×
Ad

ಗರ್ಭದಲ್ಲಿಯೇ ಭ್ರೂಣದ ರೋಗ ತಪಾಸಣೆಗೆ ದೇಶದ ಹಲವು ರಾಜ್ಯಗಳಲ್ಲಿ ತಪಾಸಣಾ ಕೇಂದ್ರ

Update: 2016-04-19 12:44 IST

ಹೊಸದಿಲ್ಲಿ ಎಪ್ರಿಲ್ 19: ಇನ್ನು ಗರ್ಭದಲ್ಲಿಯೇ ಭ್ರೂಣಕ್ಕೆ ತಗಲಿರುವ ಯಾವುದೇ ಗಂಭೀರ ರೋಗವನ್ನು ಗುರುತಿಸಲಿಕ್ಕಾಗಿ ದೇಶದ ಬೇರೆ ಬೇರೆ ರಾಜ್ಯಗಳಲ್ಲಿ 20 ತಪಾಸಣಾ ಕೇಂದ್ರಗಳನ್ನು ತೆರೆಯಲು ಸಿದ್ಧತೆ ನಡೆಸಲಾಗಿದೆ ಎಂದು ವರದಿಯಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬಕಲ್ಯಾಣ ಸಚಿವಾಲಯದ ನೆರವಿನಲ್ಲಿ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್(ಐಸಿಎಂಆರ್) ಸೆಂಟರ್ ಅನ್ನು ಫ್ರಾರಂಭಿಸಲಿದೆ.

ಈ ಸೆಂಟರ್‌ಗಳು ಹಿಮೋಫಿಲಿಯ ಸಹಿತ ಗಂಭೀರ ರೋಗಗಳನ್ನು ಪತ್ತೆಹಚ್ಚಬಹುದಾಗಿದೆ. ಹಿಮೊಫಿಲಿಯ ಫೆಡರೇಶನ್ ಆಫ್ ಇಂಡಿಯಾ ವತಿಯಿಂದ ದಿಲ್ಲಿಯಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಕೇಂದ್ರ ಆರೋಗ್ಯ ಮತ್ತು ಕುಟುಂ ಕಲ್ಯಾಣ ಸಚಿವಾಲಯದ ಅಧಿಕಾರಿಗಳು ಉಪಸ್ಥಿತರಿದ್ದರು.

ಸಚಿವಾಲಯ ಜಂಟಿ ಕಾರ್ಯದರ್ಶಿ ವಂದನಾ ಗುರಾನಿ ಇಂಡಿಯನ್ ಮೆಡಿಕಲ್ ಕೌನಿಲ್ ಆಫ್ ರಿಸರ್ಚ್‌ನ ಕಡೆಯಿಂದ 20 ಜೆನೆಟಿಕ್ ಲ್ಯಾಬ್‌ಗಳು ಆರಂಭಗೊಳ್ಳಲಿದೆ. ಲ್ಯಾಬ್‌ನಲ್ಲಿ ಫ್ರೀ-ನೆಟಲ್ ಪರೀಕ್ಷೆ ಮಾಡಿ ಗರ್ಭದಲ್ಲಿ ಬೆಳೆಯುವ ಭ್ರೂಣದ ಒಳಗೆ ಇರುವ ರೋಗವನ್ನು ಪತ್ತೆಹಚ್ಚಲು ಸಾಧ್ಯವಿದೆ.

ಪರೀಕ್ಷೆಯಲ್ಲಿ ಹಿಮೋಫಿಲಿಯ, ಥೈಲಡಸಿಮಿಯ ಮತ್ತು ಸ್ಕಿಲ್ ಸೆಲ್‌ನಂತಹ ಗಂಭೀರ ರೋಗವನ್ನು ಪತ್ತೆ ಮಾಡಬಹುದಾಗಿದೆ. ರೋಗವನ್ನು ಪತ್ತೆಹಚ್ಚಿದರೆ ಗರ್ಭದಲ್ಲಿಯೇ ಭ್ರೂಣಕ್ಕೆ ಚಿಕಿತ್ಸೆ ನಡೆಸಬಹುದಾಗಿದೆ. ಜೆನೆಟಿಕ್ ಲ್ಯಾಬ್ ಉತ್ತರ ಪ್ರದೇಶ, ಪಂಜಾಬ್, ಹರಿಯಾಣ, ಮಹಾರಾಷ್ಟ್ರ, ಕರ್ನಾಟಕ, ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಛತ್ತೀಸ್‌ಗಡ ಸಹಿತ ಇತರ ರಾಜ್ಯಗಳಲ್ಲಿ ತಪಾಸಣಾ ಕೇಂದ್ರವನ್ನು ತೆರೆಯುವ ಸಿದ್ಧತೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ದಿಲ್ಲಿ ಸಂಸದ ಮೀನಾಕ್ಷಿ ಲೇಖಿ ಹಿಮೊಫಿಲಿಯ, ಥೈಸೆಮಿಯ ಮತ್ತು ಸ್ಕಿಲ್ ಸೆಲ್ ರೋಗ ಇರುವ ಇರುವವವರಿಗೆ ವಿಶೇಷ ಪ್ರಮಾಣ ಪತ್ರವನ್ನು ಜಾರಿ ಮಾಡಲು ಸರಕಾರವನ್ನು ವಿನಂತಿಸಲಾಗುವುದು ಎಂದು ಅವರು ತಿಳಿಸಿದ್ದಾರೆ. ಆರೋಗ್ಯ ಸಚಿವಾಲಯಕ್ಕೂ ಈ ಕುರಿತು ಪತ್ರ ಬರೆಯುವುದಾಗಿ ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News