಿಣಾಮ ಅನೇಕ ಕಡೆ ಮನೆಗಳು ಹಾಗೂ ಕಟ್ಟಡಗಳು ಕುಸಿದು ಬಿದ್ದಿವೆ.  ಹಲವೆಡೆ ಅಗ್ನಿ  ಅನಾಹುತ  ಉಂಟಾಗಿದೆ ಎಂದು ವರದಿ ತಿಳಿಸಿವೆ. ಭೂಕಂಪದ  ಪರಿಣಾಮ ಜಪಾನ್ ಅನೇಕ ರಸ್ತೆಗಳು ಬಂದ್ ಆಗಿವೆ.  ರಸ್ತೆಗಳಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ವಿದ್ಯುತ್  ಸಂಪರ್ಕ ಕಡಿದು ಹೋಗಿದೆ. ಸಹಸ್ರಾರು ಮಂದಿ ಮನೆ ಕಳೆದುಕೊಂಡಿದ್ದಾರೆ
ಗುರುವಾರ ರಾತ್ರಿ ಸಂಭವಿಸಿದ 6.5 ತೀವ್ರತೆಯ ಭೂಕಂಪದಿಂದಾಗಿ 10 ಮಂದಿ ಮೃತಪಟ್ಟು, 800 ಮಂದಿ ಗಾಯಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News