ತನ್ನ 7 ತಿಂಗಳ ಮಗುವಿನ ಮೇಲೆ ಅತ್ಯಾಚಾರ ಮಾಡಿದವನ ಕೈಗಳನ್ನೇ ಕಡಿದು ಹಾಕಿದ ಅಪ್ಪ
ಭಟಿಂಡಾ :ತನ್ನ ಏಳು ತಿಂಗಳಮಗುವಿನ ಮೇಲೆ ಅತ್ಯಾಚಾರಗೈದ 17 ವರ್ಷದ ಯುವಕನೊಬ್ಬನ ಕೈಗಳನ್ನೇ ಅಪ್ಪನೊಬ್ಬ ಕಡಿದ ಘಟನೆ ಭಟಿಂಡಾ ಜಿಲ್ಲೆಯಿಂದ ಮಂಗಳವಾರ ವರದಿಯಾಗಿದೆ.
ಕೈಕಡಿತಕ್ಕೊಳಗಾಗಿ ಈಗ ಆಸ್ಪತ್ರೆಯಲ್ಲಿರುವ ಯುವಕನನ್ನು ಪರ್ಮಿಂದರ್ ಸಿಂಗ್ ಹಾಗೂ ಮಗುವಿನ ತಂದೆ ಪಮ್ಮ ಸಿಂಗ್ಇಬ್ಬರೂ ಕೊಟ್ಲಿ ಅಬ್ಲು ಗ್ರಾಮದವರಾಗಿದ್ದಾರೆ. ಪರ್ಮಿಂದರ್ಮಗುವಿನ ಮೇಲೆ ಎಪ್ರಿಲ್ 2014ರಳ್ಲಿ ಅತ್ಯಾಚಾರವೆಸಗಿದ್ದುಅವರಿಬ್ಬರೂ ಈ ಪ್ರಕರಣದ ಸಂಬಂಧ ಭಟಿಂಡಾ ಜಿಲ್ಲಾ ನ್ಯಾಯಾಲಯಕ್ಕೆ ವಿಚಾರಣೆಗೆಂದು ಮಂಗಳವಾರ ಬಂದಿದ್ದರು.
ಕೋರ್ಟ್ ವಿಚಾರಣೆ ಮುಗಿದ ನಂತರಈ ಪ್ರಕರಣದಕಲ್ಲಿ ರಾಜಿ ಸಂಧಾನ ಮಾಡುವ ಆಮಿಷ ತೋರಿಸಿ ಪಮ್ಮ ಪರ್ಮಿಂದರ್‌ನನ್ನು ತನ್ನ ಬೈಕಿನಲ್ಲಿ ಗ್ರಾಮಕ್ಕೆ ತೆರಳುವಂತೆ ತಿಳಿಸಿದನು.
ಆದರೆ ಅವರು ಝುಂಬಾ ಗ್ರಾಮ ಸಮೀಪಿಸಿದಂತೆ ಪಮ್ಮ ಯುವಕನನ್ನು ಮರವೊಂದಕ್ಕೆ ಕಟ್ಟಿ ಹಾಕಿ ಆತನ ಮೇಲೆ ಹಲ್ಲೆಗೈದು ಆತನ ಎರಡೂ ಕೈಗಳನ್ನು ಕಡಿದು ಬಿಟ್ಟನೆಂದು ಎಸ್ಪಿ ಬಿಕ್ರಮ್ ಜಿತ್ ಸಿಂಗ್ ತಿಳಿಸಿದ್ದಾರೆ.
ನಂತರ ಕೆಲ ಗ್ರಾಮಸ್ಥರು ಪರ್ಮಿಂದರ್ ನನ್ನು ಭಟಿಂಡಾ ಸಿವಿಲ್ ಆಸ್ಪತ್ರೆಗೆ ಸೇರಿಸಿದ್ದು ಆತನ ಸ್ಥಿತಿ ಚಿಂತಾಜನಕವಾಗಿದೆಯೆಂದು ಹೇಳಲಾಗಿದೆ.
ಘಟನೆಯ ನಂತರ ಆರೋಪಿ ಪಮ್ಮ ಸಿಂಗ್ ತಲೆಮರೆಸಿಕೊಂಡಿದ್ದಾನೆಂದು ಪೊಲೀಸರು ತಿಳಿಸಿದ್ದಾರೆ.