×
Ad

ಬರದ ಬರೆ, ಬಿಸಿಲ ಬೇಗೆ- ನೀರಿಗೆ ಹೋದ 12ರ ಬಾಲಕಿ ಹೃದಯಾಘಾತಕ್ಕೆ ಬಲಿ

Update: 2016-04-20 08:52 IST

ಬೀಡ್ (ಮಹಾರಾಷ್ಟ್ರ): ಅದು ನೆತ್ತಿ ಸುಡುವ ಬಿಸಿಲು. 12ರ ಬಾಲಕಿ ಮನೆಯಿಂದ ಸುಮಾರು 500 ಮೀಟರ್ ದೂರದಲ್ಲಿರುವ ಪಂಪ್‌ನಿಂದ ನೀರು ತರಲು ಐದು ಬಾರಿ ಹೋಗಿ ಬಂದಿದ್ದಳು. ಕೆಲ ದಿನಗಳ ಕಾಲ ಭೇದಿಯಿಂದ ಸುಸ್ತಾಗಿದ್ದಳು. ಆದರೆ ಕುಟುಂಬಕ್ಕೆ ಆಕೆಯ ನೆರವು ಅನಿವಾರ್ಯವಾಗಿತ್ತು. ಐದನೇ ಬಾರಿ ನೀರಿಗೆ ಹೋಗುವಾಗ ಬಾಲಕಿ ಕುಸಿದು ಬಿದ್ದಳು.
ಬೀಡ್‌ನಲ್ಲಿ ವೈದ್ಯರು ಆಕೆಗೆ ಚಿಕಿತ್ಸೆ ನೀಡಲು ಮುಂದಾದ ವೈದ್ಯರು ಆಕೆ ಹೃದಯಾಘಾತದಿಂದ ಮತ್ತು ನೀರಿನ ಅಂಶದ ಕೊರತೆಯಿಂದಾಗಿ ಮೃತಪಟ್ಟಿರುವುದಾಗಿ ಘೋಷಿಸಿದರು. ಮರಾಠವಾಡ ಪ್ರದೇಶದ ಇತರ ಐದು ಬರಪೀಡಿತ ಜಿಲ್ಲೆಗಳಂತೆ ಬೀಡ್ ಕೂಡಾ ಸತತ ಮೂರು ವರ್ಷಗಳ ಭೀಕರ ಬರದಿಂದ ಕಂಗೆಟ್ಟಿದೆ.

ಬೀಡ್ ಪ್ರದೇಶದ ಕನಿಷ್ಠ ಉಷ್ಣಾಂಶ 38 ಡಿಗ್ರಿ ಸೆಲ್ಸಿಯಸ್ ಹಾಗೂ ಗರಿಷ್ಠ ಉಷ್ಣಾಂಶ 42 ಡಿಗ್ರಿ. "ಎಲ್ಲೆಡೆ ನೀರಿನ ಕೊರತೆ ವ್ಯಾಪಕವಾಗಿದೆ. ನೀರು ತರಲು ಹೋಗಿದ್ದ ಆಕೆ ತಲೆ ಸುತ್ತುಬಂದು ಅಲ್ಲೇ ಕುಸಿದು ಬಿದ್ದಳು" ಎಂದು ಯೋಗಿತಾ ಮಾವ ಈಶ್ವರ್‌ದೇಸಾಯಿ ವಿವರಿಸಿದರು.

ದೇಶಾದ್ಯಂತ ಉಷ್ಣಗಾಳಿ ಈಗಾಗಲೇ 110 ಮಂದಿಯನ್ನು ಬಲಿಪಡೆದಿದೆ. ಕಳೆದ ಮೂರು ವಾರಗಳಲ್ಲಿ ಒಡಿಶಾದಲ್ಲಿ 45 ಮಂದಿಯನ್ನು ಹಾಗೂ ತೆಲಂಗಾಣದಲ್ಲಿ 35 ಮಂದಿಯನ್ನು ಬಲಿಪಡೆದಿದೆ. ಮರಾಠವಾಡ ಸೇರಿದಂತೆ ದೇಶಾದ್ಯಂತ ಮುಂದಿನ ಮುಂಗಾರಿನಲ್ಲಿ ಸರಾಸರಿಗಿಂತ ಅಧಿಕ ಮಳೆಯಾಗುವ ಸಾಧ್ಯತೆಯನ್ನು ಹವಾಮಾನ ಇಲಾಖೆ ಅಂದಾಜಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News