×
Ad

ಕನ್ಹಯ್ಯ ದಲಿತರಲ್ಲ ಎಂಬ ಮಾಯವತಿ ಹೇಳಿಕೆಗೆ ಕಣ್ಣೀರಿಟ್ಟ ಕನ್ಹಯ್ಯ ತಾಯಿ!

Update: 2016-04-17 11:33 IST

ಲಕ್ನೊ, ಎಪ್ರಿಲ್ 17: ಬಿಎಸ್ಪಿ ಮುಖ್ಯಸ್ಥೆ ಮಾಯಾವತಿ ಕನ್ಹಯ್ಯ ಕುಮಾರ್ ವಿರುದ್ಧ ನೀಡಿದ ಹೇಳಿಕೆ ಕನ್ಹಯ್ಯರ ಕುಟುಂಬ ಬಹಳ ನೊಂದು ಕೊಂಡಿದೆಯೆಂದು ವರದಿಯಾಗಿದೆ. ಮಾಧ್ಯಮದವರೊಂದಿಗೆ ಮಾತಾಡಿದ ಕನ್ಹಯ್ಯಾಕುಮಾರ್‌ರ ತಾಯಿ ಮೀಣಾದೇವಿ ಮತ್ತು ತಂದೆ ಜೈಶಂಕರ್ ಸಿಂಗ್, ಮಾಯಾವತಿ ಒಬ್ಬ ಮಹಿಳೆಯಾಗಿ ಇಂತಹ ಹೇಳಿಕೆ ನೀಡಬಾರದಾಗಿತ್ತು. ಅವರು ತಾಯಿ ಮತ್ತು ಮಗನ ಜಾತಿಯನ್ನು ಒಂದೇ ತಕ್ಕಡಿಯಲ್ಲಿ ಹೇಗೆ ಅಳತೆ ಮಾಡುತ್ತಾರೆ ಎಂದು ನೊಂದು ಹೇಳಿರುವುದಾಗಿ ವರದಿಗಳು ತಿಳಿಸಿವೆ.

ಮೀಣಾ ದೇವಿ ಮಾತಾಡುತ್ತಾ, ಕನ್ಹಯ್ಯಾರ ಹೆಸರಿನಲ್ಲಿ ಇಂತಹ ರಾಜಕೀಯ ಮಾಡುವುದು ಉತ್ತಮ ವಿಷಯವಲ್ಲ. ಭೂಮಿಹಾರ ಜಾತಿಯಲ್ಲಿ ಕನ್ಹಯ್ಯಾ ಹುಟ್ಟಿದ್ದು ಅವನ ತಪ್ಪೇನು? ಜಾತಿ ರಾಜಕೀಯ ಮಾಡುವ ರಾಜಕಾರಣಿಗಳು ಭೂಮಿಹಾರ್ ಜಾತಿಯಲ್ಲಿ ಹುಟ್ಟಿದ ಜನರು ಸೇವೆ ಮಾಡಲು ಅರ್ಹರಲ್ಲವೇ ಎಂದು ಸಾಬೀತು ಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಸಮಾಜಸೇವೆಗೆ ಕೇವಲ ದಲಿತ ಆಗಿರಬೇಕೆ? ಹೀಗೆ ಪ್ರಶ್ನಿಸಿದ ಕನ್ಹಯ್ಯರ ತಾಯಿ ಮೀಣಾ ದೇವಿಯವರ ಕಣ್ಣಲ್ಲಿ ನೀರು ಜಿನುಗಿತು ಎಂದು ವರದಿಗಳು ತಿಳಿಸಿವೆ.

ಕನ್ಹಯ್ಯರ  ತಮ್ಮ  ಫ್ರಿನ್ಸ್ ಉತ್ತರ ಪ್ರದೇಶದ ಚುನಾವಣೆಯ ಹಿನ್ನೆಲೆಯಲ್ಲಿ ಮಾಯಾವತಿ ಜಾತಿ ಆಧಾರಿತ ಮಾತಾಡಿದ್ದಾರೆ. ಮಾಯಾವತಿ ದಲಿತರ ವೋಟಿಗಾಗಿ ಆರೆಸ್ಸೆಸ್ ಭಾಷೆ ಬಳಸುತ್ತಿದ್ದಾರೆ ಎಂದು ಹೇಳಿದ್ದಾರೆ. ಮಾಯವತಿ ಕನ್ಹಯ್ಯಾರನ್ನು ದಲಿತರಲ್ಲ ಭೂಮಿಹಾರ ಜಾತಿಯವರು. ದಲಿತರನ್ನು ದಾರಿತಪ್ಪಿಸುತ್ತಿದ್ದಾರೆ ಎಂದು ಅಂಬೇಡ್ಕರ್ ಜಯಂತಿ ಸಮಾರಂಭದಲ್ಲಿ ಹೇಳಿದ್ದರು. ಕನ್ಹಯ್ಯಾ ವಾಮಪಕ್ಷಗಳ ಮೊಹರು ಆಗಿದ್ದಾರೆ ಎಂದೂ ಮಾಯವತಿ ಟೀಕಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News