×
Ad

ತ್ರಂಬಕೇಶ್ವರ ದೇವಾಲಯದೊಳಗೆ ಪ್ರವೇಶಿಸಲು ಮಹಿಳೆಯರಿಗೆ ಅನುಮತಿ

Update: 2016-04-21 23:25 IST

ನಾಸಿಕ್, ಎ.21: ಮಹತ್ವದ ಸಾಮಾಜಿಕ ಬದಲಾವಣೆಯೊಂದರ ಸೂಚನೆಯಾಗಿ, ದ್ವಾದಶ ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ತ್ರಂಬಕೇಶ್ವರ ದೇವಾಲಯದೊಳಗೆ ಪ್ರವೇಶಿಸಲು ಮಹಿಳೆಯರಿಗಿಂದು ಅವಕಾಶ ನೀಡಲಾಗಿದೆ.

ವನಿತಾ ಗುತ್ತೆ ಎಂಬವರ ನೇತೃತ್ವದ ಸ್ವರಾಜ್ಯ ಸಂಘಟನಾ ಗುಂಪಿನ ಮೂವರು ಮಹಿಳೆಯರಿಗೆ ಬಿಗಿ ಭದ್ರತೆಯ ನಡುವೆ ದೇವಾಲಯದೊಳಗೆ ಪ್ರವೇಶಿಸಲು ಅನುಮತಿಸಲಾಯಿತು.
ಮಹಿಳೆಯರಿಗೆ ದೇವಾಲಯ ಪ್ರವೇಶದ ಅಭಿಯಾನವನ್ನು ಜನವರಿಯಲ್ಲಿ ಆರಂಭಿಸಿದ್ದ ಭೂಮತಾ ರಣರಾಗಿಣಿ ಬ್ರಿಗೇಡ್‌ನ ಅಧ್ಯಕ್ಷೆ ದೇಸಾಯಿ ಈ ಬೆಳವಣಿಗೆಯನ್ನು ಸ್ವಾಗತಿಸಿದ್ದು, ತಾನು ಶುಕ್ರವಾರ ದೇವಾಲಯವನ್ನು ಸಂದರ್ಶಿಸಲಿದ್ದೇನೆಂದು ಘೋಷಿಸಿದ್ದಾರೆ.
ಎ.8ರಂದು ಅಹ್ಮದ್‌ನಗರ ಜಿಲ್ಲೆಯ ಶನಿಶಿಂಗಣಾಪುರ ದೇಗುಲದೊಳಗೆ ಮಹಿಳೆಯರ ಪ್ರವೇಶಕ್ಕೆ ಅನುಮತಿ ನೀಡಿದ 13 ದಿನಗಳ ಬಳಿಕ ಈ ಮಹತ್ವದ ಬೆಳವಣಿಗೆ ನಡೆದಿದೆ.
....

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News